ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಂಗಳೂರು: ನಾಗರಿಕರೇ ಗಮನಿಸಿ ನಾಳೆ (ಮೇ 25) ನಗರದಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ

On: May 24, 2024 5:30 PM
Follow Us:
---Advertisement---

ಮಂಗಳೂರು : ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಕುಟುಂಬಿಕರೊಬ್ಬರ ವಿವಾಹ ಮೇ 25ರಂದು ಎಂ.ಜಿ.ರಸ್ತೆಯ ಟಿಎಂಎ ಪೈ ಸಭಾಂಗಣದಲ್ಲಿ ನಡೆಯಲಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಸಿಎಂ ಹಾಗೂ ಹಲವಾರು ಪ್ರಮುಖ ವಿವಿಐಪಿಗಳು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗುವ ಸಾಧ್ಯತೆಯಿದೆ. ಆದ್ದರಿಂದ ಪಿವಿಎಸ್ ನಿಂದ ಲೇಡಿಹಿಲ್ ಸರ್ಕಲ್ ಕಡೆಗೆ ಹೋಗುವ ಎಂ.ಜಿ.ರಸ್ತೆಯಲ್ಲಿನ ಎಲ್ಲಾ ಮೀಡಿಯನ್‌ಗಳನ್ನು ಮುಚ್ಚಲಾಗುತ್ತದೆ.

(ಬೆಸೆಂಟ್ ಜಂಕ್ಷನ್, ಕೋಡಿಯಾಲ್‌ಗುತ್ತು ಕ್ರಾಸ್, ಬಲ್ಲಾಳ್‌ಬಾಗ್ ಜಂಕ್ಷನ್, ನೆಹರೂ ಅವೆನ್ಯೂ ಜಂಕ್ಷನ್). ಆದ್ದರಿಂದ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿರುವ ಸ್ಥಳಗಳು: ಕೊಟ್ಟಾರ ಚೌಕಿ, ಕುಂಟಿಕಾನ, ಕೆ.ಪಿ.ಟಿ, ನಂತೂರು, ಕೆ.ಎಸ್.ಆರ್.ಟಿ.ಸಿ., ಬಂಟ್ಸ್ ಹಾಸ್ಟೆಲ್, ಡಾ. ಅಂಬೇಡ್ಕರ್ ಸರ್ಕಲ್, ಹಾರ್ಟಿಕಲ್ಚರ್ ಜಂಕ್ಷನ್, ಬಲ್ಮಠ, ಹಂಪನಕಟ್ಟೆ, ಕರಾವಳಿ ಸರ್ಕಲ್, ಕಂಕನಾಡಿ, ಪಂಪ್‌ವೆಲ್, ತೊಕ್ಕೊಟ್ಟು. ಸಂಚಾರ ಪರ್ಯಾಯ ವ್ಯವಸ್ಥೆ ಈ ಕೆಳಕಂಡಂತಿರುತ್ತದೆ.

1. ಹಂಪನಕಟ್ಟೆಯಿಂದ ಬಂಟ್ಸ್ ಹಾಸ್ಟೆಲ್ ಮೂಲಕ ಲೇಡಿಹಿಲ್‌ಗೆ ಹೋಗುವ ಎಲ್ಲಾ ವಾಹನಗಳು ಕರಂಗಲಪಾಡಿ ಅಥವಾ ಭಾರತ್‌ಬೀಡಿ ಜಂಕ್ಷನ್ ಮುಖಾಂತರ ಚಲಿಸುವುದು.

2. ಪಿ.ವಿ.ಎಸ್ ಜಂಕ್ಷನ್‌ನಿಂದ ಲೇಡಿಹಿಲ್ ಸರ್ಕಲ್‌ವರೆಗಿನ ಎಂ.ಜಿ. ರಸ್ತೆಗೆ ಬಂದು ಸೇರುವ ಎಲ್ಲಾ ಕೂಡು ರಸ್ತೆಗಳನ್ನು ಉಪಯೋಗಿಸುವ ವಾಹನ ಸವಾರರು ಬಿಜೈ ಚರ್ಚ್ ರೋಡ್ / ಕುದ್ರೋಳಿ ರಸ್ತೆಯನ್ನು ಉಪಯೋಗಿಸುವುದು.

ಬಸ್ಸುಗಳ ಸಂಚಾರಕ್ಕೆ ನಿಗದಿಪಡಿಸಿದ ರಸ್ತೆಗಳು:

1. ಕೆ.ಎಸ್.ರಾವ್ ರಸ್ತೆ, ಎಂ.ಜಿ. ರಸ್ತೆ, ಬಂಟ್ಸ್ ಹಾಸ್ಟೆಲ್ ಮುಖಾಂತರ ಸಂಚರಿಸುವ ಎಲ್ಲಾ ಸಿಟಿ, ಎಕ್ಸ್‌ಪ್ರೆಸ್ ಹಾಗೂ ಕೆಎಸ್ಆರ್ ಟಿಸಿ ಬಸ್ ಗಳು ಹಂಪನಕಟ್ಟ, ಡಾ.ಅಂಬೇಡ್ಕರ್ ವೃತ್ತ, ಬಲ್ಮಠ, ಹಾರ್ಟಿಕಲ್ಚರ್ ಜಂಕ್ಷನ್, ಕದ್ರಿ ಜಂಕ್ಷನ್, ನಂತೂರು ಮುಖಾಂತರ ಸಂಚರಿಸಲು ಸೂಚಿಸಿದೆ.

2. ಕೊಟ್ಟಾರಚೌಕಿ ಮುಖಾಂತರ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲಾ ಸಿಟಿ, ಎಕ್ಸ್‌ಪ್ರೆಸ್ ಹಾಗೂ ಕೆಎಸ್ಆರ್ ಟಿಸಿ ಬಸ್ಸುಗಳು ನಂತೂರು ಮೂಲಕ ಸಂಚರಿಸಬೇಕು. 3. ಕೆಎಸ್ಆರ್ ಟಿಸಿ ಬಸ್ಸು ನಿಲ್ದಾಣದಿಂದ ಹೊರಹೋಗುವ ಹಾಗೂ ಒಳಬರುವ ಎಲ್ಲಾ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯ ಕುಂಟಿಕಾನ ಜಂಕ್ಷನ್ ಮೂಲಕ ಒಳ ಬರಲು ಹಾಗೂ ಹೊರ ಹೋಗಲು ಸೂಚಿಸಿದೆ. ವಾಹನ ಪಾರ್ಕಿಂಗ್ ನಿಷೇಧಿತ ಸ್ಥಳಗಳು: ಪಿ.ವಿ.ಎಸ್ ಜಂಕ್ಷನ್‌ನಿಂದ ಲಾಲ್‌ಭಾಗ್ ಜಂಕ್ಷನ್‌ವರೆಗಿನ ಎಂ.ಜಿ ರಸ್ತೆಯಲ್ಲಿ, ಪಿವಿಎಸ್ ಜಂಕ್ಷನ್ ನಿಂದ ಬಂಟ್ಸ್ ಹಾಸ್ಟೆಲ್ ಜಂಕ್ಷನ್‌ವರೆಗೆ ಹಾಗೂ ಲಾಲ್‌ಬಾಗ್ ಜಂಕ್ಷನ್‌ನಿಂದ ಕೆ.ಪಿ.ಟಿ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

Join WhatsApp

Join Now

Join Telegram

Join Now

Leave a Comment