ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ಪವನ ಶಕ್ತಿಗೆ ದಾರಿ” ಎಂಬ ಶೀರ್ಷಿಕೆಯಡಿ ಒನ್ ಡೇ ಟ್ರೈನಿಂಗ್!

On: March 4, 2025 9:38 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:05-03-2025

ದಾವಣಗೆರೆ: ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಹಾಗೂ ರೊಬೊಟಿಕ್ಸ್ ಮತ್ತು ಆಟೊಮೇಷನ್ ವಿಭಾಗದ ವತಿಯಿಂದ ಜಿಎಂ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಸಿಐಜಿಎಸ್‌ಆರ್‌ಡಿ) ಸಹಯೋಗದಲ್ಲಿ “ಪವನ ಶಕ್ತಿಗೆ ದಾರಿ” ಎಂಬ ಶೀರ್ಷಿಕೆಯಲ್ಲಿ ಪವನ ವಿದ್ಯುತ್ ಉತ್ಪಾದನೆಯ ವಿಷಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜಿಎಂಐಟಿ ಕಾಲೇಜಿನ ಮೆಕ್ಯಾನಿಕಲ್ ಸೆಮಿನಾರ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾದ ಸುಜ್ಲಾನ್ ಗ್ಲೋಬಲ್ ಸರ್ವಿಸ್ ಲಿಮಿಟೆಡ್ ನ ಓಎಂಎಸ್ ಕರ್ನಾಟಕ ರಾಜ್ಯ ಮುಖ್ಯಸ್ಥರಾದ ಜನರ್ ಕೆ.ಎಸ್, ಕರ್ನಾಟಕ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪ್ರಾದೇಶಿಕ ಪ್ರತಿಭಾ ಸ್ವಾಧೀನ ಮುಖ್ಯಸ್ಥರಾದ ಅರಿಜೀತ್ ಬರ್ಧನ್, ಕರ್ನಾಟಕ ಜ್ಞಾನ ಕೇಂದ್ರದ ಉಸ್ತುವಾರಿಗಳಾದ ಡಿಜೆಆರ್ ಪ್ರಸಾದ್, ಎಲೆಕ್ಟ್ರಿಕಲ್‌ ತಂತ್ರಜ್ಞಾನ ಉಸ್ತುವಾರಿಗಳಾದ ಕೇಶವ ಮೂರ್ತಿ, ಎಲ್ ಅಂಡ್ ಡಿ ಎಲೆಕ್ಟ್ರಿಕಲ್ ಇಂಚಾರ್ಜ್ ನೇತಾಜಿ ಕೆ. ಇವರುಗಳು ಪವನ ವಿದ್ಯುತ್ ಉತ್ಪಾದನೆಯ ಮೂಲಭೂತ ಅಂಶಗಳು ಮತ್ತು ಉದ್ಯಮದಲ್ಲಿನ ಇತ್ತೀಚಿನ ಪ್ರವೃತ್ತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ವಿವರಣೆ ನೀಡಿದರು.

ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ.ಬಿ ಅವರು, ಈ ವಿಷಯದ ಬಗ್ಗೆ ನೀಡುತ್ತಿರುವ ತರಬೇತಿಯ ಸದಪಯೋಗಪಡಿಸಿಕೊಂಡು ಜ್ಞಾನ ವೃದ್ಧಿಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಶುಭ
ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಎಂ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕರು, ರೊಬೊಟಿಕ್ಸ್ ಮತ್ತು ಆಟೊಮೇಷನ್ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಕುಮಾರ್ ಡಿ.ಜಿ, ಕಾರ್ಯಕ್ರಮದ ಸಂಚಾಲಕರಾದ ಡಾ.
ಯು.ಎಂ. ನೇತ್ರಾವತಿ, ಸಂಯೋಜಕರಾದ ಅನಿಲ್ ಕುಮಾರ್ ಟಿಆರ್ ಬಿ ಸೇರಿದಂತೆ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಹಾಗೂ ರೊಬೊಟಿಕ್ಸ್ ಮತ್ತು ಆಟೊಮೇಷನ್ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment