SUDDIKSHANA KANNADA NEWS/ DAVANAGERE/ DATE:22-02-2024
ದಾವಣಗೆರೆ (Davanagere) : ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆ. ಜಿಲ್ಲೆಯಾದ್ಯಂತ ಪಾದಯಾತ್ರೆಯೊಂದಿಗೆ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದೇ ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ. ಬಿ. ವಿನಯ್ ಕುಮಾರ್. ಸೋಷಿಯಲ್ ಮೀಡಿಯಾದಲ್ಲಿ ಯುವ ನಾಯಕನಿಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಮಾತ್ರವಲ್ಲ, ಧ್ಯೇಯೋದ್ದೇಶ, ಕಾರ್ಯಯೋಜನೆ, ಕಾರ್ಯಪರತೆ, ವೃತ್ತಿಪರತೆ, ಚಿಂತನೆಗಳು ಜನರನ್ನು ಆಕರ್ಷಿಸಿವೆ.
ವಿನಯ್ ಕುಮಾರ್ ರಾಜಕಾರಣಕ್ಕೆ ಪಾದಯಾತ್ರೆ ಮಾಡುತ್ತಿದ್ದಂತೆ ಹತ್ತು ಹಲವು ವಿಚಾರಗಳು ಮುನ್ನೆಲೆಗೆ ಬಂದಿವೆ. ವಿಕಲಚೇತನರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರ ಕಣ್ಮಣಿ ಎನಿಸಿಕೊಂಡರು.
ಈ ಸುದ್ದಿಯನ್ನೂ ಓದಿ: ಅಡಿಕೆ ಧಾರಣೆಯು ಇಳಿಮುಖದತ್ತ ಸಾಗಲು “ಇದೇ” ಕಾರಣ…? ಭಾರೀ ಕುಸಿತವಾಗಲು “ಈ ಅಕ್ರಮ”ವೇ ಕಾರಣನಾ…?
ಇವರ ಕಾರ್ಯಗಳು ಎಲ್ಲರನ್ನೂ ಗಮನ ಸೆಳೆದವು. ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ಶಾಲಾ ಕಾಲೇಜುಗಳಿಗೆ ಸಹಾಯ, ಗ್ರಾಮೀಣ ಭಾಗದ ಮಕ್ಕಳ ಓದಿಗೆ ಸಹಾಯ, ಪೀಠೋಪಕರಣ, ಪಠ್ಯಪುಸ್ತಕ, ಶೂ, ಶಾಲಾ ಶುಲ್ಕ ಸೇರಿದಂತೆ ಎಲ್ಲಾ ರೀತಿಯ ಜನಪರ ಕಾರ್ಯಗಳು ಶರವೇಗದಲ್ಲಿ ಜಿಲ್ಲೆಯ ಜನರ ಮುಟ್ಟಿದವು.
ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು, ವಿಕಲಚೇತನರು, ದಿವ್ಯಾಂಗದ ಜನರಿಗಾಗಿ ಕಟ್ಟಿಸಲಾಗಿರುವ ಸಿಆರ್ ಸಿ ಕಟ್ಟಡದ ಉದ್ಘಾಟನೆ ಸಮಾರಂಭದ ವೇಳೆ ಕೊಟ್ಟಿರುವ ಮಾಹಿತಿ. ವಿನಯ್ ಕುಮಾರ್ ಯಾವುದೇ ಅಧಿಕಾರ ಇಲ್ಲದೇ, ಸ್ವಂತ ಶ್ರಮದಿಂದ, ರಾಜಕಾರಣದಲ್ಲಿ ಏಕಲವ್ಯನಂತೆ ಮುನ್ನುಗ್ಗುತ್ತಾ ಮಾಡುತ್ತಿರುವ ಕಾರ್ಯಗಳು ಬಿಜೆಪಿ ನಾಯಕರ ನಿದ್ದೆಗೆಡಿಸಿವೆ. ಹಾಗಾಗಿ, ವಿನಯ್ ಕುಮಾರ್ ಅವರು ಕೈಗೊಂಡ ಕಾರ್ಯಗಳತ್ತ ಚಿತ್ತ ನೆಟ್ಟಿರುವಂತೆ ಕಾಣುತ್ತಿದ್ದು, ಬಿಜೆಪಿಯವರು ಈ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸ ಹೊರಟಿರುವುದನ್ನು ಗಮನಿಸಿದರೆ ಎಷ್ಟು ದೂರದೃಷ್ಟಿತ್ವ ವಿನಯ್ ಕುಮಾರ್ ಅವರಿಗಿದೆ ಎಂಬುದು ಗೊತ್ತಾಗಿದೆ.
