ನ್ಯೂಯಾರ್ಕ್/ಮುಂಬೈ: ಅಮೆರಿಕದ ನ್ಯೂಯಾರ್ಕ್ ನಗರದ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ ಮುಂಬೈ ಮೂಲದ ಪ್ರಣಯ್ ಜೋಶಿ ಎಂಬ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಮಾಡಿದ ವಿಚಿತ್ರ ಸಾಮಾಜಿಕ ಪ್ರಯೋಗವೊಂದು ಈಗ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಟೈಮ್ಸ್ ಸ್ಕ್ವೇರ್‌ನಂತಹ ಅತ್ಯಂತ ರದ್ದಿಯಿರುವ ಪ್ರವಾಸಿ ತಾಣದಲ್ಲಿ ಕೇವಲ 1 ಗಂಟೆಯೊಳಗೆ 100 ಭಾರತೀಯರನ್ನು ಗುರುತಿಸಿ ಮಾತನಾಡಿಸುವ ಸವಾಲನ್ನು ಪ್ರಣಯ್ ತಮ್ಮದಾಗಿಸಿಕೊಂಡಿದ್ದರು. ರಾತ್ರಿ 9:57ಕ್ಕೆ ಮೊಬೈಲ್‌ನಲ್ಲಿ ಟೈಮರ್ ಆನ್ ಮಾಡಿ ರಸ್ತೆಗಿಳಿದ ಅವರಿಗೆ ಮೊದಲ ಯತ್ನದಲ್ಲೇ ಭಾರಿ ಯಶಸ್ಸು ಸಿಕ್ಕಿತು. ಅವರು ಮಾತನಾಡಿಸಿದ ಮೊದಲ ತಂಡದಲ್ಲೇ 12 ಜನ ಭಾರತೀಯರಿದ್ದರು.
ಅಲ್ಲಿಂದ ಮುಂದೆ ಪ್ರವಾಸಿಗರು, ಕುಟುಂಬಗಳು ಹಾಗೂ ಯುವಕರ ತಂಡಗಳನ್ನು ಮಾತನಾಡಿಸುತ್ತಾ ಸಾಗಿದ ಅವರು, ಕೇವಲ 15 ನಿಮಿಷಗಳಲ್ಲಿ 32 ಭಾರತೀಯರನ್ನು ಗುರುತಿಸಿದರು. ಇಡೀ ಟೈಮ್ಸ್ ಸ್ಕ್ವೇರ್‌ನಾದ್ಯಂತ ಓಡಾಡುತ್ತಾ 48 ನಿಮಿಷಗಳಲ್ಲಿ ತಮ್ಮ 100 ಭಾರತೀಯರನ್ನು ಹುಡುಕುವ ಗುರಿಯನ್ನು ಪೂರ್ಣಗೊಳಿಸಿದರು.
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪ್ರಣಯ್ “ಮುಂದೆ ಯಾವ ಸವಾಲು ಮಾಡಲಿ?” ಎಂದು ನೆಟ್ಟಿಗರನ್ನು ಕೇಳಿದ್ದಾರೆ. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿರುವ ಜಾಲತಾಣ ಬಳಕೆದಾರರು, “ನಿಮ್ಮ ಮುಂದಿನ ಸವಾಲು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ 100 ವಿದೇಶಿಯರನ್ನು ಹುಡುಕುವುದಾಗಲಿ” ಎಂದು ತಮಾಷೆ ಮಾಡಿದ್ದಾರೆ
- 100 Indians in Times Square
- Indian diaspora NYC
- Mumbai content creator
- NYC viral challenge
- Prannay Joshi
- Prannay Joshi Instagram
- Times Square viral video
- Trending News
- ಇನ್‌ಸ್ಟಾಗ್ರಾಮ್ ಚಾಲೆಂಜ್
- ಟೈಮ್ಸ್ ಸ್ಕ್ವೇರ್ ವೈರಲ್ ವಿಡಿಯೋ
- ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್
- ನ್ಯೂಯಾರ್ಕ್ ಭಾರತೀಯರು
- ಪ್ರಣಯ್ ಜೋಶಿ
- ಮುಂಬೈ ಕಂಟೆಂಟ್ ಕ್ರಿಯೇಟರ್
- ವೈರಲ್ ಸುದ್ದಿ





Leave a comment