ಬೆಂಗಳೂರು/ದಾವಣಗೆರೆ: ಇಂದಿನ ಆಧುನಿಕ ಜಗತ್ತಿನಲ್ಲಿ ಹಳ್ಳಿ ಮತ್ತು ಸಣ್ಣ ಪುಟ್ಟ ಪಟ್ಟಣಗಳಿಂದ ನಗರಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುವ ಯುವತಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಣ್ಣೆದುರೇ ಕಾಣಿಸುತ್ತಿರುವ ಕೆಲವು ಆಘಾತಕಾರಿ ಬೆಳವಣಿಗೆಗಳು ಸಮಾಜದ ಸ್ವಾಸ್ಥ್ಯದ ಬಗ್ಗೆ ತೀವ್ರ ಕಳವಳ ಮೂಡಿಸುವಂತೆ ಮಾಡಿದೆ.
ಓದಿನ ನೆಪ, ಐಷಾರಾಮಿ ಜೀವನದ ಹಪಾಹಪಿ:
ಸಾಮಾನ್ಯವಾಗಿ ಗ್ರಾಮೀಣ ಭಾಗದ ಪೋಷಕರು ತಮ್ಮ ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಲಿ ಎಂಬ ದೊಡ್ಡ ಕನಸು ಹೊತ್ತು, ತಾವಿಷ್ಟ ಪಟ್ಟು ನಗರಗಳಿಗೆ ಓದಲು ಕಳುಹಿಸುತ್ತಾರೆ. ಆದರೆ, ನಗರದ ಜಗಮಗಿಸುವ ಮಾಯಾಲೋಕಕ್ಕೆ ಬೀಳುವ ಕೆಲವು ಯುವತಿಯರು, ತಮ್ಮ ವಿದ್ಯಾಭ್ಯಾಸವನ್ನು ಬದಿಗೆ ತಳ್ಳಿ ದುಬಾರಿ ಮೊಬೈಲ್‌ಗಳು, ಬ್ರ್ಯಾಂಡೆಡ್ ಬಟ್ಟೆಗಳು ಹಾಗೂ ಐಷಾರಾಮಿ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ.
ತಪ್ಪು ದಾರಿ ಹಿಡಿಯುತ್ತಿರುವ ಯುವ ಪೀಳಿಗೆ:
ವಿಷಾದದ ಸಂಗತಿಯೆಂದರೆ, ಕೇವಲ 20 ವರ್ಷ ದಾಟದ ಈ ಯುವತಿಯರು ಯಾವುದೇ ಆರ್ಥಿಕ ಅನಿವಾರ್ಯತೆ ಅಥವಾ ಕೌಟುಂಬಿಕ ಬಡತನದ ಕಾರಣಕ್ಕಾಗಿ ಅಲ್ಲದೆ, ಕೇವಲ ತಮ್ಮ ಈ ಐಷಾರಾಮಿ ಹವ್ಯಾಸಗಳನ್ನು ತೀರಿಸಿಕೊಳ್ಳಲು ತಪ್ಪು ದಾರ ತುಳಿಯುತ್ತಿದ್ದಾರೆ. ಒಂದು ರಾತ್ರಿಯ ಐಷಾರಾಮಿ ಸುಖ ಹಾಗೂ ಸುಲಭವಾಗಿ ಹಣ ಸಂಪಾದಿಸುವ ಆಸೆಗೆ ಬಿದ್ದು, ₹2,000 ದಿಂದ ₹5,000 ದವರೆಗೆ ದೇಹದ ವ್ಯಾಪಾರಕ್ಕಿಳಿಯುತ್ತಿರುವುದು ಕಣ್ಣೆದುರೇ ಕಾಣಿಸುವ ಕಹಿ ಸತ್ಯವಾಗಿದೆ ಎಂದು ಸಮಾಜದ ಗಣ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಪೋಷಕರಲ್ಲಿ ಜಾಗೃತಿ ಅಗತ್ಯ: ನಗರದ ರಸ್ತೆ ಬದಿಗಳಲ್ಲಿ ಕೇವಲ ಹಣಕ್ಕಾಗಿ ನಿಲ್ಲುವ ಇಂತಹ ಸುಂದರ ಯುವತಿಯರನ್ನು ನೋಡಿದಾಗ ಸಮಾಜದಲ್ಲಿ ಸಂಸ್ಕಾರ ಮತ್ತು ನೈತಿಕತೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಹೆತ್ತವರು ತಮ್ಮ ಮಕ್ಕಳಿಗೆ ಕೇವಲ ಹಣ ನೀಡುವುದಷ್ಟೇ ಅಲ್ಲದೆ, ಅವರು ನಗರಗಳಲ್ಲಿ ಯಾರ ಜೊತೆ ಸ್ನೇಹ ಬೆಳೆಸುತ್ತಿದ್ದಾರೆ ಮತ್ತು ಅವರ ವರ್ತನೆ ಹೇಗಿದೆ ಎಂಬುದರ ಮೇಲೆ ನಿರಂತರ ನಿಗಾ ಇಡುವುದು ಇಂದಿನ ತುರ್ತು ಅಗತ್ಯವಾಗಿದೆ.
- college girls misguided lifestyle
- karnataka youth lifestyle change
- lifestyle addiction in college students
- luxurious habits addiction
- parenting tips for hostel students
- parents awareness alert
- rural students in cities
- trending karnataka news
- youth distraction news
- ಇಂದಿನ ಯುವ ಪೀಳಿಗೆ
- ಐಷಾರಾಮಿ ಹವ್ಯಾಸಗಳು
- ಕರ್ನಾಟಕ ಸುದ್ದಿ
- ಕಾಲೇಜು ವಿದ್ಯಾರ್ಥಿನಿಯರು
- ಗ್ರಾಮೀಣ ಪೋಷಕರು ಎಚ್ಚರ
- ದುಬಾರಿ ಮೊಬೈಲ್ ವ್ಯಾಮೋಹ
- ನಗರದ ಮಾಯಾಲೋಕ
- ಪೋಷಕರಲ್ಲಿ ಜಾಗೃತಿ
- ಯುವತಿಯರು ತಪ್ಪು ದಾರಿ
- ಸಾಮಾಜಿಕ ಕಳವಳ
- ಹೆಣ್ಣು ಮಕ್ಕಳ ಶಿಕ್ಷಣ





Leave a comment