ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಅಕ್ರಮಗಳ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ತಮ್ಮ ವಿರುದ್ಧ ನಿಂದನೀಯ ಪದ ಬಳಸಿದ ವಿದ್ಯಾರ್ಥಿಗಳನ್ನು ಕ್ಷಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ತಿಳಿಸಿದ್ದಾರೆ. ಆದರೆ, ಈ ಕುರಿತು ಪ್ರಧಾನಿಯವರನ್ನು ನೇರವಾಗಿ ಪ್ರಶ್ನಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ, “ಬರಿ ಇನ್‌ಸ್ಟಾಗ್ರಾಮ್ రీಲ್ಸ್‌ನಲ್ಲಷ್ಟೇ ಕ್ಷಮಿಸುತ್ತೀರಾ ಅಥವಾ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕೇಸ್‌ಗಳನ್ನೂ ವಾಪಸ್ ಪಡೆಯುತ್ತೀರಾ?” ಎಂದು ತಿರುಗೇಟು ನೀಡಿದ್ದಾರೆ.
ಕಳೆದ ಒಂದು ವಾರದಲ್ಲಿ ಐದನೇ ಬಾರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ, ಯುವಜನತೆಯನ್ನು ತಲುಪುವ ಪ್ರಯತ್ನ ಮಾಡಿದ್ದರು. “ಪ್ರತಿಭಟನೆ ವೇಳೆ ಕೆಲವು ಯುವಕರು ನನ್ನ ಹಾಗೂ ನನ್ನ ದಿವಂಗತ ತಾಯಿಯವರ ವಿರುದ್ಧ ಕೀಳುಮಟ್ಟದ ನಿಂದನೀಯ ಪದಗಳನ್ನು ಬಳಸಿದ್ದಾರೆ. ಆದರೆ, ಯುವಕರನ್ನು ಕೋರ್ಟ್, ವಿಚಾರಣೆ ಮತ್ತು ಶಿಕ್ಷೆಗೆ ಒಳಪಡಿಸುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಹಾದಿ ತಪ್ಪಿದ ಯುವಕರನ್ನು ತಿದ್ದಿ ಮುನ್ನಡೆಸಬೇಕ ಹೊರತು ಶಿಕ್ಷಿಸಬಾರದು, ಆದ್ದರಿಂದ ನಾನು ಅವರನ್ನು ಕ್ಷಮಿಸುತ್ತೇನೆ” ಎಂದು ಮೋದಿ ವಿಡಿಯೋದಲ್ಲಿ ಹೇಳಿದ್ದರು.
ಈ ಪೋಸ್ಟ್‌ಗೆ ವ್ಯಂಗ್ಯವಾಗಿ ಕಮೆಂಟ್ ಮಾಡಿರುವ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ, “ದೇಶದ ಭವಿಷ್ಯಕ್ಕಿಂತ ನಿಮ್ಮ ಚರ್ಮದ ಬಣ್ಣವೇ ಹೆಚ್ಚು ಹೊಳೆಯುತ್ತಿದೆ” ಎಂದು ಕಾಲೆಳೆದಿದ್ದಾರೆ. ಅಲ್ಲದೆ, ಯೂನಿಯನ್ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ಈ ಬೃಹತ್ ಪ್ರತಿಭಟನೆಯಲ್ಲಿ ಬಂಧಿತರಾದ ಹಾಗೂ ಪ್ರಕರಣ ಎದುರಿಸುತ್ತಿರುವ ವಿದ್ಯಾರ್ಥಿಗಳ ಮೇಲಿನ FIR ವಾಪಸ್ ಪಡೆಯುವಂತೆ ಸಿಜೆಪಿ ಪಟ್ಟು ಹಿಡಿದಿದೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲದ ಅಪ್ರಾಪ್ತರು ಮತ್ತು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲು ಕೆಲವು ರಾಜ್ಯಗಳು ಕ್ರಮ ಕೈಗೊಂಡಿವೆಯಾದರೂ, ಪ್ರಮುಖ ಆರೋಪ ಹೊರೆಸಲಾದ ಪ್ರತಿಭಟನಾಕಾರರ ಮೇಲಿನ ಕೇಸ್‌ಗಳು ಇನ್ನೂ ಮುಂದುವರಿದಿದ್ದು, ಇದು ಸರ್ಕಾರ ಮತ್ತು ಸಿಜೆಪಿ ನಡುವೆ ಹೊಸ ರಾಜಕೀಯ ಸಮರಕ್ಕೆ ಕಾರಣವಾಗಿದೆ.
- Abhijeet Dipke
- CJP
- Cockroach Janta Party
- Dharmendra Pradhan
- Education system news
- FIR withdrawal against students
- Gen Z Protest India
- Jantar Mantar protest
- Modi Instagram video
- Paper leak controversy
- PM Narendra Modi
- Student Protests
- ಅಭಿಜಿತ್ ದೀಪ್ಕೆ
- ಇನ್‌ಸ್ಟಾಗ್ರಾಮ್ ವಿಡಿಯೋ
- ಎಫ್ಐಆರ್ ವಾಪಸ್
- ಕೌಂಟರ್ ಕಾಕ್ರೋಚ್ ಜನತಾ ಪಾರ್ಟಿ
- ಜಂತರ್ ಮಂತರ್ ಪ್ರತಿಭಟನೆ
- ದೆಹಲಿ ಸುದ್ದಿ
- ಧರ್ಮೇಂದ್ರ ಪ್ರಧಾನ್
- ನರೇಂದ್ರ ಮೋದಿ
- ಪ್ರಶ್ನೆಪತ್ರಿಕೆ ಸೋರಿಕೆ
- ವಿದ್ಯಾರ್ಥಿ ಪ್ರತಿಭಟನೆ
- ಶಿಕ್ಷಣ ವ್ಯವಸ್ಥೆ
- ಸಿಜೆಪಿ





Leave a comment