ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅಕ್ರಮವಾಗಿಟ್ಟುಕೊಂಡ ಗಂಧದ ಮರದ ತುಂಡುಗಳ ವಶ: ಆರೋಪಿ ಎಸ್ಕೇಪ್

On: February 18, 2024 10:04 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:19-02-2024

ದಾವಣಗೆರೆ: ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ದಾಸ್ತಾನು ಮಾಡಿದ್ದ ಆರೋಪಿಗಳನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.

ಫೆ. 14ರ ಬೆಳಗ್ಗೆ ಬಿಳಿಚೋಡು ಪೊಲೀಸ್ ಠಾಣಾ ಸರಹದ್ದಿನ ಹಳವದಂಡೆ-ಗುತ್ತಿದುರ್ಗ ಗ್ರಾಮದ ಮದ್ಯ ಹಾದು ಹೋಗಿರುವ ರಸ್ತೆಯ ಹತ್ತಿರ ಹಳವದಂಡೆ ಗ್ರಾಮದ ಸ್ವಾಮಿ ಎನ್ನುವವರ ತೋಟದ ಮಿಷನ್ ರೂಮಿನಲ್ಲಿ ಅಕ್ರಮವಾಗಿ ಗಂಧದ ಮರದ ತುಂಡುಗಳನ್ನು ಶೇಖರಣೆ ಮಾಡಿಕೊಂಡಿರುತ್ತಾರೆಂಬ ಮಾಹಿತಿ ಬಂದಿತ್ತು.

ಡಿಸಿಐಬಿ ತಂಡ ಹಾಗೂ ಬಿಳಿಚೋಡು ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಸ್ವಾಮಿ ತಂದೆ ಬಸಪ್ಪ ಎನ್ನುವವರ ತೋಟದ ಮಿಷನ್ ರೂಮಿನಲ್ಲಿ ಗಂಧದ ಮರದ
ತುಂಡುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಅಂದಾಜು 92 ಕೆಜಿ ತೂಕದ ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಂಡಿದೆ.

ಜಗಳೂರು ತಾಲೂಕಿನ ಹಳವದಂಡೆ ಗ್ರಾಮದ ವ್ಯವಸಾಯ ಮಾಡುತ್ತಿದ್ದ ಸ್ವಾಮಿ ತಲೆಮರೆಸಿಕೊಂಡಿದ್ದಾನೆ. ಪತ್ತೆ ಕಾರ್ಯ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ಎಎಸ್ಪಿ ವಿಜಯಕುಮಾರ ಎಂ. ಸಂತೋಷ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಬಿಳಿಚೋಡು ಪೊಲೀಸ್ ಠಾಣೆಯ ಪೊಲೀಸ್
ನಿರೀಕ್ಷಕ ಸೋಮಶೇಖರ ಕೆಂಚರೆಡ್ಡಿ ಹಾಗೂ ಬಿಳಿಚೋಡು ಪೊಲೀಸ್ ಠಾಣೆಯ ಸಿಬ್ಬಂದಿ ತಿಪ್ಪೇಸ್ವಾಮಿ ಎಎಸ್ಐ, ರಾಜುಕೊಡದರ, ಹೆಚ್ ಎಸ್ ಸ್ವಾಮಿ ಹಾಗೂ ಡಿಸಿಐಬಿ ಸಿಬ್ಬಂದಿ ಮಜೀದ್, ರಾಘವೇಂದ್ರ, ಆಂಜನೇಯ, ಬಾಲಾಜಿ, ರಮೇಶ್ ನಾಯ್ಕ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment