SUDDIKSHANA KANNADA NEWS/ DAVANAGERE/ DATE:08-02-2024
ದಾವಣಗೆರೆ: ವಿಶೇಷವಾಗಿ ದಾವಣಗೆರೆಯಲ್ಲಿ ಚನ್ನಗಿರಿಗೆ ಅಂದರೆ ಒಂದು ವಿಶೇಷ ಇದೆ. ನಮ್ಮ ಮಾಡಾಳ್ ವಿರೂಪಕ್ಷ ಶಾಸಕರಾಗಿ ಚನ್ನಗಿರಿಯನ್ನ ಅಭಿವೃದ್ಧಿ ಮಾಡಿದ್ದರು. ಅಭಿವೃದ್ಧಿ ಅಂದರೆ ಏನು ಅಂತಾ ತೋರಿಸಿಕೊಟ್ಟ ವ್ಯಕ್ತಿ ನಮ್ಮ ಮಾಡಾಳ್ ವಿರುಪ್ಪಣ್ಣ. ಜೊತೆಗೆ ಮಾಜಿ ಸಚಿವ ಗುರುಸಿದ್ದನಗೌಡರು, ಅವರ ಪುತ್ರ ಟಿ. ಜಿ. ರವಿಕುಮಾರ್ ಸೇರ್ಪಡೆ ನಮಗೆ ಬಲ ತಂದಿದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾವುದೋ ಕಾರಣಕ್ಕಾಗಿ ಅವರ ಸುಪುತ್ರ ಮಾಡಾಳ ಮಲ್ಲಿಕಾರ್ಜುನ ಸ್ವತಂತ್ರವಾಗಿ ಸ್ಪರ್ಧೆ ಮಾಡಿ 64 ಸಾವಿರ ಮತಗಳನ್ನು ಪಡೆದಿದ್ದರು. ಕ್ಷೇತ್ರದ
ಪ್ರತಿ ಮನೆಯ ಮಗನಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ನಿಟ್ಟಿನಲ್ಲಿ ವಿಜಯೇಂದ್ರ ಅವರ ಕೈಗಳನ್ನ ಬಲಪಡಿಸುವ ನಿಟ್ಟಿನಲ್ಲಿ ಮಾಡಾಳ್ ಮಲ್ಲಿಕಾರ್ಜುನ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದರು.
ಇವರ ಸೇರ್ಪಡೆಯಿಂದಾಗಿ ದಾವಣಗೆರೆಗೆ ಭೀಮ ಬಲ ಬಂದತಾಗಿದೆ. ಬಹಳ ಸಂತೋಷದಿಂದ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಅದು ಪಕ್ಷದಲ್ಲಿ ನಿರ್ಧಾರ ಆಗುತ್ತದೆ. ನಾನು ಮಾಧ್ಯಮದವರು ಮುಂದೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ರೇಣುಕಾಚಾರ್ಯ
ಸ್ಪಷ್ಟಪಡಿಸಿದರು.