Home ಕ್ರೈಂ ನ್ಯೂಸ್ ಬ್ರೇಕ್‌ಅಪ್‌ನಿಂದ ಬಯಲಾಯ್ತು ಮಹಾರಾಷ್ಟ್ರ MPSC ಪೇಪರ್ ಲೀಕ್ ಹಗರಣ: ಮಾಜಿ ಪ್ರಿಯಕರನಿಗೆ ವಿದ್ಯಾರ್ಥಿಗಳ ವಿಚಿತ್ರ ಧನ್ಯವಾದ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಬ್ರೇಕ್‌ಅಪ್‌ನಿಂದ ಬಯಲಾಯ್ತು ಮಹಾರಾಷ್ಟ್ರ MPSC ಪೇಪರ್ ಲೀಕ್ ಹಗರಣ: ಮಾಜಿ ಪ್ರಿಯಕರನಿಗೆ ವಿದ್ಯಾರ್ಥಿಗಳ ವಿಚಿತ್ರ ಧನ್ಯವಾದ!

Share
MPSC
Share

ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ MPSC ಡ್ರಗ್ ಇನ್ಸ್‌ಪೆಕ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು (MPSC Paper Leak) ಪ್ರಸ್ತುತ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಅಚ್ಚರಿಯ ಸಂಗತಿಯೆಂದರೆ, ಈ ಬೃಹತ್ ಹಗರಣವು ಪೊಲೀಸರ ತನಿಖೆಯಿಂದಲ್ಲ, ಬದಲಿಗೆ ಪ್ರೇಮಿಗಳಿಬ್ಬರ ಬ್ರೇಕ್‌ಅಪ್‌ನಿಂದ ಹೊರಬಂದಿದೆ.

ಪ್ರಕರಣದ ವಿವರಗಳ ಪ್ರಕಾರ, ರುತುಜಾ ಪಾಟೀಲ್ ಹಾಗೂ ಗೌರವ್ ಪಾಟೀಲ್ ಪ್ರೇಮಿಗಳಾಗಿದ್ದರು. ರುತುಜಾ ಅವರ ತಂದೆ ಅಮೃತ್ ಪಾಟೀಲ್, ಕೋಚಿಂಗ್ ಸೆಂಟರ್ ಮಾಲೀಕರೊಬ್ಬರ ಮೂಲಕ ಲಕ್ಷಾಂತರ ರೂಪಾಯಿ ನೀಡಿ MPSC ಪರೀಕ್ಷೆಯ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡಿದ್ದರು. ಬಳಿಕ ರುತುಜಾ ಆ ಪ್ರಶ್ನೆ ಪತ್ರಿಕೆಯನ್ನು ತನ್ನ ಪ್ರಿಯಕರ ಗೌರವ್‌ಗೂ ಹಂಚಿಕೊಂಡಿದ್ದಳು.

ಆದರೆ, ಮಾರ್ಚ್ 22 ರಂದು ನಡೆದ ಪರೀಕ್ಷೆಯಲ್ಲಿ ಸೋರಿಕೆಯಾದ ಪತ್ರಿಕೆಯ ಸಹಾಯದಿಂದ ರುತುಜಾ ಉನ್ನತ ಅಂಕಗಳೊಂದಿಗೆ (7ನೇ Rank) ಪಾಸ್ ಆಗಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಳು. ಆದರೆ ಗೌರವ್ ಆ ಪರೀಕ್ಷೆಯಲ್ಲಿ ಫೇಲ್ ಆದನು. ಪರೀಕ್ಷೆಯ ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬ್ರೇಕ್‌ಅಪ್ ಆಯಿತು.

ತಾನು ಮೋಸಹೋಗಿದ್ದೇನೆ ಮತ್ತು ಉದ್ಯೋಗ ಸಿಕ್ಕ ಬಳಿಕ ರುತುಜಾ ಕೈಬಿಡುತ್ತಾಳೆ ಎಂಬ ಕೋಪದಿಂದ ಗೌರವ್, MPSC ಆಯೋಗಕ್ಕೆ ಇಮೇಲ್ ಮೂಲಕ ಪೇಪರ್ ಲೀಕ್ ಬಗ್ಗೆ ದೂರು ನೀಡಿದನು. ಇದರ ಬೆನ್ನಲ್ಲೇ ಎಚ್ಚೆತ್ತ ಮುಂಬೈ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಿ, MPSC ಅಧಿಕಾರಿಗಳು ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ.

ಈ ಹಗರಣ ಹೊರಬರಲು ಕಾರಣರಾದ ಆ ಮಾಜಿ ಜೋಡಿಯನ್ನು ವ್ಯಂಗ್ಯವಾಗಿ ಸ್ಮರಿಸಿ, ನಾಗ್ಪುರದ ಸಂವಿಧಾನ ಚೌಕ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ “ಥ್ಯಾಂಕ್ಸ್ ರುತುಜಾ, ಥ್ಯಾಂಕ್ಸ್ ಗೌರವ್” ಎಂದು ಬರೆದ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಾರೆ. ಸದ್ಯ MPSC ಈ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಮರುಪರೀಕ್ಷೆ ನಡೆಸುವುದಾಗಿ ಘೋಷಿಸಿದೆ.

Share

Leave a comment

Leave a Reply

Your email address will not be published. Required fields are marked *