ಸರ್ವೆಯಲ್ಲಿ ಏನಿದೆ…?
ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ನಡೆಸಲಾಗಿದೆ. ಈ ಸರ್ವೆ ಪ್ರಕಾರ ಕಾಂಗ್ರೆಸ್ ಪಕ್ಷದಿಂದ ಯಾರು ಸ್ಪರ್ಧೆ ಮಾಡಬೇಕು ಎಂಬ ಪ್ರಶ್ನೆ ಕೇಳಲಾಗಿತ್ತು. ವಿನಯ್ ಕುಮಾರ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಹಾಕಲಾಗಿತ್ತು. ಆದ್ರೆ, ಸರ್ವೆಯಲ್ಲಿ ವಿನಯ್ ಕುಮಾರ್ ಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಮಾತ್ರವಲ್ಲ, ವಿನಯ್ ಕುಮಾರ್ ಅವರ ಪರ ಶೇಕಡಾ 85ರಷ್ಟು ಮತಗಳು ಬಂದಿದ್ದರೆ, ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಶೇಕಡಾ 15ರಷ್ಟು ಮತಗಳು ಬಂದಿವೆ. ಲೋಕಸಭೆಗೆ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತಂತೆ ಮನೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಈಗ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕಾರ್ಯಕರ್ತರು, ಮುಖಂಡರ ಒತ್ತಡ ಇದೆ. ಮುಂದೆ ನೋಡೋಣ. ಹೈಕಮಾಂಡ್ ಏನು ಹೇಳುತ್ತದೆ ಎಂದು ಸ್ವತಃ ಪ್ರಭಾ ಮಲ್ಲಿಕಾರ್ಜುನ್ ಅವರೇ ಹೇಳಿದ್ದರು.
ವಿನಯ್ ರತ್ತ ಜನರ ಚಿತ್ತ:
ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟ್ರಾಗ್ರಾಂ ಸೇರಿದಂತೆ ಎಲ್ಲೆಡೆ ಈ ಅಭಿಯಾನ ನಡೆಸಲಾಗಿದೆ. ಈ ಅಭಿಯಾನದಲ್ಲಿ ಬಹುತೇಕರು ವಿನಯ್ ಕುಮಾರ್ ಅವರ ಹೆಸರನ್ನು ಪ್ರಬಲವಾಗಿ ಒಪ್ಪಿದ್ದಾರೆ. ವಿನಯ್ ಕುಮಾರ್ ಯುವ ರಾಜಕಾರಣಿ.
ಐಎಎಸ್ ತರಬೇತಿ ಸಂಸ್ಥೆ ಮೂಲಕ ರಾಜ್ಯ ಮಾತ್ರವಲ್ಲ, ರಾಷ್ಟ್ರಾದ್ಯಂತ ಹೆಸರು ಮಾಡಿದ್ದಾರೆ. ಇಂಥ ಯುವಕರು ರಾಜಕಾರಣಕ್ಕೆ ಬೇಕು. ಇಂಥವರು ಸ್ಪರ್ಧೆ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಕಾಂಗ್ರೆಸ್ ಪಕ್ಷವು ಪ್ರಬಲ ಪೈಪೋಟಿ
ನೀಡುವ ಜೊತೆಗೆ ಗೆಲ್ಲುವ ಸಾಧ್ಯತೆ ಇದೆ ಎಂಬ ಪ್ರತಿಕ್ರಿಯೆ ನೀಡಿದ್ದರೆ, ಮತ್ತೆ ಕೆಲವರು ವಿನಯ್ ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆಲುವು ಖಚಿತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರಂತೂ ವಿನಯ್ ಕುಮಾರ್
ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ ಎಂಬುದನ್ನೂ ಪ್ರಸ್ತಾಪ ಮಾಡಿದ್ದಾರೆ.
ರಾಷ್ಟ್ರನಾಯಕರ ಕಣ್ಣು ದಾವಣಗೆರೆ ಮೇಲ್ಯಾಕೆ…?
