Home ಕ್ರೈಂ ನ್ಯೂಸ್ ಸಹೋದ್ಯೋಗಿಯೊಂದಿಗೆ ರೊಮ್ಯಾನ್ಸ್, ಹೋಟೆಲ್ ವಿಡಿಯೋ ಲೀಕ್ ಮತ್ತು ಚೀನಾ ಗೂಢಚರ್ಯೆ ವಿವಾದ: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಪದಚ್ಯುತಿಗೆ ಸಿದ್ಧತೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಹೋದ್ಯೋಗಿಯೊಂದಿಗೆ ರೊಮ್ಯಾನ್ಸ್, ಹೋಟೆಲ್ ವಿಡಿಯೋ ಲೀಕ್ ಮತ್ತು ಚೀನಾ ಗೂಢಚರ್ಯೆ ವಿವಾದ: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಪದಚ್ಯುತಿಗೆ ಸಿದ್ಧತೆ!

Share
ಎನ್‌ವಿಡಿಯಾ
Share

ಸ್ಯಾನ್ ಜೋಸ್: ವಿಶ್ವದ ಅಗ್ರಗಣ್ಯ ಕೃತಕ ಬುದ್ಧಿಮತ್ತೆ (AI) ಚಿಪ್ ತಯಾರಕ ಸಂಸ್ಥೆ ‘ಎನ್‌ವಿಡಿಯಾ’ (Nvidia) ಸಹ-ಸಂಸ್ಥಾಪಕ ಮತ್ತು ಸಿಇಒ ಜೆನ್ಸನ್ ಹುವಾಂಗ್ (63) ಅವರ ಕುರ್ಚಿಗೆ ಕುತ್ತು ಬಂದಿದೆ.

ಸಂಸ್ಥೆಯ ಹಿರಿಯ ಮಹಿಳಾ ಅಧಿಕಾರಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿರುವ ಗಂಭೀರ ಆರೋಪ ಹಾಗೂ ಚೀನಾದ ಶಂಕಿತ ಗೂಢಚಾರಿಣಿಯೊಂದಿಗಿನ ನಂಟಿನ ವಿವಾದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಹುವಾಂಗ್ ಅವರನ್ನು ಸಿಇಒ ಸ್ಥಾನದಿಂದ ವಜಾಗೊಳಿಸುವ ಕುರಿತು ನಿರ್ಧರಿಸಲು ಎನ್‌ವಿಡಿಯಾ ಆಡಳಿತ ಮಂಡಳಿ ತುರ್ತು ಸಭೆ ಸೇರಿದೆ.

ಚೀನಾಗೆ ಅಕ್ರಮವಾಗಿ ಎನ್‌ವಿಡಿಯಾ ಚಿಪ್‌ಗಳನ್ನು ಸಾಗಿಸಲು ನೆರವಾಗಿದ್ದ ಶಂಕಿತ ಚೀನೀ ಉದ್ಯಮಿ ಆಲಿಸ್ ಹುವಾಂಗ್ ಅವರೊಂದಿಗಿನ ಸಂಬಂಧದಿಂದ ಈ ವಿವಾದ ಆರಂಭವಾಗಿತ್ತು. ಇದರ ಬೆನ್ನಲ್ಲೇ, ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಜೆನ್ಸನ್ ಹುವಾಂಗ್ ಅವರು ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಎನ್‌ವಿಡಿಯಾದ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ (48) ಅವರೊಂದಿಗೂ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕಳೆದ ಮಾರ್ಚ್‌ನಲ್ಲಿ ಸ್ಯಾನ್ ಜೋಸ್‌ನ ಹೋಟೆಲ್ ಒಂದರಲ್ಲಿ ನಡೆದ ಸಮ್ಮೇಳನದ ವೇಳೆ ಇವರಿಬ್ಬರೂ ಆತ್ಮೀಯವಾಗಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ವರದಿಯಾಗಿದೆ.

