Home ಕ್ರೈಂ ನ್ಯೂಸ್ ನೇಪಾಳ ಪ್ರವಾಹ: ಕೊಚ್ಚಿಹೋದ ಬ್ಯಾಂಕ್ ಸೇಫ್‌ ಒಡೆದು ಹಣ ದೋಚಿದ 29 ಜನರ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನೇಪಾಳ ಪ್ರವಾಹ: ಕೊಚ್ಚಿಹೋದ ಬ್ಯಾಂಕ್ ಸೇಫ್‌ ಒಡೆದು ಹಣ ದೋಚಿದ 29 ಜನರ ಬಂಧನ!

Share
ಪ್ರವಾಹ
Share

ನೇಪಾಳ: ದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಅನಾಹುತದ ನಡುವೆಯೂ ಕೃತ್ಯವೊಂದು ಬೆಳಕಿಗೆ ಬಂದಿದೆ. ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿದ್ದ ಬ್ಯಾಂಕ್‌ನ ಸೇಫ್‌ ಅನ್ನು (ಹುಂಡಿ/ತಿಜೋರಿ) ಒಡೆದು ಒಳಗಿದ್ದ ಲಕ್ಷಾಂತರ ರೂಪಾಯಿ ನಗದನ್ನು ಹಂಚಿಕೊಂಡಿದ್ದ 29 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಸುವಾದ ಭೋಟೇಕೋಶಿ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿ ತೇಲಿಬಂದಿದ್ದ ಈ ಸೇಫ್, ಧಾದಿಂಗ್ ಜಿಲ್ಲೆಯ ಗಲ್ಛಿ ಗ್ರಾಮ ಪಂಚಾಯಣಿಗೆ ಒಳಪಟ್ಟ ತ್ರಿಶೂಲಿ ನದಿ ತೀರದಲ್ಲಿ ಪತ್ತೆಯಾಗಿತ್ತು.

ಸ್ಥಳೀಯರು ಇದನ್ನು ಒಡೆದು ಹಣ ದೋಚಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ, ಬರೋಬ್ಬರಿ 92,68,505 ನೇಪಾಳ ರೂಪಾಯಿಗಳನ್ನು (ಸುಮಾರು 57 ಲಕ್ಷ ಭಾರತೀಯ ರೂ.) ವಶಪಡಿಸಿಕೊಂಡಿದ್ದಾರೆ.

ಅಲ್ಲದೆ, ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಶವದಿಂದ ಚಿನ್ನದ ಓಲೆಗಳನ್ನು ಕಳವು ಮಾಡಿದ್ದ ಇಬ್ಬರನ್ನೂ ಬಂಧಿಸಲಾಗಿದೆ. ನೇಪಾಳದಲ್ಲಿ ಪ್ರವಾಹದಿಂದ ಮೃತರಾದವರ ಸಂಖ್ಯೆ 626ಕ್ಕೇರಿದ್ದು, 2,426 ಮಂದಿ ನಾಪತ್ತೆಯಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles