Home ಉದ್ಯೋಗ ವಾರ್ತೆ ಒರಾಕಲ್‌ನಲ್ಲಿ ಮತ್ತೆ ಭಾರಿ ಉದ್ಯೋಗ ಕಡಿತ: ಬೆಳಗಿನ ಜಾವ 6 ಗಂಟೆಗೆ ಮೇಲ್ ಕಳಿಸಿ ನೌಕರರ ವಜಾ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಒರಾಕಲ್‌ನಲ್ಲಿ ಮತ್ತೆ ಭಾರಿ ಉದ್ಯೋಗ ಕಡಿತ: ಬೆಳಗಿನ ಜಾವ 6 ಗಂಟೆಗೆ ಮೇಲ್ ಕಳಿಸಿ ನೌಕರರ ವಜಾ!

Share
ಒರಾಕಲ್‌
Share

ಬೆಂಗಳೂರು / ನ್ಯೂಯಾರ್ಕ್: ಜಾಗತಿಕ ತಂತ್ರಜ್ಞಾನ ದೈತ್ಯ ಒರಾಕಲ್ (Oracle) ಸಂಸ್ಥೆಯು ತನ್ನ ವೆಚ್ಚ ಕಡಿತದ ಭಾಗವಾಗಿ ಮತ್ತೊಂದು ಸುತ್ತಿನ ಭಾರಿ ಉದ್ಯೋಗ ಕಡಿತವನ್ನು ಆರಂಭಿಸಿದೆ. ಸಂಸ್ಥೆಯು ಬೆಳಗಿನ ಜಾವ 6 ಗಂಟೆಗೆ ಇ-ಮೇಲ್ ಮೂಲಕ ಹಲವು ಉದ್ಯೋಗಿಗಳಿಗೆ ಲೇಆಫ್ ನೋಟಿಸ್ ರವಾನಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಹುದ್ದೆಗಳನ್ನು ರದ್ದುಗೊಳಿಸಿದೆ.

ಕೃತಕ ಬುದ್ಧಿಮತ್ತೆ (AI) ಹಾಗೂ ಕ್ಲೌಡ್ ಸೇವೆಗಳ ಬೇಡಿಕೆಯನ್ನು ಪೂರೈಸಲು ಡೇಟಾ ಸೆಂಟರ್‌ಗಳ ನಿರ್ಮಾಣಕ್ಕಾಗಿ ಒರಾಕಲ್ ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಹೂಡಿಕೆ ಮಾಡುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲೇ ಕಂಪನಿಯು $28.5 ಬಿಲಿಯನ್ ಬಂಡವಾಳ ಹೂಡಿಕೆ ಮಾಡಿದ್ದು, ವರ್ಷಾಂತ್ಯಕ್ಕೆ $90 ರಿಂದ $95 ಬಿಲಿಯನ್‌ವರೆಗೆ ಹೂಡಿಕೆ ಮಾಡುವ ಗುರಿ ಹೊಂದಿದೆ.

ಆದರೆ ಈ ಭಾರಿ ಮಟ್ಟದ ಎಐ ವಿಸ್ತರಣೆಯಿಂದಾಗಿ ಕಂಪನಿಯ ಉಚಿತ ನಗದು ಹರಿವು (Free Cash Flow) ಮೈನಸ್ $5.4 ಬಿಲಿಯನ್‌ಗೆ ಕುಸಿದಿದೆ. ಹೀಗಾಗಿ ಆಡಳಿತ ವೆಚ್ಚ ಹಾಗೂ ನೌಕರರ ವೇತನದ ಹೊರೆ ತಗ್ಗಿಸಲು ಕಂಪನಿಯು ಈ ಕಠಿಣ ನಿರ್ಧಾರ ಕೈಗೊಂಡಿದೆ.

21,000ಕ್ಕೂ ಹೆಚ್ಚು ಸಿಬ್ಬಂದಿ ಈಗಾಗಲೇ ಔಟ್:

ಕಳೆದ ಹಣಕಾಸು ವರ್ಷದಲ್ಲೇ ಒರಾಕಲ್ ಸಂಸ್ಥೆಯು ಸುಮಾರು 21,000 ಉದ್ಯೋಗಿಗಳನ್ನು (ಶೇ. 13 ರಷ್ಟು ಸಿಬ್ಬಂದಿ) ವಜಾಗೊಳಿಸಿತ್ತು. ಪ್ರಸ್ತುತ ಆರಂಭವಾಗಿರುವ ಹೊಸ ಲೇಆಫ್‌ನಲ್ಲಿ ಎಷ್ಟು ನೌಕರರು ಕೆಲಸ ಕಳೆದುಕೊಂಡಿದ್ದಾರೆ ಎಂಬ ನಿಖರ ಸಂಖ್ಯೆಯನ್ನು ಕಂಪನಿ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಭಾರತೀಯ ಟೆಕ್ಕಿಗಳು ಸೇರಿದಂತೆ ಲಿಂಕ್ಡ್‌ಇನ್, ರೆಡ್ಡಿಟ್ ಹಾಗೂ ಬ್ಲೈಂಡ್ ವೇದಿಕೆಗಳಲ್ಲಿ ಹಲವು ಸಂತ್ರಸ್ತ ಉದ್ಯೋಗಿಗಳು ತಮ್ಮ ಕೆಲಸ ನಷ್ಟವಾಗಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಕಂಪನಿಯು ಆಂತರಿಕ ಪುನರ್ರಚನೆ ಮತ್ತು ಎಐ ಉಪಕರಣಗಳ ಅಳವಡಿಕೆಯಿಂದ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವುದಾಗಿ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles