SUDDIKSHANA KANNADA NEWS/ DAVANAGERE/ DATE-27-06-2025
ಚನ್ನಗಿರಿ: ಮಗಳು ಕೊಟ್ಟು ಮದುವೆ ಮಾಡಿದ್ದ 55 ವರ್ಷದ ಅತ್ತೆ ಜೊತೆ ಅಳಿಯ ಓಡಿ ಹೋದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದಿದೆ. ಅತ್ತೆ ಹಾಗೂ ಅಳಿಯ ಓಡಿ ಹೋಗಿದ್ದು, ಠಾಣೆಗೆ ಬರುವುದಾಗಿ ಅಳಿಯ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
READ ALSO THIS STORY: ಎಂ. ಪಿ. ರೇಣುಕಾಚಾರ್ಯಗೆ ಬಸವರಾಜ್ ಶಿವಗಂಗಾ ಪಂಥಾಹ್ವಾನ: ನಾನು ಪ್ರಮಾಣಕ್ಕೆ ಸಿದ್ಧ, ನೀನೂ ಸಿದ್ಧನಾ?
55 ವರ್ಷದ ಶಾಂತಾ ಹಾಗೂ 25 ವರ್ಷದ ಗಣೇಶ್ ಓಡಿ ಹೋದ ಜೋಡಿ. ತನ್ನ ಮಗಳನ್ನು ಶಾಂತಾ ಅವರು ಗಣೇಶ್ ಗೆ ಮದುವೆ ಮಾಡಿಕೊಟ್ಟಿದ್ದರು. ಮಗಳ ಮದುವೆಯಾದ ಕೇವಲ ಎರಡೇ ತಿಂಗಳಿಗೆ ಅಳಿಯನ ಜೊತೆ ಹೋಗಿದ್ದು,
ಇಡೀ ಗ್ರಾಮವೇ ಶಾಕ್ ಆಗಿದೆ. ಮಾತ್ರವಲ್ಲ, ತನ್ನ ಪತಿ ನೀಚತನದ ವಿರುದ್ಧ ಆತನ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪತಿ, ತಾಯಿ ಹುಡುಕಿಕೊಡಿ: ಚನ್ನಗಿರಿ ಪೊಲೀಸರಿಗೆ ಮನವಿ
ಶಾಂತಾ ಹಾಗೂ ಗಣೇಶ್ ಮೊದಲಿನಿಂದಲೂ ತುಂಬಾನೇ ಆತ್ಮೀಯರಾಗಿದ್ದರು. ಸಲುಗೆಯೂ ಇತ್ತು ಎಂದು ಹೇಳಲಾಗುತ್ತಿದೆ. ಖುಷಿ ಖುಷಿಯಾಗಿ ಪುತ್ರಿ ಜೊತೆ ಗಣೇಶ್ ಮದುವೆ ಮಾಡಿದ್ದ ಶಾಂತಾ ಮದುವೆ ಮುಂಚಿಗಿಂತ ನಂತರ ವರಸೆ ಬದಲಿಸಿದ್ದರು. ಗಣೇಶ್ ಜೊತೆ ಹೆಚ್ಚು ಒಡನಾಟ ಹೊಂದಿದ್ದಳು. ಇದು ಶಾಂತಾ ಪುತ್ರಿಯ ಅನುಮಾನಕ್ಕೆ ಕಾರಣವಾಗಿತ್ತು. ಗಣೇಶ್ ಮತ್ತು ಶಾಂತಾ ವಿರುದ್ಧ ದೂರು ದಾಖಲಾಗಿದೆ. ಪತಿ ಹಾಗೂ ತಾಯಿ ಹುಡುಕಿಕೊಂಡುವಂತೆ ಸ್ವತಃ ಪುತ್ರಿಯೇ ಪೊಲೀಸರಿಗೆ ದೂರು ನೀಡಿದ್ದಾರೆ.
ಅಳಿಯನಿಗೆ 25, ಅತ್ತೆಗೆ 55!