ಬಿಜೆಪಿ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳು. ಈ ಎರಡೂ ಪಕ್ಷಗಳಿಗೂ ದಾವಣಗೆರೆ ಮೇಲೆ ಚಿತ್ತ ನೆಟ್ಟಿರುತ್ತದೆ. ಕರ್ನಾಟಕದ ಮಧ್ಯಭಾಗವಾದ ದಾವಣಗೆರೆ ಮೊದಲಿನಿಂದಲೂ ರಾಜಕಾರಣಕ್ಕೆ ಅದೃಷ್ಟದ ನೆಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದಾವಣಗೆರೆ ಜಿಲ್ಲೆಯಾಗುವುದಕ್ಕಿಂತ ಮುಂಚಿನಿಂದಲೂ ಈ ಇತಿಹಾಸ ಇದೆ. ಹಾಗಾಗಿ, ದಾವಣಗೆರೆ ಎಲ್ಲಾ ಪಕ್ಷಗಳ, ಮುಖಂಡರ ನೆಚ್ಚಿನ ತಾಣ. ಜನಪ್ರಿಯತೆ ಉತ್ತುಂಗಕ್ಕೆ ಕೊಂಡೊಯ್ದ ನೆಲ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆಯಿಂದಲೇ ಅಕ್ಕಿ ಮುಷ್ಠಿ ಅಭಿಯಾನಕ್ಕೆ ಚಾಲನೆ ಕೊಟ್ಟು ಕರುನಾಡಿನ ಚುನಾವಣಾ ರಣಕಹಳೆ ಊದಿದ್ದರು ಆಗಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ. ಬಿಜೆಪಿಯು ಹೆಚ್ಚಿನ ಸ್ಥಾನ ಗಳಿಸಿತ್ತು. ಈ
ಹಿಂದೆ ಇಲ್ಲಿ ನಡೆದಿರುವ ಎಲ್ಲಾ ಸಮಾವೇಶಗಳೂ ಸಾಕ್ಷಿ.
ಬಿಜೆಪಿ, ಕಾಂಗ್ರೆಸ್ ಗೂ ಅದೃಷ್ಟದ ನೆಲ:
ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಬಿಜೆಪಿ ಪಕ್ಷಕ್ಕಂತೂ ಈ ನೆಲದ ಮೇಲೆ ತುಂಬಾನೇ ನಂಬಿಕೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ನಾಯಕರ ಕಣ್ಣು ಇಲ್ಲಿ ನೆಟ್ಟಿರುತ್ತದೆ. ಕಾಂಗ್ರೆಸ್ ಪಕ್ಷಕ್ಕೂ ಅಷ್ಟೇ. ಸಿದ್ದರಾಮೋತ್ಸವದಂಥ ಭಾರೀ ಯಶಸ್ಸು ಕೊಟ್ಟಿದ್ದು ಸುಳ್ಳೇನಲ್ಲ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪುಟಿದೇಳುವಂತೆ ಮಾಡಿದ್ದು ಈ ಅಮೃತಮಹೋತ್ಸವ. ಸಿದ್ದರಾಮಯ್ಯ ಅವರ ಜನಪ್ರಿಯಂತೆ ಮತ್ತಷ್ಟು ಎತ್ತರಕ್ಕೇರಲು ಇದೇ ನೆಲ ಕಾರಣ. ಆದ್ರೆ, ಲೋಕಸಭೆ ಚುನಾವಣೆಗೆ ಜಿಲ್ಲಾಜಿದ್ದಿನ ಕಣವಾಗಿರುವ ದಾವಣಗೆರೆ ಈಗ ಎಲ್ಲರ ಹಾಟ್ ಫೇವರಿಟ್ ಸ್ಪಾಟ್ ಆಗಿದೆ.
