SUDDIKSHANA KANNADA NEWS/ DAVANAGERE/ DATE:11-06-2024
ದಾವಣಗೆರೆ: 11 ಕೆ.ವಿ. ಮೆಳ್ಳೆಕಟ್ಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯ ಹಮ್ಮಿಕೊಂಡಿರುವುದರಿಂದ ಜೂನ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮೆಳ್ಳೆಕಟ್ಟೆ ಫೀಡರ್ ವ್ಯಾಪ್ತಿಯ ಆಲೂರು, ಬಿ.ಜಿ.ಹಳ್ಳಿ, ಸಿದ್ದನೂರು, ಮಲ್ಲಾಪುರ, ಗುಡಾಳು, ಅಣಜಿ, ಕಿತ್ತೂರು, ಕಂದನಕೋವಿ, ಮೆಳ್ಳೆಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಕಾಡಜ್ಜಿ ಫೀಡರ್ ವ್ಯಾಪ್ತಿಯ ರೆಡ್ಡಿ ಕ್ಯಾಂಪ್, ಪುಟಗಾನಾಳು, ಶ್ರಿರಾಮನಗರ, ಕಾಡಜ್ಜಿ, ಬಸವಾನಾಳು, ನಾಗರಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯ:
ದಾವಣಗೆರೆ ನಗರದ ಮಹಾನಗರ ಪಾಲಿಕೆ ವತಿಯಿಂದ ಒಳ ಚರಂಡಿ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಜೂನ್ 12 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಾಯಿ ಎಫ್21ಫೀಡರ್ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆಯ 9, 10, ಮತ್ತು 11ನೇ ಕ್ರಾಸ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.