Home ಕ್ರೈಂ ನ್ಯೂಸ್ ಪಾಕಿಸ್ತಾನದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ: ₹380 ತಲುಪಿದ ಪೆಟ್ರೋಲ್, ಶೇ. 300 ರಷ್ಟು ಹೆಚ್ಚಿದ ಹಣದುಬ್ಬರ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರುವಾಣಿಜ್ಯ

ಪಾಕಿಸ್ತಾನದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ: ₹380 ತಲುಪಿದ ಪೆಟ್ರೋಲ್, ಶೇ. 300 ರಷ್ಟು ಹೆಚ್ಚಿದ ಹಣದುಬ್ಬರ!

Share
ಪಾಕಿಸ್ತಾನ
Share

ಇಸ್ಲಾಮಾಬಾದ್: ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಜನಸಾಮಾನ್ಯರ ಬದುಕು ದುಸ್ತರಗೊಂಡಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರುಪೇರಿನಿಂದಾಗಿ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆಯ ₹450ಕ್ಕೆ ತಲುಪಿತ್ತು. ತೀವ್ರ ಜನಾಗ್ರಹದ ಹಿನ್ನೆಲೆಯಲ್ಲಿ ಸರ್ಕಾರ ₹22 ಕಡಿತಗೊಳಿಸಿದ ನಂತರವೂ ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹380 ರ ಆಸುಪಾಸಿನಲ್ಲಿದೆ.

ದೇಶದಲ್ಲಿ ಹಣದುಬ್ಬರ ಪ್ರಮಾಣ ಬರೋಬ್ಬರಿ ಶೇ. 300 ರಷ್ಟು ಹೆಚ್ಚಾಗಿದ್ದು, ದಿನಬಳಕೆ ವಸ್ತುಗಳು ಮತ್ತು ಸಾರ್ವಜನಿಕ ಸಾರಿಗೆ ವೆಚ್ಚ ಗಗನಕ್ಕೇರಿದೆ. “ನಮ್ಮ ಸಂಬಳ ಅಷ್ಟೇ ಇದೆ, ಆದರೆ ಖರ್ಚುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಬದುಕು ಸಾಗಿಸುವುದೇ ಅಸಾಧ್ಯವಾಗಿದೆ” ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಇಂಧನ ದರ ಏರಿಕೆಯಿಂದಾಗಿ ಜನರು ತಮ್ಮ ಕಾರು, ಬೈಕ್‌ಗಳನ್ನು ರಸ್ತೆಗಿಳಿಸದೆ ಮನೆಗಳಲ್ಲೇ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಷೇರು ಮಾರುಕಟ್ಟೆ ಪಾತಾಳಕ್ಕೆ:

ಯುದ್ಧದ ಬೆನ್ನಲ್ಲೇ ಪಾಕಿಸ್ತಾನದ ಕೆಎಸ್‌ಇ-100 (KSE-100) ಸೂಚ್ಯಂಕವು ಜstandard ಜನವರಿಯ ಗರಿಷ್ಠ ಮಟ್ಟದಿಂದ ಶೇ. 21 ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ವಿದೇಶಿ ಹೂಡಿಕೆದಾರರು ಒಂದೇ ಬಾರಿಗೆ 383 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಷೇರುಗಳನ್ನು ಹಿಂಪಡೆದಿದ್ದಾರೆ. ಜಾಗತಿಕ ರೇಟಿಂಗ್ ಏಜೆನ್ಸಿಗಳು ಪಾಕಿಸ್ತಾನದ ಜಿಡಿಪಿ (GDP) ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 2.5 ರಿಂದ 3.0 ಕ್ಕೆ ಇಳಿಸಲು ಮುಂದಾಗಿವೆ. ಈ ಆರ್ಥಿಕ ಸಂಕಷ್ಟದಿಂದ ಪಾರಾಗಲು ಪಾಕಿಸ್ತಾನ ಸರ್ಕಾರವು ಅಮೆರಿಕದ ರಾಜತಾಂತ್ರಿಕರ ಬೆಂಬಲ ಕೋರಿ ವಾಷಿಂಗ್ಟನ್ ಮೂಲದ ಸಂಸ್ಥೆಯೊಂದಿಗೆ $1.2 ಮಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿದೆ.

Share

Leave a comment

Leave a Reply

Your email address will not be published. Required fields are marked *