SUDDIKSHANA KANNADA NEWS/ DAVANAGERE/ DATE:25_07_2025
ದಾವಣಗೆರೆ: ನಗರದ ಎನ್ ಹೆಚ್ 48 ಬಾಡಾ ಕ್ರಾಸ್ ಸೇತುವೆ ಬಳಿಯ ಕಲ್ಪನಹಳ್ಳಿ ಕಡೆ ಹೋಗುವ ಶ್ರೀ ಲಕ್ಷ್ಮೀ ರಂಗನಾಥ ಟ್ರಾನ್ಸ್ ಪೋರ್ಟ್ ನಾಮಫಲಕ ಮುಂಭಾಗದಲ್ಲಿ MDMA ಡ್ರಗ್ಸ್ ಮಾರಾಟ ಮತ್ತು ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ನೈಜೇರಿಯಾ ದೇಶದ ಇಬ್ಬರು, ಬಾಪೂಜಿ ಟೆಂಟಲ್ ಕಾಲೇಜಿನ ಬಿಡಿಎಸ್ ವಿದ್ಯಾರ್ಥಿ ಸೇರಿದಂತೆ ಐವರನ್ನು ಸಿಇಎನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ನೈಜೇರಾಯ ದೇಶದ ಲೆಗೋ ಸಿಟಿಯ ಪ್ಯಾಟ್ರಿಕ್ (44), ನೈಜೇರಿಯಾದ ಅಬಾ ಸಿಟಿಯ ಪ್ರಾಮೇಸೇ (42), ಬೆಂಗಳೂರಿನ ಯಶವಂತಪುರದ ಇಂಗ್ಲೀಷ್ ಶಾಲೆ ಹಿಂಭಾಗದ ಆಕ್ಸ್ ಫರ್ಡ್ ಗೋಕುಲ್ 1ನೇ ಹಂತದ ವೀಲ್ಸ್ ಐ ಕಂಪೆನಿಯಲ್ಲಿ ಸೇಲ್ಸ್ ಅಂಡ್ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದ ಮಹಮ್ಮದ್ ಬಿಲಾಲ್ (29), ಬೆಂಗಳೂರಿನ ಯಶವಂತಪುರದ ಗೋಕುಲ್ ಬಡಾವಣೆಯ ಎಲ್. ಎನ್. ಕಾಲೋನಿಯ 2ನೇ ಕ್ರಾಸ್ ವಾಸಿ ಸೈಯದ್ ಜಾಬೀರ್ (31), ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜಿನ ಬಿಡಿಎಸ್ ವಿದ್ಯಾರ್ಥಿ ಸಿ. ಎನ್. ಕಲ್ಯಾಣ್ (24) ಬಂಧಿತ ಆರೋಪಿಗಳು.
READ ALSO THIS STORY: ಪ್ರಧಾನಿ ನರೇಂದ್ರ ಮೋದಿಯವರಿಗೆ “ಪ್ರಜಾಪ್ರಭುತ್ವ ವಿಶ್ವನಾಯಕ” ಹಿರಿಮೆ: ಶೇ.75ರಷ್ಟು ಅನುಮೋದನೆಯೊಂದಿಗೆ ವಿಶ್ವದಲ್ಲೇ ಅಗ್ರಸ್ಥಾನ!
ಬಾಡಾ ಕ್ರಾಸ್ ಸೇತುವೆ ಕಲ್ಪನಹಳ್ಳಿಗೆ ಹೋಗುವ ಕಡೆಗಳಲ್ಲಿ ಯಾರೋ KA-21 MA-0602 ಕಾರಿನಲ್ಲಿ ಬಂದು ಅಕ್ರಮವಾಗಿ MDMA ಅನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತಂತೆ ಪೊಲೀಸರಿಗೆ ಮಾಹಿತಿ
ಸಿಕ್ಕಿದೆ. ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಕಾರು ನಿಂತಿದ್ದು ಕಂಡು ಬಂದಿದೆ. ಪೊಲೀಸರು ಕಾರಿನಲ್ಲಿದ್ದ ಐವರು ಇದ್ದದ್ದು ಗೊತ್ತಾಗಿದ್ದು, ಕಾರಿನಿಂದ ಕೆಳಗಿಳಿಸಿ ವಿಚಾರಣೆ ನೆಡಸಿದ್ದಾರೆ. ಈ ವೇಳೆ ಸರಿಯಾದ ಉತ್ತರ ನೀಡದೇ ತಡವರಿಸಿದ್ದಾರೆ.
