Home ದಾವಣಗೆರೆ ದೇಶದ ಶಿಕ್ಷಣ ವ್ಯವಸ್ಥೆ ಒಂದು ‘ಸುಲಿಗೆ ಯಂತ್ರ’: ನೀಟ್, ಯುಪಿಎಸ್ಸಿ ವೆಚ್ಚದ ಬಗ್ಗೆ ರಾಹುಲ್ ಗಾಂಧಿ ಸ್ಫೋಟಕ ಲೆಕ್ಕಾಚಾರ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ದೇಶದ ಶಿಕ್ಷಣ ವ್ಯವಸ್ಥೆ ಒಂದು ‘ಸುಲಿಗೆ ಯಂತ್ರ’: ನೀಟ್, ಯುಪಿಎಸ್ಸಿ ವೆಚ್ಚದ ಬಗ್ಗೆ ರಾಹುಲ್ ಗಾಂಧಿ ಸ್ಫೋಟಕ ಲೆಕ್ಕಾಚಾರ!

Share
ರಾಹುಲ್ ಗಾಂಧಿ
Share

ಕೋಟಾ (ರಾಜಸ್ಥಾನ): ಭಾರತದ ಇಂದಿನ ಶಿಕ್ಷಣ ವ್ಯವಸ್ಥೆಯು ಕೇವಲ ವಿದ್ಯಾರ್ಥಿಗಳನ್ನು ಹೊರದೂಡುವ ‘ರಿಜೆಕ್ಷನ್ ಸಿಸ್ಟಮ್’ (Rejection System) ಹಾಗೂ ಮಧ್ಯಮ ವರ್ಗದವರ ಹಣ ಲೂಟಿ ಮಾಡುವ ‘ಸುಲಿಗೆ ಯಂತ್ರ’ವಾಗಿ ಮಾರ್ಪಟ್ಟಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದ ಪ್ರಮುಖ ಕೋಚಿಂಗ್ ಹಬ್ ಆದ ಕೋಟಾದಲ್ಲಿ ಹಮ್ಮಿಕೊಳ್ಳಲಾಗಿದ್ದ “ಛಾತ್ರೋಂ ಕಿ ಗೂಂಜ್” (Chhatron Ki Goonj) ಮಹಾ ರ‍್ಯಾಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಈ ವೇಳೆ ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಾದ NEET, UPSC, JEE, SSC ಮತ್ತು RRB ಗಳಿಗಾಗಿ ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ವ್ಯಯಿಸುತ್ತಿರುವ ಕೋಟ್ಯಂತರ ರೂಪಾಯಿಗಳ ಆಘಾತಕಾರಿ ಲೆಕ್ಕಾಚಾರವನ್ನು ಅವರು ಬಿಚ್ಚಿಟ್ಟಿದ್ದಾರೆ.

ರಾಹುಲ್ ಗಾಂಧಿ ಮಂಡಿಸಿದ ‘ಸ್ಫೋಟಕ ಲೆಕ್ಕಾಚಾರ’ ಇಲ್ಲಿದೆ:

ಶಿಕ್ಷಣ ಬಜೆಟ್ ವರ್ಸಸ್ ನೀಟ್ ವೆಚ್ಚ: ದೇಶದಲ್ಲಿ ಪ್ರತಿವರ್ಷ ಸುಮಾರು 22 ಲಕ್ಷ ವಿದ್ಯಾರ್ಥಿಗಳು NEET ಪರೀಕ್ಷೆ ಬರೆಯುತ್ತಾರೆ. ಇವರ ಪೋಷಕರು ಕೋಚಿಂಗ್ ಹಾಗೂ ಪರೀಕ್ಷೆಗಾಗಿ ಒಟ್ಟಾರೆಯಾಗಿ ಬರೋಬ್ಬರಿ ₹1.32 ಲಕ್ಷ ಕೋಟಿ ಖರ್ಚು ಮಾಡುತ್ತಿದ್ದಾರೆ. ಇತ್ತ ಇಡೀ ದೇಶದ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಇಟ್ಟಿರುವ ಒಟ್ಟು ಬಜೆಟ್ ₹1.4 ಲಕ್ಷ ಕೋಟಿ ಮಾತ್ರ! ಅಂದರೆ ಕೇವಲ ಒಂದೇ ಒಂದು ಪರೀಕ್ಷೆಗೆ ದೇಶದ ಜನ ಮಾಡುವ ವೆಚ್ಚ ಸರ್ಕಾರದ ಒಟ್ಟು ಶಿಕ್ಷಣ ಬಜೆಟ್‌ಗೆ ಸಮನಾಗಿದೆ.

5 ಪರೀಕ್ಷೆಗಳು – ₹3.5 ಲಕ್ಷ ಕೋಟಿ ಹೊರೆ: NEET, JEE, UPSC, SSC ಮತ್ತು RRB ಪರೀಕ್ಷೆಗಳಿಗಾಗಿ ದೇಶದ ಒಟ್ಟು ಕುಟುಂಬಗಳು ಸೇರಿ ವರ್ಷಕ್ಕೆ ₹3.5 ಲಕ್ಷ ಕೋಟಿ ಖರ್ಚು ಮಾಡುತ್ತಿವೆ. ಈ ಭಾರಿ ಮೊತ್ತವು ದೇಶದ ಶಿಕ್ಷಣ, ಆರೋಗ್ಯ, ಕಾರ್ಮಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಒಟ್ಟು ಸಂಯೋಜಿತ ಬಜೆಟ್‌ಗೆ ಸಮಾನವಾಗಿದೆ ಎಂದು ರಾಹುಲ್ ಕಿಡಿಕಾರಿದ್ದಾರೆ.

“ಇದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯಲ್ಲ, ಬದಲಿಗೆ ಲಕ್ಷಾಂತರ ಮಕ್ಕಳನ್ನು ಹೊರದಬ್ಬುವ (Rejection) ಕ್ರೂರ ಮಾದರಿಯಾಗಿದೆ. ಕೇವಲ 5 ಸಾಂಪ್ರದಾಯಿಕ ಉದ್ಯೋಗಗಳ ಬೆನ್ನಟ್ಟಿ ಇಡೀ ಯುವ ಪೀಳಿಗೆಯನ್ನು ಒತ್ತಡ ಹಾಗೂ ಖಿನ್ನತೆಗೆ ತಳ್ಳಲಾಗುತ್ತಿದೆ.”

– ರಾಹುಲ್ ಗಾಂಧಿ

ದೇಶಾದ್ಯಂತ ಹೋರಾಟದ ಹಾದಿ:

ಪೇಪರ್ ಲೀಕ್ ಹಗರಣಗಳು, ನಿರುದ್ಯೋಗ ಮತ್ತು ವಿದ್ಯಾರ್ಥಿಗಳ ಮೇಲಿನ ತೀವ್ರ ಮಾನಸಿಕ ಒತ್ತಡದ ವಿರುದ್ಧ ಕಾಂಗ್ರೆಸ್ ಇಂದಿನಿಂದ ದೇಶವ್ಯಾಪಿ ಅಭಿಯಾನ ಆರಂಭಿಸಿದೆ. NSUI ಮತ್ತು ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಅಲಹಾಬಾದ್ (ಪ್ರಯಾಗ್‌ರಾಜ್), ಪಾಟ್ನಾ ಮತ್ತು ದೆಹಲಿಯಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶಗಳನ್ನು ನಡೆಸಲು ರೋಡ್‌ಮ್ಯಾಪ್ ಸಿದ್ಧಪಡಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *