Home ಕ್ರೈಂ ನ್ಯೂಸ್ ಆಲಂಗನೆಯ ವಿವಾದ ಬೆನ್ನಲ್ಲೇ ನೆಹರೂ ‘ಮುತ್ತಿನ’ ಚಿತ್ರ ಹರಿಬಿಟ್ಟ ಬಿಜೆಪಿ ಸಂಸದ: ಕಾಂಗ್ರೆಸ್ ಕೆಂಡ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆಲಂಗನೆಯ ವಿವಾದ ಬೆನ್ನಲ್ಲೇ ನೆಹರೂ ‘ಮುತ್ತಿನ’ ಚಿತ್ರ ಹರಿಬಿಟ್ಟ ಬಿಜೆಪಿ ಸಂಸದ: ಕಾಂಗ್ರೆಸ್ ಕೆಂಡ!

Share
ನೆಹರೂ
Share

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಂದೀಪ್ ದೀಕ್ಷಿತ್ ನಡುವಿನ ‘ಹಗ್’ (ಅಪ್ಪುಗೆ) ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಕುರಿತ ಹೇಳಿಕೆಗಳ ವಿವಾದ ತಾರಕಕ್ಕೇರಿದೆ. ಈ ಬೆನ್ನಲ್ಲೇ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಸಂಸದ ದುಬೆ ಅವರು ನೆಹರೂ ತಮ್ಮ ಸಹೋದರಿ ವಿಜಯಲಕ್ಷ್ಮಿ ಪಂಡಿತ್, ಮೊಮ್ಮಗಳು ನಯನತಾರಾ ಸೆಹಗಲ್ ಮತ್ತು ಅಮೆರಿಕದ ಮಾಜಿ ಪ್ರಥಮ ಮಹಿಳೆ ಜಾಕ್ವೆಲಿನ್ ಕೆನಡಿ ಅವರೊಂದಿಗಿರುವ ಫೋಟೋಗಳನ್ನು ಟ್ವೀಟ್ ಮಾಡಿ, ‘ನನ್ನ ಗ್ರಂಥಾಲಯದಲ್ಲಿದ್ದ ಪುಸ್ತಕದ ಕೆಲವು ಚಿತ್ರಗಳು’ ಎಂದು ಬರೆದುಕೊಂಡಿದ್ದರು. ಈ ಫೋಟೋಗಳ ಮೂಲಕ ನೆಹರೂ ಅವರನ್ನು ವೈಯಕ್ತಿಕವಾಗಿ ನಿಂದಿಸಲು ಯತ್ನಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಮತ್ತು ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ, “ಫೋಟೋಗಳನ್ನು ಸಂದರ್ಭದಿಂದ ಹೊರತುಪಡಿಸಿ (Out of context) ದುರುದ್ದೇಶಪೂರ್ವಕವಾಗಿ ಬಳಸಲಾಗಿದೆ. ಸಹೋದರಿಯ ಕೆನ್ನೆಗೆ ನೀಡಿದ ಪ್ರೀತಿಯ ಮುತ್ತು ಮತ್ತು ಹೋಳಿ ಹಬ್ಬದ ಆಚರಣೆಯ ಚಿತ್ರಗಳನ್ನು ಈ ರೀತಿ ತಿರುಚಿ ರಾಜಕೀಯ ಲಾಭಕ್ಕೆ ಬಳಸುವುದು ಅತ್ಯಂತ ಕೆಳಮಟ್ಟದ ರಾಜಕಾರಣ” ಎಂದು ವಾಗ್ದಾಳಿ ನಡೆಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles