ದಾವಣಗೆರೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲ ಸಂಗಮ ಪಂಚಮಸಾಲಿ ಪೀಠಾಧ್ಯಕ್ಷರ ಬದಲಾವಣೆ ಸನ್ನಿವೇಶ ಉದ್ಭವಿಸಿಲ್ಲ. ಪೀಠಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಪಂಚಮಸಾಲಿ ಸಮಾಜದ ಮುಖಂಡರೂ ಆದ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಖಡಕ್ ಸಂದೇಶ ನೀಡಿದ್ದಾರೆ.
READ ALSO THIS STORY: ಅನೈತಿಕ ಸಂಬಂಧ ಹೊಂದಿದ್ದ ಬಾವನ ಜೊತೆ ಸೇರಿ ಗಂಡನ ಕೊಂದ ಪತ್ನಿ: ವಾಟ್ಸಪ್ ಚಾಟ್ ಚಾಟ್ ಕೊಡ್ತು ಹಂತಕರ ಸುಳಿವು!
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏನೇ ಸಮಸ್ಯೆ ಇದ್ದರೂ ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದಿದ್ದೇನೆ. ನಾಳೆ ಬಾಗಲಕೋಟೆಗೆ ತೆರಳುತ್ತಿದ್ದೇನೆ. ಅಲ್ಲಿ ಸಮಾಜದ ಮುಖಂಡರ ಜೊತೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು. ನಾವು ತಟಸ್ಥವಾಗಿಲ್ಲ. ಸಮಾಜದ ನಾಯಕರಿಗೆ ಸಮಸ್ಯೆ ಬಂದಾಗ ಬೆನ್ನಿಗೆ ನಿಲ್ಲುವುದು ಸಹಜ. ಸ್ವಾಭಾವಿಕ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾದೂ ವಿಜಯಾನಂದ ಕಾಶಪ್ಪನವರ್ ವಿಚಾರ ಬಂದಾಗ ಇಬ್ಬರ ಪರವಾಗಿ ಕೂಡಲಸಂಗಮ ಪೀಠಾಧಿಪತಿ ಬಸವಜಯಮೃತ್ಯುಂಜಯ ಸ್ವಾಮೀಜಿ ನಿಂತಿದ್ದಾರೆ ಎಂದು ಹೇಳಿದ್ದಾರೆ.
ಕೆಲ ವೈಮನಸ್ಸಿನ ವಿಚಾರಗಳನ್ನು ದೊಡ್ಡದಾಗಿ ಮಾಡಿ ಪೆಟ್ಟು ಕೊಡುವುದು ಸರಿಯಲ್ಲ. ಮಧ್ಯಪ್ರವೇಶ ಮಾಡುತ್ತೇನೆ. ಪರಿಹಾರ ಮಾಡುತ್ತೇವೆ. ಪರ್ಯಾಯ ವ್ಯವಸ್ಥೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸ್ವಾಮೀಜಿ ಉಚ್ಚಾಟನೆ ಸನ್ನಿವೇಶವೂ ಇಲ್ಲ. ಮರವು ಮನುಷ್ಯನ ಗುಣ. ಹಾಗಾಗಿ, ಇದು ಇಲ್ಲದಿದ್ದರೆ ದ್ವೇಷ ಮತ್ತು ಅಸೂಯೆ ಅಷ್ಟೇ ಉಳಿಯುತ್ತದೆ. ಸಮಾಜದ ಎಲ್ಲರ ಪರವಾಗಿಯೂ ಸ್ವಾಮೀಜಿ ನಿಂತಿದ್ದಾರೆ. ಸಮಸ್ಯೆಗಳು ಯಾವ ಮಠ, ಪೀಠಗಳು, ಯಾವ ರಾಜಕೀಯ ನಾಯಕರ
ನಡುವೆ ಇಲ್ಲ. ಕುಳಿತು ಚರ್ಚೆ ಮಾಡಿದರೆ ಎಲ್ಲವೂ ಪರಿಹಾರ ಆಗುತ್ತೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಮಠದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತದೆ ಎಂಬುದು ಸುಳ್ಳು. ಸ್ವಾಮೀಜಿ ಭೇಟಿಯಾಗಲು ಜನರು ಬರುತ್ತಾರೆ. ಶಾಲೆ ಇದೆ. ಅಡುಗೆ ಮಾಡಲು ಕೆಲಸಗಾರರು ಇದ್ದಾರೆ. ಅನೈತಿಕ, ಅಕ್ರಮ ನಡೆದಿರುವ ಉದಾಹರಣೆ ಇಲ್ಲ. ಸ್ವಾಮೀಜಿ ಗುರಿಮಾಡಿ ದ್ವೇಷದ ಹೇಳಿಕೆ ನೀಡಲು ಅಸ್ತ್ರ ಅಷ್ಟೇ ಎಂದು ವ್ಯಾಖ್ಯಾನಿಸಿದರು.
ಮಠಕ್ಕೆ ಬೇರೆ ಸ್ವಾಮೀಜಿ ಬರುತ್ತಾರೆ ಎಂಬುದು ಅಪ್ರಸ್ತುತ. ಈ ಬೆಳವಣಿಗೆಯಿಂದ ಖಂಡಿತವಾಗಿಯೂ ಸಮಾಜದ ಜನರಿಗೆ ಮುಜುಗರ ಅನಿಸುತ್ತಿದೆ. ಪ್ರಾಮಾಣಿಕವಾಗಿ ಹೋರಾಟ ಮಾಡುವವರಿಗೆ ಮುಜುಗರ ಆಗುತ್ತದೆ. ರಾಜಕೀಯ ನಾಯಕರು ರಾಜಕೀಯ ಹೇಳಿಕೆ, ವೈಯಕ್ತಿಕ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಸಮಾಜದ ಮೇಲೆ ತರುವ ಕೆಲಸ ಮಾಡಬೇಡಿ. ಸದ್ಯದ ಪರಿಸ್ಥಿತಿಗೆ ಗೊಂದಲದ ಹೇಳಿಕೆ ಯಾರೂ ನೀಡಬಾರದು ಎಂದು ಹೆಚ್. ಎಸ್. ಶಿವಶಂಕರ್ ಕರೆ ನೀಡಿದರು.