ಅಳಿಯನಿಗೆ ಇನ್ನು ಕೇವಲ 25 ವರ್ಷ. ಅತ್ತೆಗೆ ಅಳಿಯನಿಗಿಂತ 30 ವರ್ಷ ಜಾಸ್ತಿ. ಗಣೇಶ್ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದವನು ಎನ್ನಲಾಗಿದ್ದು. ಮೇ 2 ರಂದು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಪತ್ನಿಯನ್ನು ಬಿಟ್ಟು ಅತ್ತೆಯ ಜೊತೆ ಎಸ್ಕೇಪ್ ಆಗಿದ್ದಾನೆ.
ಶಾಂತಾ ಎರಡನೇ ಪತಿಯ ಪುತ್ರಿ
ಶಾಂತಾ ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವರ ಎರಡನೇ ಪತ್ನಿ. ಕಳೆದ 13 ವರ್ಷದ ಹಿಂದೆ ಮುದ್ದೇನಹಳ್ಳಿ ನಾಗರಾಜ್ ಎನ್ನುವವರ ಜೊತೆ ಮದುವೆಯಾಗಿ ಇಲ್ಲಿಗೆ ಬಂದಿದ್ದರು. ನಾಗರಾಜ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು
ಮಕ್ಕಳು, ಓರ್ವ ಮಗ ಕೂಡ ಇದ್ದಾನೆ. ನಾಗರಾಜ್ ಜೊತೆ ಹಿರಿಯ ಮಗಳು ಹೇಮಾ ವಾಸವಿದ್ದರು.
ಕಳೆದ ವರ್ಷಗಳ ಹಿಂದೆಯೇ ಶಾಂತಾಳು ಗಣೇಶ್ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ನನ್ನ ಮಗಳ ಮದುವೆಯಾಗು, ಮನೆ ಅಳಿಯನಾಗಿ ಇರು. ಜೊತೆಯಾಗಿ ಎಲ್ಲರೂ ಖುಷಿಖುಷಿಯಿಂದ ಇರೋಣ ಎಂದು ನಂಬಿಸಿ ಗಣೇಶ್ ಕರೆದುಕೊಂಡು ಬಂದಿದ್ದಳು. ಎರಡು ತಿಂಗಳ ಹಿಂದೆಯಷ್ಟೇ ಅದ್ದೂರಿಯಾಗಿ ಗಣೇಶನ ಜೊತೆಗೆ ಹಿರಿಯ ಮಗಳು ಹೇಮಾ ಜೊತೆ ನಾಗರಾಜ್ ವಿವಾಹ ಮಾಡಿಕೊಟ್ಟಿದ್ದರು.
ಮೊಬೈಲ್ ನಲ್ಲಿತ್ತು ರಹಸ್ಯ!
ಮದುವೆಯಾದ 15 ದಿನಕ್ಕೆ ಗಣೇಶ್ ತನ್ನ ಮಲ ಅತ್ತೆ ಶಾಂತಾ ಜೊತೆ ಅಕ್ರಮ ಸಂಬಂಧ ಹೊಂದಿರೋದು ಬೆಳಕಿಗೆ ಬಂದಿದೆ. ಗಣೇಶ್ ಮೊಬೈಲ್‌ನಲ್ಲಿ ಮಲತಾಯಿ ಶಾಂತಾ ಕಳಿಸಿದ್ದ ಅಶ್ಲೀಲ ಮೆಸೇಜ್‌ಗಳನ್ನು ಹೇಮಾ ಕಣ್ಣಾರೆ ನೋಡಿದ್ದಾರೆ. ಕೂಡಲೇ ತನ್ನ ತಂದೆಗೆ ಅಶ್ಲೀಲ ಮೆಸೇಜ್‌ಗಳನ್ನು ತೋರಿಸಿದ್ದಾಳೆ. ಮೊಬೈಲ್ ನಲ್ಲಿನ ಫೋಟೋಗಳನ್ನು ತನ್ನ ತಂದೆ ನಾಗರಾಜ್‌ಗೆ ಹೇಮಾ ಕಳುಹಿಸಿದ್ದಾರೆ.
READ ALSO THIS STORY: “ಆಣೆ ಪ್ರಮಾಣಕ್ಕೆ ಸಿದ್ಧನಿದ್ದೇನೆ”: Channagiri ಶಾಸಕರ ಪಂಥಾಹ್ವಾನ ಸ್ವೀಕರಿಸಿದ ಎಂ. ಪಿ. ರೇಣುಕಾಚಾರ್ಯ!