ಪಾದಯಾತ್ರೆ ಯಶಸ್ಸು:
ವಿನಯ್ ಕುಮಾರ್ ಅವರಿಗೆ ಪಾದಯಾತ್ರೆ ತಂದುಕೊಟ್ಟ ಯಶಸ್ಸು ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಮತ್ತಷ್ಟು ಆನೆ ಬಲ ಬಂದಿದೆ. ಜನರಿಂದ ಸಿಕ್ಕ ಪ್ರೀತಿ, ವಿಶ್ವಾಸ, ಸ್ಪಂದನೆಗೆ ಫಿದಾ ಆಗಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಗೆಲುವ ಖಚಿತ ಎಂದು ವಿನಯ್ ಕುಮಾರ್ ಹೇಳುತ್ತಾರೆ. ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿಯೂ ಕಾಲ್ನಡಿಗೆ ಮೂಲಕ ತೆರಳಿ ಜನರಿಗೆ ಹತ್ತಿರವಾಗಿರುವ ವಿನಯ್ ಕುಮಾರ್ ಅವರ ಛಲ, ಭರವಸೆ ಮಾತು, ನುಡಿದಂತೆ ನಡೆದುಕೊಳ್ಳುವ ಪರಿ, ನೇರನುಡಿ, ಅಭಿವೃದ್ಧಿ ಪರ ಚಿಂತನೆಗಳು ಎಲ್ಲರನ್ನೂ ಈಗಾಗಲೇ ಸೆಳೆದಿದೆ.
ಹೊಸ ಅಧ್ಯಾಯಕ್ಕೆ ದಾವಣಗೆರೆ ಸಿದ್ಧ!
ಕ್ರಿಯಾತ್ಮಕ ನಾಯಕತ್ವಕ್ಕಾಗಿ ಹಂಬಲಿಸುವ ಜನರು ಯುವ, ಉದ್ಯಮಶೀಲ ಧ್ವನಿಯನ್ನು ಹುಡುಕುತ್ತಾರೆ. ನಾನು ಜನರ ನಾಯಕನಾಗಿ, ಜನರಿಂದ ಮತ್ತು ದಾವಣಗೆರೆ ಜನರಿಗಾಗಿ ನಿಂತಿದ್ದೇನೆ. ಒಟ್ಟಾಗಿ, ಪ್ರಗತಿ ಮತ್ತು ಸಮೃದ್ಧಿಯ ಹೊಸ ಯುಗವನ್ನು ಬರೆಯೋಣ ಎನ್ನುತ್ತಾರೆ ವಿನಯ್ ಕುಮಾರ್.
ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲೇನಿತ್ತು…?
ದಾವಣಗೆರೆ ಲೋಕಸಭಾ ಕ್ಷೇತ್ರದ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಸ್ಪರ್ಧಿಸಲು ಸೂಚಿಸಿದ್ದು ಕಾಂಗ್ರೆಸ್ ವರಿಷ್ಠರ ಈ ಸೂಚನೆಯನ್ನು ಎಸ್.ಎಸ್. ಮಲ್ಲಿಕಾರ್ಜುನ್ ಅವರು ನಿರಾಕರಿಸಿ ತಮ್ಮ ಕುಟುಂಬದವರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಈ ಮನವಿಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದೆ. ಹಾಗಾಗಿ ದಾವಣಗೆರೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಹೊಸಮುಖಕ್ಕೆ ಮಣೆ ಹಾಕುವುದು ಬಹುತೇಕ ಖಚಿತವಾಗಿದ್ದು ಜಿ.ಬಿ.ವಿನಯ್ ಕುಮಾರ್ ಅವರ ಪರ ಹೈಕಮಾಂಡ್ ಹೆಚ್ಚಿನ ಒಲವು ತೋರುತ್ತಿದೆ ಎಂದು ಕಾಂಗ್ರೆಸ್ ನ ಆಂತರಿಕ ಮೂಲಗಳು ತಿಳಿಸುತ್ತಿವೆ.
ಪ್ರತಿಕ್ರಿಯೆಗಳು ಏನು…?
ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ ಸರ್ವೆಯಲ್ಲಿ ವಿನಯ್ ಕುಮಾರ್ ಗೆ ಬಹುತೇಕರು ಬಹುಪರಾಕ್ ಎಂದಿದ್ದಾರೆ. ಯಾರ್ಯಾರು ಏನು ಹೇಳಿದ್ದಾರೆ ಎಂಬ ಡೀಟೈಲ್ಸ್ ಇಲ್ಲಿದೆ.
– ಶಶಿಕುಮಾರ್ ಜಿ. ಎಂ.
