ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಎಂಸಿಸಿ ಬಿ ಬ್ಲಾಕ್ ನಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ರೋಡ್ ಶೋ: ದಾವಣಗೆರೆ ಅಭಿವೃದ್ಧಿಗೆ ಅವಕಾಶ ನೀಡುವಂತೆ ಮನವಿ

On: April 22, 2023 10:51 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:22-04-2023

 

ದಾವಣಗೆರೆ (DAVANAGERE): ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್  (S. S. MALLIKARJUN) ಅವರು, ಎಂಸಿಸಿ ಬಿ ಬ್ಲಾಕ್ (MCC B BLOCK)ನಲ್ಲಿ ಭರ್ಜರಿ ರೋಡ್ ಶೋ (ROAD SHOW) ನಡೆಸಿದರು. 38 ನೇ ವಾರ್ಡ್ ನ ಎಂಸಿಸಿ ಬಿ ಬ್ಲಾಕ್ ನ ಎರಡನೇ ಮುಖ್ಯ ರಸ್ತೆಯ 2 ನೇ ತಿರುವಿನಲ್ಲಿನ ಎಲಿ ಡಾಕ್ಟರ್ (DOCTOR)ಮನೆಯ ರಸ್ತೆಯಿಂದ ಆರಂಭಗೊಂಡ ಚುನಾವಣಾ ಮೆರವಣಿಗೆಯು ಎಲ್ಲಾ ರಸ್ತೆಗಳಲ್ಲಿ ಸಾಗಿತು. ಮಲ್ಲಿಕಾರ್ಜುನ್ ಅವರಿಗೆ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ (GADIGUDAL MANJUNATH) ಹಾಗೂ ಕಾಂಗ್ರೆಸ್ ಮುಖಂಡ ಶಿವಾನಂದ್ ಪಲ್ಲಾಗಟ್ಟಿ ಸಾಥ್ ನೀಡಿದರು.

ಹೋದ ಕಡೆಗಳಲ್ಲಿ ಮಲ್ಲಿಕಾರ್ಜುನ್ (MALLIKARJUN)ಅವರಿಗೆ ವಾರ್ಡ್ ನ ಜನರು ಪ್ರೀತಿ, ವಿಶ್ವಾಸದಿಂದ ಬರಮಾಡಿಕೊಂಡರು. ಜನರತ್ತ ಕೈ ಬೀಸುತ್ತಾ ಮತಯಾಚನೆ ಮಾಡಿದ ಮಲ್ಲಿಕಾರ್ಜುನ್ ಅವರಿಗೆ ಜನರೂ ಸಹ ಕೈ ಬೀಸುತ್ತಾ ಪ್ರೀತಿ ತೋರಿದರು.

 

MALLIKARJUN ROAD SHOW IN DAVANAGERE

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ್ ಅವರು, ದಾವಣಗೆರೆ (DAVANAGERE)ಯಲ್ಲಿ ಉದ್ಯೋಗ ಕೊರತೆ ಇದೆ. ದೊಡ್ಡ ದೊಡ್ಡ ಕೈಗಾರಿಕೆಗಳು ಬರಬೇಕಿದೆ. ಇದಕ್ಕಾಗಿ ಈ ಬಾರಿ ಕಾಂಗ್ರೆಸ್ (CONGRESS) ಗೆ ಮತ ನೀಡಿ. ನಾನು ಗೆದ್ದು ಬಂದ ಬಳಿಕ ನಾನು ನೀಡಿದ ಭರವಸೆ ಈಡೇರಿಸುತ್ತೇನೆ. ಕಳೆದ ಐದು ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಮತ್ತೆ ಅಭಿವೃದ್ಧಿಗಾಗಿ ನನಗೆ ಮತ ಕೊಡಿ. ನನ್ನ ಮೇಲಿಟ್ಟ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದಾವಣಗೆರೆ ಜಿಲ್ಲೆಯೂ ಇದಕ್ಕೆ ಹೊರತಲ್ಲ. ಏನೇ ಆಗಬೇಕಾದರೂ ದುಡ್ಡು ಕೊಡಲೇಬೇಕು. ಅಷ್ಟು ಭ್ರಷ್ಟ ಸರ್ಕಾರ ಬಿಜೆಪಿ. ಭ್ರಷ್ಟಾಚಾರದಲ್ಲಿ ನಿರತವಾಗಿರುವ ಬಿಜೆಪಿ (BJP)ಯನ್ನು ಕಿತ್ತೊಗೆಯಬೇಕು. ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಲ್ಲರೂ ಪಕ್ಷಕ್ಕೆ ಬೆಂಬಲ ನೀಡಿ. ನನಗೆ ನೀವು ತೋರುತ್ತಿರುವ ಪ್ರೀತಿ, ವಿಶ್ವಾಸ ಮತ್ತಷ್ಟು ಹುಮ್ಮಸ್ಸು ತಂದಿದೆ. ಐದು ವರ್ಷಗಳಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಮತ್ತೆ ಗೆದ್ದು ಬಂದರೆ ಎಲ್ಲರೂ ದಾವಣಗೆರೆ(DAVANAGERE)ಯತ್ತ ತಿರುಗಿನೋಡುವಂತೆ ಕೆಲಸ ಮಾಡಿ ತೋರಿಸುತ್ತೇನೆ. ನಾವು ಮಾಡಿದ ಅನೇಕ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿಲ್ಲ. ಪೂರ್ಣಗೊಳಿಸಲು ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷವು ಈಗಾಗಲೇ ಗ್ಯಾರಂಟಿ ಕಾರ್ಡ್ ಘೋಷಿಸಿದೆ. ಉಚಿತ ವಿದ್ಯುತ್, ಮನೆ ಯಜಮಾನಿಗೆ ತಿಂಗಳಿಗೆ ಮಾಸಾಶನ, ನಿರುದ್ಯೋಗಿ ಪದವೀಧರರಿಗೆ ಸಹಾಯಧನ, ಬಿಪಿಎಲ್ ಕಾರ್ಡ್ ದಾರರಿಗೆ ಹತ್ತು ಕೆ. ಜಿ. ಉಚಿತ ಅಕ್ಕಿ ನೀಡುವುದಾಗಿ ಹೇಳಿದೆ. ಜನರಿಗಾಗಿ, ಜನರಿಗೋಸ್ಕರ ಇರುವ ಪಕ್ಷ ಕಾಂಗ್ರೆಸ್. ಹಾಗಾಗಿ, ಈ ಬಾರಿ ಕಾಂಗ್ರೆಸ್ ಮತ ಹಾಕುವ ಮೂಲಕ ಗೆಲ್ಲಿಸಿ ಎಂದು ಮನವಿ ಮಾಡಿದರು.

MALLIKARJUN ROAD SHOW IN DAVANAGERE

ಇನ್ನು ಮಲ್ಲಿಕಾರ್ಜುನ್ ಅವರ ರೋಡ್ ಶೋಗೆ ವಾರ್ಡ್ ನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಾರ, ಶಾಲು ಹೊದಿಸಿ ನಾಗರಿಕರು ಸನ್ಮಾನಿಸಿದರು. ಮನೆ ಮನೆ ಭೇಟಿ ವೇಳೆ ಜನರು ಪ್ರೀತಿ, ವಿಶ್ವಾಸ ತೋರಿದರು. ಇದಕ್ಕೆ ಪ್ರತಿಯಾಗಿ ಮಲ್ಲಿಕಾರ್ಜುನ್ ಅವರು ನೀವು ತೋರಿದ ಪ್ರೀತಿಗೆ ಆಭಾರಿಯಾಗಿದ್ದೇನೆ. ಎಂದಿಗೂ ಇದನ್ನು ಮರೆಯುವುದಿಲ್ಲ ಎಂದು ಹೇಳಿದರು.

ರೋಡ್ ಶೋನಲ್ಲಿ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಶಿವಾನಂದ್ ಪಲ್ಲಾಗಟ್ಟಿ, ಬಾಬಣ್ಣ, ಮೂರ್ತಣ್ಣ, ಡಿ.ಡಿ. ಬಸಣ್ಣ, ರಾಜಣ್ಣ, ಆಲೂರು ಜ್ಯೋತಿರ್ಲಿಂಗ, ಮುರುಗೇಶ್ ಮಂತ್ರಿ, ಮನು, ಮನೇಶ್, ನಿಖಿಲ್, ಭರತ್,
ಪ್ರಮೋದ್, ಪ್ರಜ್ವಲ್, ಉಮೇಶ್, ಪರಶುರಾಮ್ ಭಟ್, ಇಂದೂದರ್, ಮೆಕಾ ಸತ್ಯನಾರಾಯಣ್, ನೀಲಕಂಠಪ್ಪ, ಬಸವರಾಜ್, ಮಂಜು, ಮಂಜುನಾಥ್, ಪ್ರಕಾಶ್ ಗೌಡ್ರು, ಗುರುಮೂರ್ತಿ, ನಿರ್ಮಲಾ ಸುಭಾಷ್, ಯಶೋದಾ ಪ್ರಕಾಶ್, ಸರೋಜಾ ರೆಡ್ಡಿ,
ಶೋಭಾ ಪಲ್ಲಾಗಟ್ಟಿ, ಮಂಜುಳಾ ಬಸಲಿಂಗಪ್ಪ, ಪುಷ್ಪಾ ಸುರೇಶ್, ಪಾರ್ವತಕ್ಕ ಸೇರಿದಂತೆ ವಾರ್ಡ್ ನ ಹಿರಿಯರು, ನಾಗರಿಕರು ಪಾಲ್ಗೊಂಡಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment