ಬೆಂಗಳೂರು: ಪ್ರತಿದಿನದ ಆದಾಯ ಕೇವಲ 10 ರೂಪಾಯಿಗಳಿದ್ದ ಬಡ ಕುಟುಂಬದಿಂದ ಬಂದು, ಇಂದು 681 ಕೋಟಿ ರೂಪಾಯಿಗೂ ಅಧಿಕ ವಾರ್ಷಿಕ ವಹಿವಾಟು ನಡೆಸುವ ಬೃಹತ್ ಕಂಪನಿಯೊಂದನ್ನು ಕಟ್ಟುವುದು ಸಾಮಾನ್ಯ ಸಾಧನೆಯಲ್ಲ. ಇದು ಐಡಿ ಫ್ರೆಶ್ ಫುಡ್ಸ್‌ನ ಸಹ-ಸಾಪೇಕ್ಷಕ ಪಿ.ಸಿ. ಮುಸ್ತಫಾ ಅವರ ಸ್ಪೂರ್ತಿದಾಯಕ ಯಶೋಗಾಥೆ ಸ್ಟೋರಿ ಇದು.
ಬಡತನದಿಂದ ವಿದ್ಯಾಭ್ಯಾಸದವರೆಗೆ:
ಕೇರಳದ ವಯನಾಡ್ ಜಿಲ್ಲೆಯ ಮುಸ್ತಫಾ ಅವರು 6ನೇ ತರಗತಿಯಲ್ಲಿ ಅನುತ್ತೀರ್ಣರಾದ ಬಳಿಕ, ತಮ್ಮ ತಂದೆಯೊಂದಿಗೆ ಕೂಲಿ ಕೆಲಸಕ್ಕೆ ಹೋಗಲು ಆರಂಭಿಸಿದರು. ಆದರೆ, ಅವರ ಶಿಕ್ಷಕರೊಬ್ಬರು ಇದನ್ನು ಗಮನಿಸಿ, ಮತ್ತೆ ಶಾಲೆಗೆ ಕಳುಹಿಸಿ ಓದಿಗೆ ಪ್ರೋತ್ಸಾಹಿಸಿದರು. ಇದರೊಂದಿಗೆ ಜೀವನದ ದಿಕ್ಕೇ ಬದಲಾಯಿತು. ಕಠಿಣ ಪರಿಶ್ರಮದಿಂದ ಓದಿದ ಮುಸ್ತಫಾ, ಎನ್‌ಐಟಿ ಕಾಲಿಕತ್‌ನಲ್ಲಿ ಇಂಜಿನಿಯರಿಂಗ್ ಮುಗಿಸಿ, ನಂತರ ಐಐಎಂ ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದರು.
ಐಡಿ ಫ್ರೆಶ್ ಫುಡ್ಸ್ ಆರಂಭ:
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು, ಭಾರತಕ್ಕೆ ಮರಳಿ ತಮ್ಮ ಸೋದರರೊಂದಿಗೆ ಸೇರಿಕೊಂಡು 2005ರಲ್ಲಿ ಬೆಂಗಳೂರಿನಲ್ಲಿ ಕೇವಲ 50 ಚದರ ಅಡಿಯ ಅಡುಗೆಮನೆಯಲ್ಲಿ ‘ಐಡಿ ಫ್ರೆಶ್ ಫುಡ್ಸ್’ ಆರಂಭಿಸಿದರು. ಇಡ್ಲಿ ಮತ್ತು ದೋಸೆ ಹಿಟ್ಟನ್ನು (Batter) ಅತ್ಯಂತ ತಾಜಾವಾಗಿ ಗ್ರಾಹಕರಿಗೆ ತಲುಪಿಸುವ ಸರಳ ಯೋಚನೆ ಇಂದು ದೊಡ್ಡ ಯಶಸ್ಸು ಕಂಡಿದೆ.
ಕಂಪನಿಯ ಪ್ರಗತಿ:
ಪ್ರಸ್ತುತ ಇಡ್ಲಿ-ದೋಸೆ ಹಿಟ್ಟು ಮಾತ್ರವಲ್ಲದೆ, ಪರೋಟ, ಪನೀರ್, ಮೊಸರು ಮತ್ತು ಫಿಲ್ಟರ್ ಕಾಫಿಯಂತಹ ಉತ್ಪನ್ನಗಳ ಮೂಲಕ ಭಾರತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಮುಂಚೂಣಿಯಲ್ಲಿದೆ. FY25ನೇ ಸಾಲಿನಲ್ಲಿ ಕಂಪನಿಯು ರೂ. 681.38 ಕೋಟಿಗಳ ಕಾರ್ಯಾಚರಣೆ ಆದಾಯವನ್ನು ದಾಖಲಿಸಿದೆ.





Leave a comment