Home ದಾವಣಗೆರೆ ಬೆಂಗಳೂರು ಟ್ರಾಫಿಕ್ ಸಂಕಷ್ಟ: 10 ಕಿ.ಮೀ ದೂರ ಕ್ರಮಿಸಲು 1 ಗಂಟೆ ತೆಗೆದುಕೊಂಡ CJP ವಕ್ತಾರ ಆಶುತೋಷ್ ರಾಂಕಾ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರು!
ದಾವಣಗೆರೆಬೆಂಗಳೂರು

ಬೆಂಗಳೂರು ಟ್ರಾಫಿಕ್ ಸಂಕಷ್ಟ: 10 ಕಿ.ಮೀ ದೂರ ಕ್ರಮಿಸಲು 1 ಗಂಟೆ ತೆಗೆದುಕೊಂಡ CJP ವಕ್ತಾರ ಆಶುತೋಷ್ ರಾಂಕಾ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರು!

Share
ಬೆಂಗಳೂರು
Share

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ  ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಈ ಕುರಿತು ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗಳು ನಡೆಯುತ್ತಿವೆ. ‘ಕಾಕ್ರೋಚ್ ಜನತಾ ಪಾರ್ಟಿ’ ವಕ್ತಾರರಾದ ಆಶುತೋಷ್ ರಾಂಕಾ ಅವರು ಬೆಂಗಳೂರಿನ ಟ್ರಾಫಿಕ್ ದಟ್ಟಣೆಯ ಬಗ್ಗೆ ವ್ಯಂಗ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಶಾಲಾ ಭೇಟಿಗಾಗಿ ತೆರಳಿದ್ದ ಆಶುತೋಷ್ ರಾಂಕಾ, ಕೇವಲ 10 ಕಿಲೋಮೀಟರ್ ದೂರವನ್ನು ತಲುಪಲು 1 ಗಂಟೆಗೂ ಅಧಿಕ ಸಮಯ ಹಿಡಿದಿದೆ ಎಂದು ತಮ್ಮ X (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕ್ಯಾಬ್‌ನ ಒಳಗೆ ಕುಳಿತುಕೊಂಡು ಪರಿಸ್ಥಿತಿಯನ್ನು ವಿವರಿಸಿರುವ ಅವರು, “ನಾವು ಅರ್ಧ ದಾರಿಯನ್ನೂ ತಲುಪಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

ಇದೇ ವೇಳೆ, ಬೆಂಗಳೂರಿನ ಜನಪ್ರಿಯ ಹವಾಮಾನವನ್ನು ವ್ಯಂಗ್ಯವಾಡಿದ ಅವರು, “ಬ್ರೋ, ಆದ್ರೆ ಬೆಂಗಳೂರು ಹವಾಮಾನ ಮಾತ್ರ ಸೂಪರ್ ಆಗಿದೆ ಬಿಡಿ” ಎಂದು ಟಾಂಗ್ ನೀಡಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಬೆಂಗಳೂರಿನ ದೈನಂದಿನ ಟ್ರಾಫಿಕ್ ನರಕಯಾತನೆಯನ್ನು ಒಪ್ಪಿಕೊಂಡರೆ, ಇನ್ನು ಕೆಲವು ಬಳಕೆದಾರರು “ಹಾಗಾದರೆ CJP ಪಕ್ಷವು ಈ ಟ್ರಾಫಿಕ್ ವಿರುದ್ಧ ಪ್ರತಿಭಟನೆ ಮಾಡಲಿ” ಎಂದು ಒತ್ತಾಯಿಸಿದ್ದಾರೆ. ಮತ್ತೊಬ್ಬರು, “ಯಾವುದೇ ಉದ್ಯೋಗದ ಗುರಿಗಳು ಅಥವಾ ಜವಾಬ್ದಾರಿಗಳು ಇಲ್ಲದಿದ್ದಾಗ ಮಾತ್ರ ಬೆಂಗಳೂರು ಹವಾಮಾನ ಅದ್ಭುತವೆಂದು ಅನಿಸುತ್ತದೆ” ಎಂದು ತಮಾಷೆಯಾಗಿ ತಿರುಗೇಟು ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *