
ನವದೆಹಲಿ: ಸರ್ಕಾರ ನೀಡಿದ ತೆರಿಗೆ ವಿನಾಯಿತಿಗಳ ಸಂಪೂರ್ಣ ಲಾಭವನ್ನು ಜೇಬಿಗಿಳಿಸಿಕೊಂಡು, ಹೊಸ ಉದ್ಯೋಗಗಳನ್ನು ಸೃಷ್ಟಿಸದೆ ಮತ್ತು ನೌಕರರ ವೇತನವನ್ನು ಹೆಚ್ಚಿಸದೆ ಸುಮ್ಮನೆ ಕುಳಿತಿರುವ ದೇಶದ ಕಾರ್ಪೊರೇಟ್ ವಲಯದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟದ (FICCI) ಶತಮಾನೋತ್ಸವ ಸಮಾರಂಭದಲ್ಲಿ ದೇಶದ ಅಗ್ರಗಣ್ಯ ಉದ್ಯಮಿಗಳ ಸಮ್ಮುಖದಲ್ಲೇ ಪ್ರಧಾನಿ ಈ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತೆರಿಗೆ ವಿನಾಯಿತಿ ಮತ್ತು ವೇತನ ಸ್ಥಗಿತ: 2014ರಲ್ಲಿ ಶೇ. 30ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು 2019ರಲ್ಲಿ ಶೇ. 22ಕ್ಕೆ ಇಳಿಸಲಾಯಿತು. ಅಲ್ಲದೆ, ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲು ವಾರ್ಷಿಕ 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೂ ಖಾಸಗಿ ವಲಯ ಇದಕ್ಕೆ ಪೂರಕವಾಗಿ ವೇತನ ಹೆಚ್ಚಳ ಅಥವಾ ಉದ್ಯೋಗ ಸೃಷ್ಟಿಗೆ ಮುಂದಾಗಿಲ್ಲ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದರು.
ತೆರಿಗೆ ಮರುಪಾವತಿ ಸುಧಾರಣೆ: ಹಿಂದೆ ತೆರಿಗೆ ಮರುಪಾವತಿ ಪಡೆಯಲು 8 ತಿಂಗಳು ಕಾಯಬೇಕಿತ್ತು. ಆದರೆ ಈಗ ವ್ಯವಸ್ಥೆಯನ್ನು ಸರಳಗೊಳಿಸಲಾಗಿದ್ದು, ಕೇವಲ ಒಂದು ವಾರದಲ್ಲಿ ತೆರಿಗೆದಾರರ ಖಾತೆಗೆ ಹಣ ಜಮೆಯಾಗುತ್ತಿದೆ. “ಕನಿಷ್ಠ ಅದಕ್ಕಾದರೂ ಚಪ್ಪಾಳೆ ತಟ್ಟಿ” ಎಂದು ಪ್ರಧಾನಿ ವ್ಯಂಗ್ಯವಾಡಿದರು.
ದಾಖಲೆಯ ಕಾರ್ಪೊರೇಟ್ ಲಾಭ ಮತ್ತು ತೆರಿಗೆ ಅಂತರ: ಮೋತಿಲಾಲ್ ಓಸ್ವಾಲ್ ವರದಿಯ ಪ್ರಕಾರ, 2020-26ರ ಅವಧಿಯಲ್ಲಿ ದೇಶದ ಜಿಡಿಪಿ ಶೇ. 9.5ರ ದರದಲ್ಲಿ ಬೆಳೆದರೆ, ನಿಫ್ಟಿ-500 ಕಂಪನಿಗಳ ಲಾಭ ಶೇ. 28.7ರ ವಾರ್ಷಿಕ ದರದಲ್ಲಿ (CAGR) ವೃದ್ಧಿಯಾಗಿದೆ. ಆರ್‌ಬಿಐ ವರದಿಯಂತೆ ಕಂಪನಿಗಳ ಲಾಭ 2.5 ಲಕ್ಷ ಕೋಟಿಯಿಂದ 7.1 ಲಕ್ಷ ಕೋಟಿ ರೂ.ಗೆ ಏರಿದೆ. ಆದರೆ, ನೇರ ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಟ್ ತೆರಿಗೆಗಿಂತ (ಶೇ. 46.6) ಸಾಮಾನ್ಯ ಜನರು ಕಟ್ಟುವ ವೈಯಕ್ತಿಕ ಆದಾಯ ತೆರಿಗೆಯ ಪಾಲೇ (ಶೇ. 53.4) ಹೆಚ್ಚಾಗಿದೆ.
ಔಪಚಾರಿಕ ಉದ್ಯೋಗಗಳ ಕೊರತೆ: ಆರ್ಥಿಕ ಸಮೀಕ್ಷೆ ಮತ್ತು ಎಸ್‌ಬಿಐ ವರದಿಯ ಪ್ರಕಾರ, ಕಾರ್ಪೊರೇಟ್ ಲಾಭ ಶೇ. 22.3ರಷ್ಟು ಹೆಚ್ಚಾದರೂ ಉದ್ಯೋಗ ಸೃಷ್ಟಿ ಕೇವಲ ಶೇ. 1.5ರಷ್ಟು ಮಾತ್ರ ಆಗಿದೆ. ದೇಶದ ಶೇ. 87ರಷ್ಟು ಕಾರ್ಮಿಕರು ಇಂದಿಗೂ ಭದ್ರತೆಯಿಲ್ಲದ ಅಸಂಘಟಿತ ಮತ್ತು ಗಿಗ್ (Gig) ವಲಯದಲ್ಲೇ ದುಡಿಯುತ್ತಿದ್ದಾರೆ.
- Aapki Bhookh Itni Hai
- Bharat Mandapam New Delhi
- Corporate Tax Cut
- FICCI Centenary Event
- India Inc
- Indian Economy News
- Job Creation India
- Nirmala Sitharaman
- Personal Income Tax vs Corporate Tax
- PM Narendra Modi
- Salary Hike Stagnation
- ಆದಾಯ ತೆರಿಗೆ ವಿನಾಯಿತಿ
- ಉದ್ಯೋಗ ಸೃಷ್ಟಿ
- ಕಾರ್ಪೊರೇಟ್ ತೆರಿಗೆ
- ಕಾರ್ಪೊರೇಟ್ ಲಾಭ
- ಖಾಸಗಿ ವಲಯ
- ನವದೆಹಲಿ
- ನಿರ್ಮಲಾ ಸೀತಾರಾಮನ್
- ಪ್ರಧಾನಿ ನರೇಂದ್ರ ಮೋದಿ
- ಫಿಕ್ಕಿ ಶತಮಾನೋತ್ಸವ
- ಭಾರತ ಮಂಟಪ
- ಭಾರತೀಯ ಆರ್ಥಿಕತೆ
- ವೇತನ ಹೆಚ್ಚಳ