ಸಲಗ ನಡೆದಿದ್ದೇ ದಾರಿ, ಜೈ ವಿನಯಕುಮಾರ್ GB,
ಬಿ. ಪ್ರಕಾಶ್, ಜೋಳದಾಳ್ ಚನ್ನಗಿರಿ
ವಿನಯ್ ಕುಮಾರ್ ಗೆ ಜೈ… ಕಾಂಗ್ರೆಸ್ ಗೆ ಜೈ ಜೈ…
– ಕುಮಾರ್ ಚಿನ್ನು
Congratulations my dear Brother young and dynamic youth political leader, great improvement very short period –
– ಬೀರಪ್ಪ ಆರ್ ಎಂ ರಾಯಪುರ
ಎಐಸಿಸಿ ಮತ್ತು ಕೆಪಿಸಿಸಿ ವರಿಷ್ಠರು ವಿನಯ್ ಕುಮಾರ್ ಗೆ ದಾವಣಗೆರೆಯಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡಬೇಕು, ಜಯ ಖಂಡಿತ.
– ಮಂಜುನಾಥ್
ದಾವಣಗೆರೆ ನಗರಕ್ಕೆ ಸೂಕ್ತ ವ್ಯಕ್ತಿ.. ಪಟ್ಟ ಭದ್ರ ಹಿತಾಸಕ್ತಿಗಳ ಕೈಗಳಿಂದ ದಾವಣಗೆರೆ ಮುಕ್ತಿ ಸಿಗಬೇಕು ಅಂದ್ರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಸರಿಯಾದ ನಿರ್ಧಾರವನ್ನು ಮಾಡಿದರೆ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಕೈ ತೆಕ್ಕೆಗೆ ವಾಪಾಸ್ ಪಡೆಯಬಹುದು.
ಇವಿಷ್ಟು ಕೆಲ ಸ್ಯಾಂಪಲ್ ಗಳು ಅಷ್ಟೇ. ವಿನಯ್ ಕುಮಾರ್ ಅವರೂ ಸಹ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಕಾಂಗ್ರೆಸ್ ನಿಂದ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಈಗಾಗಲೇ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಾದ ಬಳಿಕ ಕಾಂಗ್ರೆಸ್ ಗೆದ್ದಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಛಿದ್ರ ಮಾಡಲು ಎಲ್ಲಾ ರೀತಿಯ ತಂತ್ರಗಾರಿಕೆ ಮಾಡಿಕೊಂಡಿದ್ದಾರೆ.
ವಿನಯ್ ಕುಮಾರ್ ಏನಂತಾರೆ…?
ಪಾದಯಾತ್ರೆಗೆ ಅಭೂತಪೂರ್ವ ಜನ ಬೆಂಬಲ, ಆಶೀರ್ವಾದ ದೊರೆತಿದೆ . ರಾಜಕಾರಣದಲ್ಲಿ ಹೊಸ ಹೊಸ ಅನುಭವಗಳಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ನಿರುದ್ಯೋಗ, ನೀರಾವರಿ ಹಾಗೂ ಮಹಿಳೆಯರ ಸಮಸ್ಯೆಗಳನ್ನು ಅರಿತಿದ್ದೇನೆ. ಪರಿಹಾರ ಮಾರ್ಗಗಳ ಚಿಂತನೆ ಕೂಡ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಜನರು ಒಳ್ಳೆಯದಕ್ಕಾಗಿ ಆಶಿಸುತ್ತಿದ್ದಾರೆ. ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದ ನಾನು ಕಠಿಣ ಪರಿಶ್ರಮ, ಜನರ ಪ್ರೀತಿ ಮತ್ತು ಉತ್ಸಾಹದಿಂದ ಇಲ್ಲಿಯವರೆಗೆ ಬಂದಿದ್ದೇನೆ. ನನ್ನ ದೇಶ ಮತ್ತು ಅದರ ಜನರ ಸೇವೆ ಮಾಡುವ ಅವಕಾಶವನ್ನು ಪಡೆಯಲು ನಿಮ್ಮ ಬೆಂಬಲ ಬೇಕು. ನಾನು ಹೊಸ ಅಧ್ಯಾಯಕ್ಕೆ ದಾವಣಗೆರೆ ರೆಡಿ! ನೀವು ಬೆಂಬಲಿಸಿ, ಸಹಕರಿಸಿ, ಗೆಲ್ಲಿಸಿ ಎಂಬ ಮನವಿ ವಿನಯ್ ಕುಮಾರ್ ಅವರದ್ದು.