Home ಕ್ರೈಂ ನ್ಯೂಸ್ ಮೋಸ್ಟ್ ವಾಂಟೆಂಡ್ ಉಗ್ರ ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿಲ್ಲ: ಪಾಕಿಸ್ತಾನದ ವಾದ ತಿರಸ್ಕರಿಸಿದ ತಾಲಿಬಾನ್ ಸರ್ಕಾರ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮೋಸ್ಟ್ ವಾಂಟೆಂಡ್ ಉಗ್ರ ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿಲ್ಲ: ಪಾಕಿಸ್ತಾನದ ವಾದ ತಿರಸ್ಕರಿಸಿದ ತಾಲಿಬಾನ್ ಸರ್ಕಾರ!

Share
ಮಸೂದ್ ಅಜರ್
Share

ಕಾಬೂಲ್/ಇಸ್ಲಾಮಾಬಾದ್: ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿದ್ದಾನೆ ಎಂಬ ಪಾಕಿಸ್ತಾನದ ವಾದವನ್ನು ತಾಲಿಬಾನ್ ಸರ್ಕಾರ ಮತ್ತೊಮ್ಮೆ ತೀವ್ರವಾಗಿ ತಿರಸ್ಕರಿಸಿದೆ.

ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಸೂದ್ ಅಜರ್ ತಮ್ಮ ದೇಶದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದು, ಯಾವುದೇ ದೇಶದ ವಿರುದ್ಧ ಅಫ್ಘನ್ ನೆಲವನ್ನು ಬಳಸಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಉಗ್ರರ ಹಣಕಾಸು ನೆರವು ಮತ್ತು ಜಾಗತಿಕ ಭಯೋತ್ಪಾದನಾ ನಿಗ್ರಹ ಕ್ರಮಗಳ ವಿಚಾರದಲ್ಲಿ ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಒತ್ತಡವಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಭಾರತದಲ್ಲಿ ಸಂಸತ್ ದಾಳಿ (2001), ಮುಂಬೈ ದಾಳಿ (2008), ಪಠಾಣ್‌ಕೋಟ್ ದಾಳಿ (2016) ಹಾಗೂ ಪುಲ್ವಾಮಾ ಬಾಂಬ್ ಸ್ಫೋಟದಂತಹ (2019) ಹಲವು ದೊಡ್ಡ ಭಯೋತ್ಪಾದಕ ಕೃತ್ಯಗಳಿಗೆ ಮಸೂದ್ ಅಜರ್ ಬೇಕಾಗಿರುವ ಪ್ರಮುಖ ಆರೋಪಿಯಾಗಿದ್ದಾನೆ.

ಎಫ್‌ಎಟಿಎಫ್ ಸಂಸ್ಥೆಯ ತನಿಖೆ ಮತ್ತು ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನವು ಅಜರ್ ಅಫ್ಘಾನಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎಂದು ಸುಳ್ಳು ಕಥೆ ಕಟ್ಟುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles