SUDDIKSHANA KANNADA NEWS/ DAVANAGERE/ DATE:04-09-2023
ಮಂಗಳೂರು (Mangalore): ಸನಾತನ ಹಿಂದೂ ಧರ್ಮದ ನಿರ್ಮೂಲನೆ ಅಗತ್ಯ ಎಂಬ ಹೇಳಿಕೆ ಕೊಟ್ಟಿರುವ ತಮಿಳುನಾಡು ಸಚಿವ ಉದಯ ನಿಧಿ ಸ್ಟಾಲಿನ್ ವಿರುದ್ಧ ಕಿಡಿಕಾರಿರುವ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು, ಸನಾತನ ಸಂಸ್ಕೃತಿಯ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಕರೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:
Priyank Kharge Tweet: ಬಿ. ಎಲ್. ಸಂತೋಷ್ ವಿರುದ್ಧ ವಾಗ್ಬಾಣ ಮುಂದುವರಿಸಿದ ಪ್ರಿಯಾಂಕ್ ಖರ್ಗೆ: ಟ್ವೀಟಾಸ್ತ್ರ ಹೇಗಿದೆ ಗೊತ್ತಾ…?
ಸನಾತನ ಸಂಸ್ಕೃತಿ ಹಾಗೂ ಧರ್ಮದ ರಕ್ಷಣೆಗಾಗಿ ಲಕ್ಷೋಪಲಕ್ಷ ಸಾಧು ಸಂತರು ತಪಸ್ಸಿನ ಮೂಲಕ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಸನಾತನ ಪರಂಪರೆ, ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವ ಕೆಲಸವನ್ನು ಮಾಡಿದ್ದಾರೆ.
ಈ ಮಣ್ಣಿನ ಮೂಲ ಧರ್ಮ, ಸಂಸ್ಕೃತಿ, ಜೀವನ ವಿಧಾನವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಾಲ್ಯದಿಂದಲೇ ಮಕ್ಕಳಿಗೆ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದನ್ನು ಕಲಿಸಬೇಕು. ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಖಂಡನೀಯ. ಇಂಥ ಹೇಳಿಕೆಗಳಿಂದ ಸನಾತನ ಧರ್ಮದ ಅವಹೇಳನ ಸಲ್ಲ. ಯಾವುದೇ ಕಾರಣಕ್ಕೂ ಧರ್ಮಕ್ಕೆ ಧಕ್ಕೆಯಾಗಬಾರದು. ಇಂಥ ವೇಳೆಯಲ್ಲಿ ನಾವು ಸುಮ್ಮನಿರಬಾರದು ಎಂದು ಕೇಮಾರು ಶ್ರೀಗಳು ತಿಳಿಸಿದ್ದಾರೆ.