SUDDIKSHANA KANNADA NEWS/ DAVANAGERE/ DATE:16-08-2024
ದಾವಣಗೆರೆ: ಜಲಸಿರಿ ಯೋಜನೆ ಯಡಿಯಲ್ಲಿ ನಿರಂತರ ಶುದ್ದ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆ.17 ರಂದು ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಾಗುವುದಿಲ್ಲ.
ತ್ರಿಶೂಲ್ ಫೀಡರ್ , ಕೆ.ಬಿ. ಬಡಾವಣೆ, ಲಾಯರ್ ರಸ್ತೆ, ದೀಕ್ಷಿತ್ರಸ್ತೆ, ಬಿಲಾಲ್ ಕಾಂಪೌಂಡ್, ಅಶೋಕ ರಸ್ತೆ, ಕಿರುವಾಡಿ ಲೇಔಟ್, ಪ್ರೆಸ್ ಕ್ಲಬ್, ನಾಯ್ಡು ಹೋಟೆಲ್, ರಾಘವೇಂದ್ರ ದೇವಸ್ಥಾನ ರಸ್ತೆ, ಗಾಂಧಿ ಸರ್ಕಲ್ನಿಂದ ಈರುಳ್ಳಿ ಮಾರ್ಕೆಟ್ ಹಾಗೂ
ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಎಂದು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನುಲಿಯ ಚಂದಯ್ಯ ಜಯಂತಿ:
ಜಿಲ್ಲಾಡಳಿತ ವತಿಯಿಂದ ಆ.19 ಬೆಳಗ್ಗೆ 11 ಗಂಟೆಗೆ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಡಳಿತ ಭವನದಲದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವೀಂದ್ರನ್ ತಿಳಿಸಿದ್ದಾರೆ.