ತುಮಕೂರಿನ ವೈ. ಎನ್. ಹೊಸಕೋಟೆಯ ಎಂಜಿ ರಸ್ತೆಯ ವಾಸಿಯಾದ ಬಾಪೂಜಿ ಡೆಂಟಲ್ ಕಾಲೇಜಿನ ಬಿಡಿಎಸ್ ವಿದ್ಯಾರ್ಥಿಯಾದ ಸಿ. ಎನ್. ಕಲ್ಯಾಣ್ ಡೆಂಟಲ್ ಬಾಯ್ಸ್ ಹಾಸ್ಟೆಲ್ ನಲ್ಲಿ ಇದ್ದುಓದುತ್ತಿದ್ದ ಎಂದು ತಿಳಿದು ಬಂದಿದೆ. ಕಲ್ಯಾಣನಿಗೆ MDMA ಡ್ರಗ್ಸ್ ಕೊಟ್ಟು ಮಾರಾಟ ಮಾಡಿ ಹೋಗಲು ಬಂದಿರುವುದಾಗಿ ಆರೋಪಿಗಳು ಹೇಳಿದ್ದು, MDMA ಕಾರಿನ ಎಡಭಾಗದಲ್ಲಿರುವ ಡ್ಯಾಶ್ ಬೋರ್ಡ್ ನಲ್ಲಿರುವುದಾಗಿ ತಿಳಿಸಿದ್ದಾರೆ. ಮಹಮ್ಮದ್ ಜಾಬೀರ್ ಕಾರಿನ ಮುಂದಿನ ಡ್ಯಾಶ್ ಬೋರ್ಡ್ ನಿಂದ ಒಂದು ಕಪ್ಪು ಮತ್ತು ಬಿಳಿ ಬಣ್ಣದ ಜಿಪ್ ಇರುವ ಬ್ಯಾಗ್ ಅನ್ನು ಪೊಲೀಸರಿಗೆ ನೀಡಿದ್ದಾನೆ.
ಇದನ್ನು ಪೊಲೀಸರು ಪರಿಶೀಲಿಸಿದಾಗ WASHBAG ಎಂದು ಮೇಲೆ ಬರೆಯಲಾಗಿತ್ತು. ಬ್ಯಾಗ್ ತೆರೆದಾಗ CLASSIC connect ಎಂಬ ಹೆಸರಿನ ಸಿಗರೇಟ್ ಪ್ಯಾಕ್ ಇತ್ತು. ಸಿಗರೇಟ್ ಒಳ ಭಾಗದಲ್ಲಿ ಮಡಿಚಿಟ್ಟಿದ್ದ ಒಂದು ಬಿಳಿ ಹಾಳೆ ತೆಗೆದು ನೋಡಿದಾಗ SOCO ತಂಡದವರು ಪರಿಶೀಲಿಸಿ ನೋಡಿದಾಗ MDMA ಡ್ರಗ್ಸ್ ಇರುವುದು ಪತ್ತೆಯಾಗಿದೆ.
ಪ್ಲಾಸ್ಟಿಕ್ ಕವರ್ ಅನ್ನು ಎಲೆಕ್ಟ್ರಾನಿಕ್ ತೂಕದ ಯಂತ್ರದಿಂದ ತೂಕ ಮಾಡಲಾಗಿ 13 ಗ್ರಾಂ MDMA ಇರುವುದು ತಿಳಿದು ಬಂದಿದೆ. ಅಂದಾಜು ಬೆಲೆ 25,000 ರೂಪಾಯಿ ಆಗಿದ್ದು, ಬಂಧಿತರಿಂದ 6 ಮೊಬೈಲ್ ಮತ್ತು ಒಂದು ಕಾರು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಸಿ.ಇ.ಎನ್ ಅಪರಾಧ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ತನಿಖೆಯಲ್ಲಿದೆ.
ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ನಾಗಪ್ಪ ಬಂಕಾಳಿ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಸಂತ ಹೆಚ್.ಸಿ., ಪೊಲೀಸ್ ಉಪನಿರೀಕ್ಷಕ ಸಾಗರ್, ಸಿಬ್ಬಂದಿಯವರಾದ ನಿಜಲಿಂಗಪ್ಪ, ಪ್ರಕಾಶ್, ಮಂಜುನಾಥ, ಷಣ್ಮಖ, ಗೋವಿಂದರಾಜ್ ಶಿವರಾಜ, ರವಿ. ಅಶೋಕ್ ಅವರು ಕಾರ್ಯಾಚರಣೆ ನಡೆಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಆರೋಪಿಗಳನ್ನು ಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.