ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮತ್ಸ್ಯ ವಾಹಿನಿ ಯೋಜನೆ: ಫಲಾನುಭವಿಗೆ ತ್ರಿಚಕ್ರ ವಾಹನ ವಿತರಿಸಿದ ಸಂಸದೆ ಡಾ. ಪ್ರಭಾ‌ಮಲ್ಲಿಕಾರ್ಜುನ್‌

On: May 6, 2025 5:21 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-06-05-2025

ದಾವಣಗೆರೆ: ಮೀನುಗಾರಿಕೆ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಮಹತ್ವಕಾಂಕ್ಷೆಯ ಉದ್ದೇಶದಿಂದ ಕೇಂದ್ರ ಮತ್ಸ್ಯ ಸಂಪದ ಯೋಜನೆಯಡಿ ಮಂಜೂರಾದ ಪರಿಸರ ಸ್ನೇಹಿ ಮೀನು‌ ಮಾರಾಟ ತ್ರಿಚಕ್ರ ವಾಹನಕ್ಕೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆಯ ಗೃಹಕಚೇರಿ ಆವರಣದಲ್ಲಿ ಚಾಲನೆ ನೀಡಿದರು. ಫಲಾನುಭವಿ ಮಹಿಳೆಗೆ ಕೀಲಿಕೈ‌ ಹಸ್ತಾಂತರಿಸಿದರು.

ಈ ವಾಹನದಲ್ಲಿ ಆಧುನಿಕ ವಿನ್ಯಾಸವಿದ್ದು ಎಲ್ಲಾರೀತಿಯಲ್ಲೂ ಅನುಕೂಲಕರವಾಗಿದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ.

ಕರ್ನಾಟಕ ರಾಜ್ಯಕ್ಕೆ 150 ಮತ್ಸ್ಯ ವಾಹಿನಿ ವಾಹನ‌ ನೀಡಲಾಗಿದ್ದು ಪ್ರತಿ ಜಿಲ್ಲೆಗೆ 5 ಫಲಾನುಭವಿಗಳಿಗೆ‌ ಈ‌ ವಾಹನ ಲಭ್ಯವಾಗಿದೆ.ದಾವಣಗೆರೆಯಲ್ಲಿಯೂ ಫಲಾನುಭವಿ ಮಹಿಳೆಗೆ ತ್ರಿಚಕ್ರ ವಾಹನ ನೀಡಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment

Click it!
Close