SUDDIKSHANA KANNADA NEWS/ DAVANAGERE/ DATE:25-03-2025
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ದಿಲ್ಲದೇ ಲವ್ ಜಿಹಾದ್ ನಡೆಯುತ್ತಿದೆಯಾ? ಎಂಬ ಅನುಮಾನ ಕಾಡಲಾರಂಭಿಸಿದೆ. ಯಾಕೆಂದರೆ ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಪ್ರೀತಿ ಬಲೆಗೆ ಬೀಳಿಸಿಕೊಂಡು
ಮತಾಂತರ ಮಾಡುವ ಹುನ್ನಾರ ಮೊದಲಿನಿಂದಲೂ ನಡೆದುಕೊಂಡೇ ಬರುತ್ತಿದೆ.
ಆದ್ರೆ, ಈಗ ಮತ್ತೊಂದು ಲವ್ ಕಹಾನಿ ಈ ಪ್ರಶ್ನೆ ಹುಟ್ಟು ಹಾಕಿದೆ. ಫೈಜಲ್ ಕೋಟೆಕಾರ್ ಎಂಬಾತ ‘ಬಾಂಬೆ ಸ್ವಾಮಿಲ್’ ಎಂಬ ಮರದ ಮಿಲ್ ನಡೆಸುವ ಉದ್ಯಮಿ. ಈತನೊಂದಿಗೆ ಸಲುಗೆಯಿಂದಿರುವ ದೆಹಲಿ ಮೂಲದ ಯುವತಿ ಸರಿತಾ (ಹೆಸರು
ಬದಲಿಸಲಾಗಿದೆ) ಮೂಲತಃ ದೆಹಲಿಯವಳು.
ಈಕೆ ಮಂಗಳೂರಿನ ಕೆ. ಎಂ. ಸಿ ಯಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದ ಸಂದರ್ಭದಲ್ಲಿ ಈತನ ಬಲೆಗೆ ಬಿದ್ದಿದ್ದಾಳೆ. ಫೈಜಲ್ ಗೆ ಈ ಹಿಂದೆ ಮದುವೆಯಾಗಿದ್ದು, ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಇನ್ನೊಂದು ಹಿಂದೂ ಯುವತಿಯ ಜೊತೆ ಸಂಬಂಧ ಹೊಂದಿದ್ದಾನೆ.
ಲವ್ ಜಿಹಾದ್ ನ ಬಗ್ಗೆ ಹಿಂದೂ ಸಂಘಟನೆಗಳಿಂದ ಆಗಾಗ್ಗೆ ನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ತಕ್ಷಣವೇ ತನಿಖೆ ನಡೆಸಿ ಜಿಲ್ಲೆಯಲ್ಲಿ ನಡೆಯಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬೇಕಾಗಿದೆ. ಈ ಕೂಡಲೇ ಆ ಯುವತಿಯನ್ನು ಗುರುತಿಸಿ ಆಕೆ ಪೋಷಕರಿಗೆ ಮಾಹಿತಿ ನೀಡುವಂತೆ ಹಿಂದೂ ಪರ ಸಂಘಟನೆಗಳು ಮನವಿ ಮಾಡಿವೆ.
ಈ ಹಿಂದೆ 2013 ರಲ್ಲಿ ಮಂಗಳೂರಿನಲ್ಲಿ ಇದೇ ರೀತಿ ವೈದ್ಯೆ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ವಿಡಿಯೋ ಮಾಡಿ ಬೆದರಿಕೆ ಒಡ್ಡಿದ ಆತಂಕಕಾರಿ ಕೋಮು ಘರ್ಷಣೆಗೆ ಎಡೆಮಾಡಿಕೊಡುವ ಘಟನೆಗಳು ಕೂಡಾ ನಡೆದಿದ್ದು, ಸದ್ಯ ಬೂದಿಮುಚ್ಚಿದ ಕೆಂಡದಂತಿದ್ದರೂ ಪ್ರಸ್ತುತ ತಕ್ಕಮಟ್ಟಿಗೆ ಶಾಂತಿಯುತವಾಗಿ ಕಾಣುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಉದ್ಯಮಿಯ ‘ಲವ್ ಜಿಹಾದ್’ ಇನ್ನೊಂದು ಗಲಭೆಗೆ ಕಾರಣವಾಗದಂತೆ ಲೀಸ್ ಕಮಿಷನರ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಈ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಇದರ ಬಗ್ಗೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಸಂಘಟನೆಗಳು ಮನವಿ ಮಾಡಿವೆ. ಇನ್ನು ಯುವತಿಯು ಉದ್ಯಮಿ ಜೊತೆ ಇರುವ ಫೋಟೋಗಳು ವೈರಲ್ ಆಗಿವೆ.