ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

M. P. Renukacharya: ಮುಗಿಯದ ಜಿಎಂಎಸ್ – ಎಂಪಿಆರ್ ಮಾತಿನ ವಾಗ್ಯುದ್ಧ: ಸಿದ್ದೇಶ್ವರರ “ಆ ಮಾತಿನಿಂದ” ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ಯಾಕೆ ರೇಣುಕಾಚಾರ್ಯ…?

On: July 19, 2023 12:22 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:19-07-2023

ದಾವಣಗೆರೆ (DAVANAGERE): ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನಲ್ಲಿ ನಮ್ಮ ಸಮಾಜದವರು ಬಹಳ ಜನ ಇದ್ದಾರೆ ಎಂಬ ಮಾತು ಹೇಳಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ಅಸಮಾಧಾನ ಹೊರಹಾಕಿದ್ದಾರೆ.

ಹೊನ್ನಾಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾಧು ಲಿಂಗಾಯತ ಸಮಾಜದವರು ಹೆಚ್ಚು ಹೊನ್ನಾಳಿ – ನ್ಯಾಮತಿ ತಾಲೂಕಿನಲ್ಲಿ ಇದ್ದು, ನಮ್ಮ ಸಮಾಜದವರು ಹೆಚ್ಚಿದ್ದಾರೆ ಎಂಬುದಾಗಿ ಹೇಳಿದ್ದು ನನಗೆ ನೋವು ತಂದಿದೆ. ಅವಳಿ ತಾಲೂಕಿನಲ್ಲಿ ಎಲ್ಲಾ ಸಮಾಜದವರು ಬಿಜೆಪಿ ಬೆಂಬಲಿಸಿದ್ದಾರೆ. ಮಾತ್ರವಲ್ಲ, ಸಿದ್ದೇಶ್ವರ ಅವರು ಬಿಜೆಪಿಯವರು ಇದ್ದಾರೆ ಎಂದಿದ್ದಾರೆ ಸಂತೋಷಪಡುತ್ತಿದ್ದೆ ಎಂದು ಹೇಳಿದರು.

ಸಿದ್ದೇಶ್ವರ ಅವರು ಜಾತಿ ಆಧಾರದ ಮೇಲೆ ಸ್ಪರ್ಧೆ ಮಾಡುತ್ತೇನೆಂದು ಹೇಳಿದ್ದು ನೋವುಂಟು ಮಾಡಿದೆ. ಸಿದ್ದೇಶಣ್ಣ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು ಬಹಳ ಜನ ಇದ್ದಾರೆ ಎಂದು ಹೇಳಿದ್ದರೆ ಸ್ವಾಗತಿಸುತ್ತಿದ್ದೆ. ಆದರೆ ಸಮಾಜ ಎಂದು ಬಳಸಿದ್ದು ಮನಸಿಗೆ ನೋವುಂಟು ಮಾಡಿದೆ. ನಾನು ಲೋಕಸಭೆ ಚುನಾವಣೆ ಸಂಬಂಧ ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ತಲೆ ಬಾಗುತ್ತೇನೆ ಎಂದು ಎಂ. ಪಿ. ರೇಣುಕಾಚಾರ್ಯ (M. P. Renukacharya) ತಿಳಿಸಿದರು.

ಈ ಸುದ್ದಿಯನ್ನೂ ಓದಿ: 

Davanagere: ನಾವು ಘಂಟೆ ಹೊಡೆಯಲು ಸಿದ್ಧ, ಎಸ್. ಎಸ್., ಎಸ್ ಎಸ್ ಎಂ. ಕರೆಯಿಸಿ ಘಂಟೆ ಬಾರಿಸಲಿ: ದಿನೇಶ್ ಶೆಟ್ಟಿ ಸವಾಲು ಸ್ವೀಕರಿಸಿದ ಯಶವಂತರಾವ್ ಜಾಧವ್

ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಆರಂಭದಲ್ಲಿ ಹೇಳಿದ್ದೆ. ಆದ್ರೆ, ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡಿದ್ದರಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆಂದು ಹೇಳಿದ್ದೇನೆ. ಸಿದ್ದೇಶಣ್ಣ ಹಾಗೂ ನನ್ನ ನಡುವೆ ಯಾವುದೇ ಸಂಘರ್ಷ ಇಲ್ಲ. ಸಿದ್ದೇಶಣ್ಣ ಹಿರಿಯರು, ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವುದಾದರೆ ಸ್ವಾಗತಿಸುತ್ತೇನೆ. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಸರ್ವ ಧರ್ಮದವರು ನಮಗೆ ಮತ ನೀಡಿದ್ದಾರೆ ಎಂದು ಹೇಳಿದರು.

ಮಹಾಘಟ ಬಂಧನ್ ನಲ್ಲಿ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ. ನಿನ್ನೆ ಸೇರಿದವರಿಗೆ ಯಾವುದೇ ಸಿದ್ದಾಂತ ಇಲ್ಲ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಒಂದಾಗಿದ್ದಾರೆ. ಹುಲಿ ಎಂದಿಗೂ ಹುಲ್ಲು ತಿನ್ನೋಲ್ಲಾ, ನರೇಂದ್ರ ಮೋದಿಯವರು ಹುಲಿ. ಭ್ರಷ್ಟಾಚಾರ ಮುಕ್ತ ಆಡಳಿತ ನರೇಂದ್ರ ಮೋದಿಯವರು ನೀಡಿದ್ದಾರೆ. ಮೋಜು ಮಸ್ತಿಗಾಗಿ 26 ಪಕ್ಷಗಳು ಮಹಾಘಟ್ ಬಂಧನ್ ಕಟ್ಟಿಕೊಂಡಿದ್ದಾರೆ. ಮೋದಿಯವರು ಮೂರನೇ ಬಾರಿಗೆ ಮತ್ತೆ ದೇಶದ ಪ್ರಧಾನ ಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇವಸ್ಥಾನದಲ್ಲಿ ಪೂಜೆ ಮಾಡಲು ಅನುಮತಿ ಪಡೆಯಬೇಕು ಎಂದು ಹೇಳಿದೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಯಾವ ದೊಣ್ಣೆನಾಯ್ಕನ ಅಪ್ಪಣೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮನೆಮನೆಗೆ ಭೇಟಿ:

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ ಸೂಚನೆಯಂತೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸುವ ಉದ್ದೇಶದಿಂದ ಮಹಾಸಂಪರ್ಕ ಅಭಿಯಾನದ ಅಡಿಯಲ್ಲಿ ಬಿಜೆಪಿ ಹೊನ್ನಾಳಿ ಮಂಡಲ (ಹೊನ್ನಾಳಿ-ನ್ಯಾಮತಿ ತಾಲ್ಲೂಕು) ವತಿಯಿಂದ ಗ್ರಾಮ ಗ್ರಾಮಗಳಿಗೆ ಎಂ. ಪಿ. ರೇಣುಕಾಚಾರ್ಯ (M. P. Renukacharya) ಭೇಟಿ ನೀಡುತ್ತಿದ್ದಾರೆ.

ತಾಲೂಕಿನ ಬೇಲಿಮಲ್ಲೂರು ಗ್ರಾಮ ಸೇರಿದಂತೆ ಹಲವು ಗ್ರಾಮಗಳ ಮನೆ ಮನೆಗಳಿಗೆ ಕರ ಪತ್ರಗಳನ್ನು ವಿತರಿಸಿದ ಎಂ. ಪಿ. ರೇಣುಕಾಚಾರ್ಯ (M. P. Renukacharya) ಅವರಿಗೆ ಪಕ್ಷದ ಪದಾಧೀಕಾರಿಗಳು, ಕಾರ್ಯಕರ್ತರು, ಮುಖಂಡರು ಸಾಥ್ ನೀಡಿದರು.

M. P. Renukacharya, M. P. Renukacharya News, M. P. Renukacharya News Update, M. P. Renukacharya Suddi, M. P. Renukacharya Sad, M. P. Renukacharya Spoke, M. P. Renukacharya In Honnali

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment