HDFC ಬ್ಯಾಂಕ್ ಆನ್ಲೈನ್ ಸರ್ವೀಸ್ ಲಿಂಕ್ ಹೆಸರಿನಲ್ಲಿ ಅಪರಿಚಿತ ವಾಟ್ಸ್ಆ್ಯಪ್ ಸಂಖ್ಯೆಯಿಂದ ಬಂದಿದ್ದ ಸಂದೇಶವನ್ನು ಪ್ರಾಧ್ಯಾಪಕ ಕ್ಲಿಕ್ ಮಾಡಿದ್ದಾರೆ.
ಆಗ ಬ್ಲಾಕ್ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿದರೆ ಶೇ 5-6 ಲಾಭ ಪಡೆಯಬಹುದು ಎಂಬ ಸಂದೇಶ ಕಾಣಿಸಿಕೊಂಡಿದೆ. ನಂತರ ಪ್ರಾಧ್ಯಾಪಕರು, ವಂಚಕರು ಕಳಿಸಿದ ಫಾರಂ ಭರ್ತಿ ಮಾಡಿ ತಮ್ಮ ಬ್ಯಾಂಕ್ ಖಾತೆ ವಿವರ ಹಂಚಿಕೊಂಡಿದ್ದಾರೆ. ನಂತರ ವಂಚಕರ ಸೂಚನೆ ಮೇರೆಗೆ ವಿವಿಧ ಬ್ಯಾಂಕ್ ಖಾತೆಗೆ ಜುಲೈ 4ರಿಂದ ಆಗಸ್ಟ್ 6ರವರೆಗೆ ಒಟ್ಟು ₹12,69,101 ಹಣವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಹೆಚ್ಚು ಹೂಡಿಕೆ ಮಾಡಿದಷ್ಟು ಹೆಚ್ಚು ಕಮಿಷನ್ ಸಿಗಲಿದೆ ಎಂದು ಆಸೆ ತೋರಿಸಿದ ವಂಚಕರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಮನಗರ ಸಿಇಎನ್ ಪೊಲೀಸರು, ಕಮಿಷನ್ ಹಣವಿರಲಿ, ಅಸಲು ಹಣವೂ ಹಿಂದಿರುಗಿಲ್ಲ. ಆಗ ಪ್ರಾಧ್ಯಾಪಕರಿಗೆ ತಾನು ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ನಂತರ, ಠಾಣೆಗೆ ಬಂದು ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.