ತಪ್ಪೊಪ್ಪಿಕೊಂಡ ಸಿಇಒ: ಕಳೆದ ಭಾನುವಾರ ಉದ್ಯೋಗಿಗಳಿಗೆ ಬರೆದ ಆಂತರಿಕ ಪತ್ರದಲ್ಲಿ, ತಾವು ಪತ್ನಿಗೆ ದ್ರೋಹ ಬಗೆದಿರುವುದಾಗಿ ಒಪ್ಪಿಕೊಂಡಿರುವ ಜೆನ್ಸನ್ ಹುವಾಂಗ್, ಇದಕ್ಕೆ ಸಂಪೂರ್ಣ ಹೊಣೆ ಹೊರುವುದಾಗಿ ತಿಳಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹುವಾಂಗ್ ಪದಚ್ಯುತಿಯ ವರದಿಗಳ ಬೆನ್ನಲ್ಲೇ ಎನ್‌ವಿಡಿಯಾ ಷೇರುಗಳು ಶೇ. 8ರಷ್ಟು ಕುಸಿದಿದ್ದು, ಈ ವಾರ ಒಂದರಲ್ಲೇ ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 600 ಬಿಲಿಯನ್ ಡಾಲರ್ ನಷ್ಟವಾಗಿದೆ. ಇದೇ ವೇಳೆ ಪ್ರತಿಸ್ಪರ್ಧಿ ಕಂಪನಿಗಳಾದ ಎಎಂಡಿ (AMD) ಮತ್ತು ಬ್ರಾಡ್‌ಕಾಮ್ ಷೇರುಗಳು ಏರಿಕೆ ಕಂಡಿವೆ.

ತನಿಖೆ ಮತ್ತು ರಾಜಕೀಯ ಬೆಂಬಲ: ವಿದೇಶಿ ಗುಪ್ತಚರ ಸಂಸ್ಥೆಗಳ ಬಲೆಗೆ ಹುವಾಂಗ್ ಬಿದ್ದಿದ್ದಾರೆಯೇ ಎಂಬ ಕುರಿತು ಸ್ವತಂತ್ರ ನಿರ್ದೇಶಕರು ಮತ್ತು ಕಾನೂನು ಸಂಸ್ಥೆ ‘ವಾಚ್ಟೆಲ್ ಲಿಪ್ಟನ್’ (Wachtell Lipton) ತನಿಖೆ ನಡೆಸುತ್ತಿದೆ. ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹುವಾಂಗ್ ಅವರನ್ನು “ಗೌರವಾನ್ವಿತ ವ್ಯಕ್ತಿ” ಎಂದು ಬೆಂಬಲಿಸಿದ್ದರೂ, ಅಮೆರಿಕ ಸಂಸತ್ತಿನ ಸಮಿತಿಯಿಂದ ಅವರಿಗೆ ಸಮನ್ಸ್ ಜಾರಿಯಾಗುವ ಸಾಧ್ಯತೆಯಿದೆ.

ಸುಮಾರು 4 ಟ್ರಿಲಿಯನ್ ಡಾಲರ್ ಮೌಲ್ಯದ ಎನ್‌ವಿಡಿಯಾ ಸಂಸ್ಥೆಯಲ್ಲಿ ಶೇ. 3.6ರಷ್ಟು ಷೇರುಗಳನ್ನು ಹೊಂದಿರುವ ಹುವಾಂಗ್ ಅವರಿಗೆ ತಕ್ಷಣಕ್ಕೆ ಯಾವುದೇ ಸ್ಪಷ್ಟ ಉತ್ತರಾಧಿಕಾರಿ ಇಲ್ಲದಿರುವುದು ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿದೆ. ಸೂಕ್ತ ಉತ್ತರಾಧಿಕಾರಿಯನ್ನು ಹುಡುಕಲು ಆಡಳಿತ ಮಂಡಳಿಯು ಹೊರಗಿನ ಏಜೆನ್ಸಿಯ ನೆರವು ಪಡೆದಿದ್ದು, ಜಾಗತಿಕ ಎಐ (AI) ವಲಯದಲ್ಲಿ ಈ ಬೆಳವಣಿಗೆ ಭಾರಿ ಸಂಚಲನ ಮೂಡಿಸಿದೆ.

Share

Leave a comment

Leave a Reply

Your email address will not be published. Required fields are marked *