Home ಕ್ರೈಂ ನ್ಯೂಸ್ ಚೀನಾ ಸ್ಪೈ ಜೊತೆ ಎನ್‌ವಿಡಿಯಾ ಸಿಇಒ ಜನ್ಸನ್ ಹ್ಯಾಂಗ್ ರಾಸಲೀಲೆ: ಮಗಳೇ ತೆಗೆದಳು ವಿಡಿಯೋ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಚೀನಾ ಸ್ಪೈ ಜೊತೆ ಎನ್‌ವಿಡಿಯಾ ಸಿಇಒ ಜನ್ಸನ್ ಹ್ಯಾಂಗ್ ರಾಸಲೀಲೆ: ಮಗಳೇ ತೆಗೆದಳು ವಿಡಿಯೋ!

Share
ಜನ್ಸನ್ ಹ್ಯಾಂಗ್
Share

ತೈಪೇ/ನ್ಯೂಯಾರ್ಕ್: ಟೆಕ್ ದೈತ್ಯ ಎನ್‌ವಿಡಿಯಾ (Nvidia) ಕಂಪನಿಯ ಸಿಇಒ ಜನ್ಸನ್ ಹ್ಯಾಂಗ್ ಅವರ ವೈಯಕ್ತಿಕ ಜೀವನದ ವಿವಾದವೊಂದು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದ ಮಾಡುತ್ತಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:

ಅಮೆರಿಕದ ಗೂಢಚರ್ಯೆ ಸಂಸ್ಥೆಗಳಿಂದ ಚೀನಾ ಏಜೆಂಟ್ ಎಂದು ಶಂಕಿಸಲಾದ ಅಲಿಸ್ ಹ್ಯಾಂಗ್ ಅವರೊಂದಿಗೆ ಜನ್ಸನ್ ಹ್ಯಾಂಗ್ ಆಪ್ತವಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೈವಾನ್‌ನ ರೆಸ್ಟೋರೆಂಟ್‌ನಲ್ಲಿ ನಡೆದ ಈ ಭೋಜನಕೂಟದ ವೇಳೆ ಜನ್ಸನ್ ಹ್ಯಾಂಗ್ ಅವರ ಮಗಳು ಮ್ಯಾಡಿಸನ್ ಹ್ಯಾಂಗ್ ಅವರೇ ಈ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮೋಹಕ ಹಾಗೂ ವೈಯಕ್ತಿಕ ಸಂಬಂಧದ ಈ ಘಟನೆ 2025ರ ಮೇ ತಿಂಗಳಿನಲ್ಲಿ ನಡೆದಿದ್ದು, ರೆಸ್ಟೋರೆಂಟ್‌ನಲ್ಲಿ ಜನ್ಸನ್ ಹ್ಯಾಂಗ್ ತಮ್ಮ ಸಹೋದ್ಯೋಗಿ ಹಾಗೂ ಸಿಂಗಾಪುರ ಮೂಲದ ಮೆಗಾಸಪೀಡ್ ಸಂಸ್ಥೆಯ ಮಾಜಿ ಎಕ್ಸಿಕ್ಯೂಟಿವ್ ಅಲಿಸ್ ಹ್ಯಾಂಗ್ ಅವರ ಸೊಂಟದ ಮೇಲೆ ಕೈಹಾಕಿ ಕೆನ್ನೆಗೆ ಮುತ್ತಿಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ವೇಳೆ ಎನ್‌ವಿಡಿಯಾ ಸಂಸ್ಥೆಯ ಹಿರಿಯ ನಿರ್ದೇಶಕಿಯೂ ಆಗಿರುವ ಮಗಳು ಮ್ಯಾಡಿಸನ್ ಹಾಗೂ ಆಕೆಯ ಭಾವಿ ಪತಿ ನಿಕೋ ಕಾಪ್ರೆಜ್ ಉಪಸ್ಥಿತರಿದ್ದರು. ಕುಟುಂಬ ಸದಸ್ಯರ ಸಮ್ಮುಖದಲ್ಲೇ ಈ ಅನೈತಿಕ ಸಂಬಂಧ ನಡೆದಿರುವುದು ಹಾಗೂ ಮಗಳೇ ಅದನ್ನು ಫೋಟೋ ತೆಗೆದಿರುವುದು ಕುಟುಂಬದ ಒಳಗಿನ ರಹಸ್ಯಗಳನ್ನು ಬಹಿರಂಗಪಡಿಸಿದೆ.

ಅಕ್ರಮ ಸಂಬಂಧ ಒಪ್ಪಿಗೆ: 41 ವರ್ಷಗಳ ದಾಂಪತ್ಯ ಜೀವನದಲ್ಲಿದ್ದ ಜನ್ಸನ್ ಹ್ಯಾಂಗ್, ತಾವು ಪತ್ನಿ ಲೋರಿಗೆ ವಂಚಿಸಿರುವುದಾಗಿ ಎನ್‌ವಿಡಿಯಾ ನೌಕರರಿಗೆ ಇಮೇಲ್ ಮೂಲಕ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಆರ್ಥಿಕ ಕುಸಿತ ಹಾಗೂ ಕೋಟಿ ನಷ್ಟ: ಸಿಇಒ ಅವರ ಈ ಅನೈತಿಕ ಸಂಬಂಧ ಹಾಗೂ ವಿವಾದದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಎನ್‌ವಿಡಿಯಾ ಮೌಲ್ಯ ಕುಸಿದಿದ್ದು, ಕೇವಲ 30 ನಿಮಿಷಗಳಲ್ಲಿ ಜನ್ಸನ್ ಹ್ಯಾಂಗ್ ಬರೋಬ್ಬರಿ 7.4 ಬಿಲಿಯನ್ ಡಾಲರ್ (ಸುಮಾರು ₹62,000 ಕೋಟಿಗೂ ಹೆಚ್ಚು) ಆಸ್ತಿ ಕಳೆದುಕೊಂಡಿದ್ದಾರೆ.

ಚೀನಾ ಗೂಢಚರ್ಯೆ ತನಿಖೆ: ವಿದೇಶಿ ಗೂಢಚರ್ಯೆ ಸಂಸ್ಥೆಗಳು ಸಿಇಒ ಜನ್ಸನ್ ಹ್ಯಾಂಗ್ ಅವರನ್ನು ಟಾರ್ಗೆಟ್ ಮಾಡಿ ತಂತ್ರ ಹೆಣೆದಿವೆಯೇ ಎಂಬ ಬಗ್ಗೆ ಎನ್‌ವಿಡಿಯಾ ಆಂತರಿಕ ತನಿಖೆ ಆರಂಭಿಸಿದೆ.

ಈ ನಡುವೆ ಎನ್‌ವಿಡಿಯಾ ಸಂಸ್ಥೆಯು ಜನ್ಸನ್ ಹ್ಯಾಂಗ್ ಅವರ ನಾಯಕತ್ವದ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಅಮೆರಿಕ ಸರ್ಕಾರ ಹಾಗೂ ಭದ್ರತಾ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಚುರುಕುಗೊಳಿಸಿವೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles