Home ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆ (JNVST) 2027: ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಆಗಸ್ಟ್ 10 ರವರೆಗೆ ವಿಸ್ತರಣೆ
Homeದಾವಣಗೆರೆನವದೆಹಲಿಬೆಂಗಳೂರು

ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆ (JNVST) 2027: ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಆಗಸ್ಟ್ 10 ರವರೆಗೆ ವಿಸ್ತರಣೆ

Share
ನವೋದಯ
Share

ಬೆಂಗಳೂರು: ನವೋದಯ ವಿದ್ಯಾಲಯ ಸಮಿತಿಯು (NVS) 2027-28ನೇ ಶೈಕ್ಷಣಿಕ ಸಾಲಿನ ಜವಾಹರ್ ನವೋದಯ ವಿದ್ಯಾಲಯಗಳ (JNV) 6ನೇ ತರಗತಿ ಉಚಿತ ಪ್ರವೇಶಕ್ಕಾಗಿ ನಡೆಸಲಾಗುವ ‘ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ 2027’ರ (JNVST 2027) ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದೆ.

ಈ ಮೊದಲು ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿತ್ತು. ಪೋಷಕರು ಮತ್ತು ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿ ಪ್ರಸ್ತುತ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಆಗಸ್ಟ್ 10, 2026 ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ navodaya.gov.in ಅಥವಾ cbseitms.rcil.gov.in/nvs ಮೂಲಕ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಪರೀಕ್ಷೆಯ ಪ್ರಮುಖ ವಿವರಗಳು:

ಪರೀಕ್ಷಾ ದಿನಾಂಕ: 2027-28ರ ಶೈಕ್ಷಣಿಕ ಸಾಲಿಗೆ ನವೋದಯ ಆಯ್ಕೆ ಪರೀಕ್ಷೆಯು ನವೆಂಬರ್ 28, 2026 ರಂದು ದೇಶಾದ್ಯಂತ ಒಂದೇ ಹಂತದಲ್ಲಿ ನಡೆಯಲಿದೆ.

ಅರ್ಜಿ ತಿದ್ದುಪಡಿ (Correction Window): ಅರ್ಜಿ ಸಲ್ಲಿಸಿದ ನಂತರ ತಿದ್ದುಪಡಿ ಮಾಡಲು ಆಗಸ್ಟ್ 11 ಮತ್ತು 12 ರಂದು ಅವಕಾಶ ನೀಡಲಾಗುತ್ತದೆ.

ಫಲಿತಾಂಶ: ಈ ಪರೀಕ್ಷೆಯ ಫಲಿತಾಂಶವು ಮಾರ್ಚ್ 2027 ರ ಕೊನೆಯಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.

ಅರ್ಹತೆ ಮತ್ತು ಕಾಯ್ದಿರಿಸುವಿಕೆ ನಿಯಮಗಳು:

ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಸರ್ಕಾರಿ ಅಥವಾ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ವಿದ್ಯಾರ್ಥಿಗಳು ತಾವು ವಾಸಿಸುತ್ತಿರುವ ಮತ್ತು 5ನೇ ತರಗತಿ ಓದುತ್ತಿರುವ ಅದೇ ಜಿಲ್ಲೆಯ ನವೋದಯ ಶಾಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ನವೋದಯ ಶಾಲೆಗಳಲ್ಲಿ ಉಚಿತ ಶಿಕ್ಷಣ, ವಸತಿ, ಊಟ, ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ಒದಗಿಸಲಾಗುತ್ತದೆ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಸಿಕ 600 ರೂ. ‘ವಿದ್ಯಾಲಯ ವಿಕಾಸ ನಿಧಿ’ ಇರಲಿದ್ದು, ಹೆಣ್ಣುಮಕ್ಕಳು, SC/ST, ದಿವ್ಯಾಂಗ ಮತ್ತು BPL ಕುಟುಂಬದ ಮಕ್ಕಳಿಗೆ ಇದರಿಂದ ಸಂಪೂರ್ಣ ವಿನಾಯಿತಿ ಇದೆ.

Share

Leave a comment

Leave a Reply

Your email address will not be published. Required fields are marked *

Related Articles