Home ಕ್ರೈಂ ನ್ಯೂಸ್ ಬೆಡ್‌ರೂಮ್ ಸ್ಪೈ ಕ್ಯಾಮೆರಾದಲ್ಲಿ ಬಯಲಾಯ್ತು ಪತ್ನಿ ಭಯಾನಕ ಸಂಚು: 18 ಗಂಟೆ ವಿಡಿಯೋ ನೋಡಿ ಪತ್ನಿ ಕೊಂದು ಪತಿ ಆತ್ಮಹತ್ಯೆ, ಇಬ್ಬರು ಮಕ್ಕಳು ಅನಾಥ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬೆಡ್‌ರೂಮ್ ಸ್ಪೈ ಕ್ಯಾಮೆರಾದಲ್ಲಿ ಬಯಲಾಯ್ತು ಪತ್ನಿ ಭಯಾನಕ ಸಂಚು: 18 ಗಂಟೆ ವಿಡಿಯೋ ನೋಡಿ ಪತ್ನಿ ಕೊಂದು ಪತಿ ಆತ್ಮಹತ್ಯೆ, ಇಬ್ಬರು ಮಕ್ಕಳು ಅನಾಥ!

Share
ಪತ್ನಿ
Share

ಇಂದೋರ್ (ಮಧ್ಯಪ್ರದೇಶ): ಮಲಗುವ ಕೋಣೆಯಲ್ಲಿ ಅಳವಡಿಸಿದ್ದ ಮಿನಿ ಸ್ಪೈ ಕ್ಯಾಮೆರಾದ 18 ಗಂಟೆಗಳ ವಿಡಿಯೋ ರೆಕಾರ್ಡಿಂಗ್‌ನಲ್ಲಿ ಪತ್ನಿಯ ಅಕ್ರಮ ಸಂಬಂಧ ಮತ್ತು ತನ್ನನ್ನೇ ಮುಗಿಸಲು ರೂಪಿಸಿದ್ದ ಹತ್ಯೆಯ ಸಂಚು ಬಯಲಿಗೆ ಬಂದ ಬೆನ್ನಲ್ಲೇ, ತೀವ್ರ ಆಕ್ರೋಶಗೊಂಡ ಪತಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಇಂದೋರ್‌ನ ರಾವು ಪ್ರದೇಶದಲ್ಲಿ ವಾಸವಿದ್ದ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮಾಲೀಕ ಪವನ್ ಸೋನಿ ತಮ್ಮ ಪತ್ನಿ ವರ್ಷಾ ಸೋನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದರು. ಸುಮಾರು ಒಂದು ವರ್ಷದ ಹಿಂದೆ ಪವನ್ ತಮ್ಮ ಬಂಗಲೆಯಲ್ಲಿ ವೆಲ್ಡಿಂಗ್ ಕೆಲಸಕ್ಕಾಗಿ ರೆಹಾನ್ ಅಲಿಯಾಸ್ ಮೊಹಮ್ಮದ್ ಫೈಜಲ್ ಎಂಬಾತನನ್ನು ಕರೆಸಿದ್ದರು.

ಐದು ದಿನಗಳ ಕಾಲ ಕೆಲಸ ಮಾಡಿದ್ದ ಆತ, ಪವನ್ ಪತ್ನಿ ವರ್ಷಾ ಜೊತೆ ಸಲುಗೆ ಬೆಳೆಸಿಕೊಂಡು ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದನು. ಪವನ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ರೆಹಾನ್ ಮನೆಗೆ ಬಂದು ಹೋಗುತ್ತಿದ್ದ ವಿಚಾರವನ್ನು ಸುಮಾರು ಆರು ತಿಂಗಳ ಬಳಿಕ ನೆರೆಮನೆಯ ಸ್ನೇಹಿತರೊಬ್ಬರು ಪವನ್ ಗಮನಕ್ಕೆ ತಂದಿದ್ದರು.

ಸ್ಪೈ ಕ್ಯಾಮೆರಾ ಅಳವಡಿಕೆ: ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಪವನ್, ಸ್ನೇಹಿತನ ಮಾತನ್ನು ಆರಂಭದಲ್ಲಿ ನಂಬದಿದ್ದರೂ ಸಣ್ಣ ಅನುಮಾನ ಬಗೆಹರಿಸಿಕೊಳ್ಳಲು ಬೆಡ್‌ರೂಮ್‌ನಲ್ಲಿ ಗುಪ್ತವಾಗಿ ಮಿನಿ ಸ್ಪೈ ಕ್ಯಾಮೆರಾ ಅಳವಡಿಸಿದ್ದರು.

ಬಯಲಾದ ಹತ್ಯೆ ಸಂಚು: ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದ 18 ಗಂಟೆಗಳ ದೃಶ್ಯಾವಳಿ ಪರಿಶೀಲಿಸಿದಾಗ, ಪವನ್ ಇಲ್ಲದ ವೇಳೆ ಮನೆಗೆ ಬಂದಿದ್ದ ರೆಹಾನ್ ಜೊತೆ ವರ್ಷಾ ಮಾತನಾಡುತ್ತಾ, “ಈತನನ್ನು ಬೇಗ ಮುಗಿಸಿಬಿಡು, ಆಮೇಲೆ ನಾವಿಬ್ಬರೂ ಈ ಬಂಗಲೆಯಲ್ಲಿ ನೆಮ್ಮದಿಯಾಗಿ ಜೀವಿಸಬಹುದು” ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ದಾಖಲಾಗಿತ್ತು.

ಕೊಲೆ ಮತ್ತು ಆತ್ಮಹತ್ಯೆ: ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದ ಪತ್ನಿಯೇ ತನ್ನ ಹತ್ಯೆಗೆ ಸಂಚು ರೂಪಿಸಿರುವುದನ್ನು ಕಂಡು ಆಘಾತಕ್ಕೊಳಗಾದ ಪವನ್, ಮನೆಗೆ ಬಂದು ಪತ್ನಿ ವರ್ಷಾಳನ್ನು ಹತ್ಯೆಗೈದು ಬಳಿಕ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿಯ ದಾರುಣ ಸಾವಿನಿಂದಾಗಿ ಇಬ್ಬರು ಮುಗ್ಧ ಮಕ್ಕಳು ಇದೀಗ ಅನಾಥರಾಗಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ವೆಲ್ಡರ್ ರೆಹಾನ್ ಅಲಿಯಾಸ್ ಮೊಹಮ್ಮದ್ ಫೈಜಾನ್‌ಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *