ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

PM Vishwakarma ಯೋಜನೆಯಲ್ಲಿ ಸಿಗಲಿದೆ 15,000; ರೇಷನ್ ಕಾರ್ಡ್ ಇದ್ದವರು ಇಂದೇ ಅರ್ಜಿ ಸಲ್ಲಿಸಿ

On: July 1, 2024 6:10 PM
Follow Us:
---Advertisement---

(PM Vishwakarma yojana) ಪಿ‌ಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನಿಮಗೆ ಉಚಿತ 15,000 ರೂ. ದೊರೆಯಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತ ಸರ್ಕಾರವು ರಾಷ್ಟ್ರದಾದ್ಯಂತ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಯೋಜನೆ ಇದಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಯಿಂದ ಸೆಪ್ಟೆಂಬರ್ 17, 2023 ರಂದು ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ಯ ಗೌರವ ಪ್ರಾರಂಭಿಸಿತು, ಈ ಯೋಜನೆಯು ಕಮ್ಮಾರರು, ಕುಂಬಾರರು, ಬಡಗಿಗಳು, ನೇಕಾರರು ಹೀಗೆ 18 ವರ್ಗದ ವ್ಯಾಪಾರಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಅನುಕೂಲವಾಗುವಂತೆ ರೂಪುಗೊಳಿಸಿರುವ ಕಾರ್ಯಕ್ರಮ ಇದಾಗಿದೆ.

ದೇಶದ ಯಾವುದೇ ಭಾಗದಲ್ಲಿರುವ ನಿರುದ್ಯೋಗಿಗಳಿಗೆ ಭಾರತ ಸರ್ಕಾರ ಈ ಯೋಜನೆಯ ಮುಖಾಂತರ ಉಚಿತ 7 ದಿನಗಳ ತರಬೇತಿಯನ್ನು ಅವರ ಉದ್ಯೋಗಕ್ಕೆ ಸಂಭದಿಸಿದ ಉಪಕರಣಗಳನ್ನು ಖರೀದಿ ಮಾಡಲು 15,000 ಸಹಾಯಧವನ್ನು ನೀಡುತ್ತದೆ. ಮತ್ತು 3,00,000ರೂ ಗಳವರೆಗೆ 5% ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಸಹ ಹೊಂದಿರುತ್ತದೆ.

ಹಾಗಾದರೆ ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆ ಹೇಗೆ?, ಬೇಕಾಗುವ ದಾಖಲೆಗಳಾದರೂ ಏನು? ಇಲ್ಲಿದೆ ನೋಡಿ.
ಪಿ‌ಎಂ ವಿಕಾಸ್ ಯೋಜನೆಯ ಅರ್ಹತೆಗಳು ಏನು?:
* ಅರ್ಜಿದಾರರಿಗೆ 18 ವರ್ಷ ತುಂಬಿರಬೇಕು
* ಅರ್ಜಿದಾರರು ರೇಷನ್ ಕಾರ್ಡ್ ನ್ನು ಕಡ್ಡಾಯವಾಗಿ ಹೊಂದಿರಬೇಕು
* ಈ ಮೊದಲು ಸ್ವಯಂ ಉದ್ಯೋಗ ಸಾಲ ಪಡೆದಿರಬಾರದು
* ಅರ್ಜಿದಾರರ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು
* ಕುಟುಂಬಸ್ಥರು ಯಾವುದೇ ಸರ್ಕಾರಿ ಉದ್ಯೋಗದಲ್ಲಿ ಇರಬಾರದು

ಪಿ‌ಎಂ ವಿಕಾಸ್ ಯೋಜನೆಯ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು ಯಾವುದು?:
* ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಭಾವಚಿತ್ರ
* ಮೊಬೈಲ್ ಸಂಖ್ಯೆ
* ಆಧಾರ್ ಕಾರ್ಡ್
* ಉದ್ಯೋಗ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆ ವಿಧಾನ ಹೇಗೆ?:
ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಬಹುದು ಅಥವಾ ಪಿ‌ಎಂ ವಿಕಾಸ್ ಯೋಜನೆಯ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.;

Join WhatsApp

Join Now

Join Telegram

Join Now

Leave a Comment