Home ಕ್ರೈಂ ನ್ಯೂಸ್ ಟಿವಿಎಸ್ ಕುಟುಂಬದಲ್ಲಿ ಆಸ್ತಿ ಕಲಹ: ತಂದೆ ವೇಣು ಶ್ರೀನಿವಾಸನ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೊರೆ ಹೋದ ಲಕ್ಷ್ಮಿ ವೇಣು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುವಾಣಿಜ್ಯ

ಟಿವಿಎಸ್ ಕುಟುಂಬದಲ್ಲಿ ಆಸ್ತಿ ಕಲಹ: ತಂದೆ ವೇಣು ಶ್ರೀನಿವಾಸನ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೊರೆ ಹೋದ ಲಕ್ಷ್ಮಿ ವೇಣು!

Share
ಟಿವಿಎಸ್
Share

ಚೆನ್ನೈ: ಪ್ರಸಿದ್ಧ ಟಿವಿಎಸ್ (TVS) ಕುಟುಂಬದ ವಾರಸುದಾರರಾದ ಡಾ. ಲಕ್ಷ್ಮಿ ವೇಣು ಅವರು ತಮ್ಮ ತಂದೆ ವೇಣು ಶ್ರೀನಿವಾಸನ್ ಅವರ ವಿರುದ್ಧ ಕುಟುಂಬದ ಜಂಟಿ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ನಡೆಸಿದ ಪ್ರಯತ್ನಗಳು ವಿಫಲಗೊಂಡ ಹಿನ್ನೆಲೆಯಲ್ಲಿ ಲಕ್ಷ್ಮಿ ವೇಣು ಈ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ತಮ್ಮ ಮುತ್ತಾತ ಮತ್ತು ತಾತ ಕಟ್ಟಿಬೆಳೆಸಿದ ಆಸ್ತಿಯಲ್ಲಿ ತಮ್ಮ ಸಹೋದರನಿಗೆ ಸಿಗುವಷ್ಟೇ ಸಮಾನ ಹಕ್ಕು ತಮಗೂ ಇದೆ ಎಂದು ಲಕ್ಷ್ಮಿ ವೇಣು ವಾದಿಸಿದ್ದಾರೆ.

ಈ ಕಾನೂನು ಸಮರವು ಕೇವಲ ಕುಟುಂಬದ ಆಸ್ತಿ ಪಾಲುದಾರಿಕೆಗೆ ಸಂಬಂಧಿಸಿದ್ದಾಗಿದ್ದು, ಯಾವುದೇ ಕಂಪನಿಯ ವ್ಯವಹಾರಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮಗಳು ಲಕ್ಷ್ಮಿ ವೇಣುಗೆ ಸಮಾನ ನ್ಯಾಯ ಸಿಗಬೇಕು ಎಂದು ಬೆಂಬಲಿಸಿರುವ ಅವರ ತಾಯಿ ಮಲ್ಲಿಕಾ ಶ್ರೀನಿವಾಸನ್, ಮಗ ಮತ್ತು ಮಗಳು ಇಬ್ಬರೂ ತನಗೆ ಸಮಾನರು ಎಂದು ಹೇಳಿಕೆ ನೀಡಿದ್ದಾರೆ.

ಹೈಕೋರ್ಟ್‌ನಲ್ಲಿ ದಾವೆ: ಟಿವಿಎಸ್ ಕುಟುಂಬದ ಜಂಟಿ ಆಸ್ತಿ ವಿಭಜನೆ ಹಾಗೂ ತಮ್ಮ ನ್ಯಾಯಯುತ ಪಾಲನ್ನು ಕೋರಿ ಡಾ. ಲಕ್ಷ್ಮಿ ವೇಣು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕಪಿಲ್ ಸಿಬಲ್ ವಾದ: ಮಗಳು ಮತ್ತು ತಾಯಿಯ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಹಿಂದೂ ಉತ್ತರಾಧಿಕಾರ ಕಾಯ್ದೆಯನ್ವಯ ಹೆಣ್ಣುಮಕ್ಕಳಿಗೂ ಸಮಾನ ಹಕ್ಕಿದೆ ಎಂದು ವಾದಿಸಿದ್ದಾರೆ.

ಅಭಿಷೇಕ್ ಮನು ಸಿಂಘ್ವಿ ವಾದ: ತಂದೆ ವೇಣು ಶ್ರೀನಿವಾಸನ್ ಪರ ವಾದ ಮಂಡಿಸುತ್ತಿರುವ ಅಭಿಷೇಕ್ ಮನು ಸಿಂಘ್ವಿ, 2017ರಲ್ಲೇ ಕುಟುಂಬದ ಒಪ್ಪಂದದಂತೆ ಆಸ್ತಿ ಹಂಚಿಕೆಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕುಟುಂಬದ ಆಸ್ತಿ ಹಾಗೂ ಹಿಂದಿನ ಒಪ್ಪಂದಗಳ ಸಿಂಧುತ್ವದ ಕುರಿತು ಎರಡೂ ಕಡೆಗಳಿಂದ ಭಿನ್ನ ನಿಲುವುಗಳು ವ್ಯಕ್ತವಾಗಿರುವುದರಿಂದ, ಈ ಆಸ್ತಿ ವಿವಾದ ಈಗ ಮದ್ರಾಸ್ ಹೈಕೋರ್ಟ್‌ನ ಅಂಗಳದಲ್ಲಿದೆ. ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share

Recent Posts

Recent Comments

No comments to show.
Related Articles