SUDDIKSHANA KANNADA NEWS/ DAVANAGERE/ DATE:04-04-2025
ನವದೆಹಲಿ: ಪಾಕಿಸ್ತಾನಿ ಟಿಕ್ಟಾಕ್ ತಾರೆ ಮಿನಾಹಿಲ್ ಮಲಿಕ್ ಅವರ ಖಾಸಗಿ ವಿಡಿಯೋಗಳು ಲೀಕ್ ಆಗಿದ್ದು, ವೈರಲ್ ಆಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿಸಿದೆ.
ಪಾಕಿಸ್ತಾನಿ ಟಿಕ್ಟಾಕ್ ತಾರೆ ಮಿನಾಹಿಲ್ ಮಲಿಕ್ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಎಂಎಂಎಸ್ ಸೋರಿಕೆ ವಿವಾದದ ಬಿರುಗಾಳಿ ಎಬ್ಬಿಸಿದೆ.
ರಂಜಾನ್ ಹಬ್ಬ ಮುಗಿದ ಕೆಲ ದಿನಗಳಲ್ಲಿ, ಅವರದ್ದೇ ಎಂದು ಹೇಳಲಾದ ಮತ್ತೊಂದು ಖಾಸಗಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೂ ಕಾರಣವಾಗಿದೆ.
ಈ ಹಿಂದೆ ಅಂದರೆ 2024ರಲ್ಲಿ ಮಿನಾಹಿಲ್ ಅವರದ್ದೇ ಎನ್ನಲಾದ ವಿಡಿಯೋಗಳು ವೈರಲ್ ಆಗಿದ್ದವು. ಆಗಲೂ ಆಕ್ರೋಶ ಭುಗಿಲೆದ್ದಿತ್ತು. ಆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಮತ್ತೆ ಆಕ್ಟೀವ್ ಆಗಿದ್ದರು. ಆದ್ರೆ, ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟಿ ಈ ವಿಡಿಯೋಗಳು ಅಸಲಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇವು AI-ರಚಿಸಿದ ಡೀಪ್ಫೇಕ್ಗಳು ಎಂದಿದ್ದರೆ, ಈಗಾಗಲೇ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಗೆ ದೂರು ಸಲ್ಲಿಸಿದ್ದಾರೆ. ಮತ್ತು ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕನಿಷ್ಠ ಎಂಟರಿಂದ ಒಂಬತ್ತು ವೀಡಿಯೊಗಳು ವೈರಲ್ ಆಗುತ್ತಿವೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮ ತಾರೆಯರು, ವಿಶೇಷವಾಗಿ ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ
ಲಕ್ಷಾಂತರ ಬೆಂಬಲಿಗರನ್ನು ಹೊಂದಿದ್ದಾರೆ. ಖಾಸಗಿ ವೀಡಿಯೊಗಳು ಆನ್ಲೈನ್ನಲ್ಲಿ ಸೋರಿಕೆಯಾದ ಕೆಲವು ತಿಂಗಳ ನಂತರ, ಪಾಕಿಸ್ತಾನದ ಜನಪ್ರಿಯ ಟಿಕ್ಟೋಕರ್ ಮಿನಾಹಿಲ್ ಮಲಿಕ್ ಅವರ ಹೆಚ್ಚು ಚರ್ಚೆಯಾದ ವೀಡಿಯೊಗಳು
ಮತ್ತೊಮ್ಮೆ ಆನ್ಲೈನ್ನಲ್ಲಿ ಸೋರಿಕೆಯಾಗಿವೆ ಎಂದು ಹೇಳಲಾಗುತ್ತಿದೆ.
ಅಭಿಮಾನಿಗಳ ಒಂದು ಬಳಗ ಆನ್ಲೈನ್ನಲ್ಲಿ ಸೋರಿಕೆ ಆಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಅನೇಕರು ಸಾಮಾಜಿಕ ಮಾಧ್ಯಮ ಯಾರ ಜೀವನವನ್ನು ಹೇಗೆ ಹಾಳುಮಾಡುತ್ತದೆ ಎಂಬುದಕ್ಕೆ ನಿದರ್ಶನ ಎನ್ನುತ್ತಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ ನನ್ನದಲ್ಲ. ಇದು ನಕಲಿ. ಇಲ್ಲಿ ಯಾರೂ ನನಗೆ ಬುದ್ದಿವಾದ ಹೇಳುವುದಕ್ಕೆ ಬರಬೇಡಿ. ನನ್ನ ಬೆನ್ನ ಹಿಂದೆ ಯಾರು ಏನೇ ಮಾತಾನಾಡಬೇಡಿ ಎಂದು ಮಿನಾಹಿಲ್ ಮಲಿಕ್ ಸ್ಪಷ್ಟನೆ ನೀಡಿದ್ದಾರೆ. ನೀವು ನನ್ನನ್ನು ಯಾವ ದೃಷ್ಟಿಯಿಂದ ನೋಡುತ್ತಿರೋ ಅದು ನನಗೆ ಬೇಕಾಗಿಲ್ಲಯಾರು ಏನು ಬೇಕಾದರೂ ಮಾಡಿಕೊಳ್ಳಿ.” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.