ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನೂತನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಜೂ. 3 ಕ್ಕೆ ದಾವಣಗೆರೆಗೆ: ಎಷ್ಟೊತ್ತಿಗೆ ಬರುತ್ತಾರೆ, ಮೆರವಣಿಗೆ ಎಲ್ಲೆಲ್ಲಿ ಸಾಗುತ್ತೆ…?

On: June 1, 2023 11:20 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:01-06-2023

ದಾವಣಗೆರೆ(DAVANAGERE): ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್ ಅವರು 3ನೇ ಬಾರಿಗೆ ಸಚಿವರಾಗಿ ಸ್ವೀಕರಿಸಿ ಅಧಿಕಾರ ಸ್ವೀಕರಿಸಿದ್ದು, ಜೂನ್ (JUNE) 3 ರಂದು ದಾವಣಗೆರೆ (DAVANAGERE) ನಗರಕ್ಕೆ ಆಗಮಿಸಲಿದ್ದು, ಅವರನ್ನು ದಾವಣಗೆರೆ (DAVANAGERE) ಜಿಲ್ಲೆಯ ಕಾಂಗ್ರೆಸ್ (CONGRESS) ಮುಖಂಡರು, ಕಾರ‍್ಯಕರ್ತರು ಮತ್ತು ಅಭಿಮಾನಿಗಳು ಸಭೆ ಸೇರಿ ಅದ್ದೂರಿಯಾಗಿ ಸ್ವಾಗತಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ (H. B. MANJAPPA) ತಿಳಿಸಿದ್ದಾರೆ.

ಅಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಸ್ವಾಗತಿಸಿ (WELCOME) ಬೈಕ್ ರ‍್ಯಾಲಿ (BIKE RALLY) ಮೂಲಕ ನಗರದ ವಿವಿಧ ಕಡೆಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.

ಈ ಮೆರವಣಿಗೆಯೂ ದಾವಣಗೆರೆ ಜಿಲ್ಲಾ ಪಂಚಾಯತ್ ಮುಂಭಾಗ ಪ್ರಾರಂಭವಾಗಿ ಗಣೇಶ ದೇವಸ್ಥಾನ ಹದಡಿ ರಸ್ತೆ, ಐ.ಟಿ.ಐ. ಕಾಲೇಜ್ (I.T.I. COLLEGE) ಮುಂಭಾಗದಿಂದ 60 ಅಡಿ ರಸ್ತೆಯ ಮೂಲಕ ನಿಟುವಳ್ಳಿ ದುರ್ಗಾಂಬಿಕ ಸರ್ಕಲ್, ನಿಟುವಳ್ಳಿ, ಆರ್.ಎಸ್. ಶೇಖರಪ್ಪನವರ ಮನೆ ಮುಂಭಾಗ, ಕೊಂಡಜ್ಜಿ ಬಸಪ್ಪ ಸರ್ಕಲ್ ಹದಡಿ ರಸ್ತೆ, ವಿದ್ಯಾರ್ಥಿ ಭವನ ಸರ್ಕಲ್, ಹದಡಿ ರಸ್ತೆ, ಕೆ.ಇ.ಬಿ. ಸರ್ಕಲ್, (ಅಂಬೇಡ್ಕರ್ ಸರ್ಕಲ್) ಹದಡಿ ರಸ್ತೆ, ಜಯದೇವ ಸರ್ಕಲ್, ಮಹಾನಗರ ಪಾಲಿಕೆ ಕಛೇರಿ ಮುಂಭಾಗದಿಂದ ಅರುಣ್ ಸರ್ಕಲ್ ಮುಖಾಂತರ ರೈಲ್ವೆಗೇಟ್ ಮುಖಾಂತರ ಹೊಂಡದ ಸರ್ಕಲ್, ದುರ್ಗಾಂಬಿಕ ದೇವಸ್ಥಾನ ಶಿವಾಜಿ ವೃತ್ತ, ಹಗೇದಿಬ್ಬ ಸರ್ಕಲ್, ಅಜಾದ್‌ನಗರ ಮುಖ್ಯರಸ್ತೆ, ಅರಳಿಮರ ಸರ್ಕಲ್, ವೆಂಕಟೇಶ್ವರ ಸರ್ಕಲ್‌ಗೆ ಮುಕ್ತಾಯವಾಗಲಿದೆ ಎಂದಿದ್ದಾರೆ.

ಈ ಮೆರವಣಿಗೆಯಲ್ಲಿ ಶಾಸಕರಾದ ದಾವಣಗೆರೆ ದಕ್ಷಿಣದ ಡಾ. ಶಾಮನೂರು ಶಿವಶಂಕರಪ್ಪನವರು, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಚನ್ನಗಿರಿಯ ಶಿವಗಂಗಾ ಬಸವರಾಜ್, ಹೊನ್ನಾಳಿಯ ಡಿ.ಜಿ.ಶಾಂತನಗೌಡ, ಜಗಳೂರಿನ ದೇವೆೇಂದ್ರಪ್ಪ, ಹರಪನಹಳ್ಳಿಯ ಲತಾ ಮಲ್ಲಿಕಾರ್ಜುನ್, ಮಾಜಿ ಶಾಸಕರಾದ ಎಸ್.ರಾಮಪ್ಪ, ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಾಗಿದ್ದ ಹರಿಹರದ ನಂದಿಗಾವಿ ಶ್ರೀನಿವಾಸ್, ಹರಪನಹಳ್ಳಿಯ ಅರಸೀಕೆರೆ ಕೊಟ್ರೇಶ್ ಅವರು ಸಹ ಭಾಗವಹಿಸುವರು ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ್ ಅವರು 1998ರಿಂದ ಶಾಸಕರಾಗಿ, 2 ಬಾರಿ ಸಚಿವರಾಗಿ ದಾವಣಗೆರೆ ಜಿಲ್ಲೆಯನ್ನು ದೇಶ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡಿದ್ದರು. ಇದೀಗ 3ನೇ ಬಾರಿಗೆ ಸಚಿವರಾಗಿದ್ದು, ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾಗಿದ್ದು, ದಾವಣಗೆರೆ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ. ಆದ ಕಾರಣ ಆದ ಕಾರಣ ಪಕ್ಷದ ಜನಪ್ರತಿನಿಧಿಗಳು, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಸಮಿತಿ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಪಾಲಿಕೆ ಸದಸ್ಯರು, ಜಿಲ್ಲಾ, ತಾಲ್ಲೂಕು ಪಂಚಾಯತ್, ಎಪಿಎಂಸಿಯ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರು, ವಾರ್ಡ್, ಪಂಚಾಯತ್ ಅಧ್ಯಕ್ಷರು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್.ಎಸ್.ಯು.ಐ, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಸೇವಾದಳ, ವಿಕಲಚೇತನ, ಡಾಕ್ಟರ್, ವಕೀಲರ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment