Home ದಾವಣಗೆರೆ ನಾನೇನು ಕೊಲೆ ಮಾಡಿದ್ದೇನಾ? ಪೊಲೀಸ್ ನೊಟೀಸ್ ನನ್ನ ಒಂದು ಕೂದಲಿಗೆ ಸಮ: ಕಲ್ಲಡ್ಕ ಪ್ರಭಾಕರ್ ಭಟ್!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ನಾನೇನು ಕೊಲೆ ಮಾಡಿದ್ದೇನಾ? ಪೊಲೀಸ್ ನೊಟೀಸ್ ನನ್ನ ಒಂದು ಕೂದಲಿಗೆ ಸಮ: ಕಲ್ಲಡ್ಕ ಪ್ರಭಾಕರ್ ಭಟ್!

Share
ಕಲ್ಲಡ್ಕ ಪ್ರಭಾಕರ್ ಭಟ್
Share

ಮಂಗಳೂರು: ಪೊಲೀಸ್ ನೊಟೀಸ್ ಕೊಟ್ಟಿರುವುದು ನನ್ನ ಒಂದು ಕೂದಲಿಗೆ ಸಮ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಮಂಗಳೂರಿನ ಬಿಸಿ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಮೇಲೆ ನೂರಾರು ಕೇಸ್ ಗಳಿವೆ. ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ಈಗ ಪೊಲೀಸರು ನೀಡಿರುವ ನೊಟೀಸ್ ಗೆ ಹೆದರುತ್ತೇನಾ ಎಂದು ಪ್ರಶ್ನಿಸಿದರು.

ಬಂಟ್ವಾಳ ತಾಲೂಕಿನ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ನೀಡಿರುವ ಸಾಕ್ಷಿದಾರ ನೋಟೀಸ್‌ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಿಸಿ ರೋಡ್‌ನಲ್ಲಿ ವಿಶ್ವರೂಪ ಪ್ರದರ್ಶನ ಹಾಗೂ ವಿವಿಧ ಹಿಂದೂ ಸಂಘಟನೆಗಳು ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸರ ನೋಟೀಸ್ ಮತ್ತು ಕ್ರಮಗಳನ್ನು ಕಟುವಾಗಿ ಟೀಕಿಸಿದರು.

ನಾನೇನೂ ಕೊಲೆ ಮಾಡಿದ್ದೇನಾ? ಎಂದು ಪ್ರಶ್ನಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಾನು ಪೊಲೀಸ್ ವಿಚಾರಣೆಗೆ ಹಾಜರಾಗಲ್ಲ ಎಂದು ಹೇಳಿದರು.

“ನಾನೇನೂ ಕೊಲೆ ಮಾಡಿದ್ದೇನಾ? ಹತ್ಯೆ ಪ್ರಕರಣದಲ್ಲಿ ನನ್ನನ್ನೇಕೆ ಎಳೆಯಲಾಗುತ್ತಿದೆ? ನಾನು ಯಾವುದೇ ಕಾರಣಕ್ಕೂ ಪೊಲೀಸ್ ವಿಚಾರಣೆಗೆ ಹಾಜರಾಗುವುದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದರು.

ಪ್ರಕರಣದ ಹಿನ್ನೆಲೆ: 2025ರಲ್ಲಿ ನಡೆದ ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಪ್ರಭಾಕರ್ ಭಟ್ ಅವರ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಸಾಕ್ಷಿದಾರ ನೋಟೀಸ್  ಜಾರಿಗೊಳಿಸಿದ್ದರು.

ಹತ್ಯೆ ನಡೆದ ಸಮಯದಲ್ಲಿ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದರೆಂಬ ಹಿನ್ನೆಲೆಯಲ್ಲಿ ಈ ನೋಟೀಸ್ ನೀಡಲಾಗಿದೆ ಎನ್ನಲಾಗಿದ್ದು, ಇದರ ವಿರುದ್ಧ ವಿಶ್ವ ಹಿಂದೂ ಪರಿಷತ್ (VHP) ಮತ್ತು ಭಜರಂಗದಳದ ಮುಖಂಡರು ಹಾಗೂ ಕಾರ್ಯಕರ್ತರು ಬಿಸಿ ರೋಡ್ ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles