ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಘಾತ: ಕುಸ್ತಿ ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹ

On: August 7, 2024 4:09 PM
Follow Us:
---Advertisement---

ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕುಸ್ತಿ ಫೈನಲ್ ಸ್ಪರ್ಧೆಯಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದು, ಭಾರತಕ್ಕೆ ದೊಡ್ಡ ಆಘಾತ ಎದುರಾಗಿದೆ. ಈ ಮೂಲಕ ವಿನೇಶ್ ಫೋಗಟ್ ಅವರಿಗೆ ಒಲಿಂಪಿಕ್ಸ್​ನ ಚೊಚ್ಚಲ ಪದಕ ಕೈ ತಪ್ಪಿದೆ.

ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್ ತಲುಪಿದ್ದರು. ಆದರೆ ವಿನೇಶ್ ಫೋಗಟ್ ಅವರು ಹೆಚ್ಚಿನ ತೂಕ ಹೊಂದಿದ ಹಿನ್ನೆಲೆ ಫೈನಲ್‌ನಿಂದ ಅನರ್ಹಗೊಂಡಿದ್ದಾರೆ.

ವಿನೇಶ್ ಫೋಗಟ್ ಅವರು 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಇದರಲ್ಲಿ 100 ಗ್ರಾಂ ಹೆಚ್ಚು ತೂಕ ಹೊಂದಲು ಅವಕಾಶವಿದೆ. ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ಅವರ ತೂಕವು ನಿಗದಿತ ಮಿತಿಗಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ ವಿನೇಶ್ ಅವರ ದೇಹದ ತೂಕ 150 ಗ್ರಾಂ ಹೆಚ್ಚಿದೆ. ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಅನರ್ಹಗೊಂಡಿರುವುದಾಗಿ ವರದಿಯಾಗಿದೆ.

 

Join WhatsApp

Join Now

Join Telegram

Join Now

Leave a Comment