
ನವದೆಹಲಿ: ಬಡತನವನ್ನು ಕೇವಲ ಕೂಲಿ ಅಥವಾ ಆದಾಯದ ಮೂಲಕ ಅಳಿಯಲು ಅಥವಾ ಪರಿಹರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸುರಕ್ಷಿತ ಮನೆ, ಸ್ವಚ್ಛ ಕುಡಿಯುವ ನೀರು, ನೈರ್ಮಲ್ಯ ಅಥವಾ ಆರೋಗ್ಯ ಸೇವೆಗಳಿಲ್ಲದ ಕುಟುಂಬವು ಕೇವಲ ಒಂದು ವೈದ್ಯಕೀಯ ಬಿಕ್ಕಟ್ಟಿನಿಂದಾಗಿ ಮತ್ತೆ ಬಡತನಕ್ಕೆ ಜಾರಬಹುದು ಎಂದು ಅವರು ಲಿಂಕ್ಇನ್ (LinkedIn) ಬ್ಲಾಗ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಬ್ಯಾಂಕ್ನ ಇತ್ತೀಚಿನ ಭಾರತದ ಬಡತನ ಮತ್ತು ಸಮಾನತೆ ವರದಿಯ ಪ್ರಕಾರ, 2011 ರಿಂದ 2023ರ ನಡುವೆ ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಮತ್ತು ತೀವ್ರ ಬಡತನವುನಿರ್ಮೂಲನೆಯಾಗಿದೆ ಎಂದು ಸಚಿವೆ ಉಲ್ಲೇಖಿಸಿದ್ದಾರೆ.
ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಕೇವಲ ಹಣ ಹಂಚುವ ಮೂಲಕ ಬಡತನ ನಿರ್ಮೂಲನೆ ಮಾಡುವ ಧೋರಣೆ ಇತ್ತು. ಆದರೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ನೇರ ನಗದು ವರ್ಗಾವಣೆ ಬದಲು ಪ್ರತಿ ಮನೆಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ. ಮುಂಬರುವ ‘ವಿಕ್ಷಿತ್ ಭಾರತ 2047’ ಗುರಿಯನ್ನು ತಲುಪಲು ಜನರಿಗೆ ಹಣಕಾಸು, ಮಾರುಕಟ್ಟೆ ಹಾಗೂ ಡಿಜಿಟಲ್ ಆರ್ಥಿಕತೆಯ ಪ್ರವೇಶ ಒದಗಿಸುವುದು ಅತ್ಯಗತ್ಯ ಎಂದಿದ್ದಾರೆ.
ಬಡತನದ ನೈಜ ವ್ಯಾಖ್ಯಾನ: ಸುರಕ್ಷಿತ ಮನೆ, ಶುದ್ಧ ನೀರು, ಆರೋಗ್ಯ ಮತ್ತು ನೈರ್ಮಲ್ಯದ ಕೊರತೆಯಿದ್ದರೆ ಆದಾಯ ಹೆಚ್ಚಿದರೂ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ.
50 ಕೋಟಿ ಜನರ ಪಯಣ: 2011-2023ರ ಅವಧಿಯಲ್ಲಿ ಸುಮಾರು 50 ಕೋಟಿ ಭಾರತೀಯರು ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಲಾಗಿದೆ.
ಮುಂದಿನ ಹೆಜ್ಜೆ (ವಿಕ್ಷಿತ್ ಭಾರತ 2047): ಬಡತನದಿಂದ ಹೊರಬಂದವರು ಮತ್ತೆ ಹಿಂದೆ ಸರಿಯದಂತೆ ತಡೆಯಲು ಮುದ್ರಾ ಸಾಲಗಳು, ಲಕ್ಷ್ಪತಿ ದೀದಿ ಯೋಜನೆ ಹಾಗೂ ಉದ್ಯೋಗಾಧಾರಿತ ಪ್ರೋತ್ಸಾಹಕಗಳ ಮೂಲಕ ಬಲಪಡಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.




