Home ಕ್ರೈಂ ನ್ಯೂಸ್ ಲಕ್ನೋ ಟ್ರಿಪಲ್ ಮರ್ಡರ್: 22 ಸೆಕೆಂಡ್‌ಗಳಲ್ಲಿ 5 ಸುತ್ತು ಗುಂಡು ಹಾರಿಸಿ ಮೂವರ ಬಲಿ ಪಡೆದ ಹಂತಕನ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಲಕ್ನೋ ಟ್ರಿಪಲ್ ಮರ್ಡರ್: 22 ಸೆಕೆಂಡ್‌ಗಳಲ್ಲಿ 5 ಸುತ್ತು ಗುಂಡು ಹಾರಿಸಿ ಮೂವರ ಬಲಿ ಪಡೆದ ಹಂತಕನ ಬಂಧನ!

Share
ಲಕ್ನೋ
Share

ಲಕ್ನೋ: ಉತ್ತರ ಪ್ರದೇಶದ ಲಕ್ನೋ ನಗರದ ಸಾದತ್‌ಗಂಜ್ ಪ್ರದೇಶದಲ್ಲಿ ಕಾರು ನಿಲುಗಡೆ ವಿಚಾರವಾಗಿ ಉಂಟಾದ ಮಾತಿನ ಚಕಮಕಿಯು ಭೀಕರ ಹತ್ಯಾಕಾಂಡಕ್ಕೆ ತಿರುಗಿದ್ದು, ಒಂದೇ ಕುಟುಂಬದ ಮೂವರನ್ನು ಹತ್ಯೆ ಮಾಡಲಾಗಿದೆ.

ಮೃತರನ್ನು ಶಿವಾಜಿ ತಿವಾರಿ (62), ಶಿವವೇಂದ್ರ ತಿವಾರಿ (55) ಮತ್ತು ಸುಯಶ್ ತಿವಾರಿ (30) ಎಂದು ಗುರುತಿಸಲಾಗಿದೆ. ಅಕ್ಟೋಬರ್ 26 ರಂದು ನಡೆದ ಈ ಘಟನೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿ ಶುಕ್ಲಾ ಬಾಗಲಿನಲ್ಲಿ ಗನ್ ರೀಲೋಡ್ ಮಾಡಿಕೊಂಡು 22 ಸೆಕೆಂಡ್‌ಗಳಲ್ಲಿ 5 ಸುತ್ತು ಗುಂಡು ಹಾರಿಸಿರುವುದು ಬೆಳಕಿಗೆ ಬಂದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಆರೋಪಿ ಮೊದಲು ಎರಡು ಸುತ್ತು ಗುಂಡು ಹಾರಿಸಿ, ಬಳಿಕ ಗನ್ ಅನ್ನು ರೀಲೋಡ್ ಮಾಡಿ ಮತ್ತೆ ಮೂರು ಸುತ್ತು ಗುಂಡು ಹಾರಿಸಿರುವುದು ದಾಖಲಾಗಿದೆ. “ಅವರು ನನ್ನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದರು, ಅದಕ್ಕಾಗಿಯೇ ನಾನು ಗುಂಡು ಹಾರಿಸಿದೆ” ಎಂದು ಹಂತಕ ಕೂಗಾಡುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ಗಾಯಗೊಂಡಿದ್ದ ಮೂವರನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (KGMU) ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಘಟನೆಯ ಹಿನ್ನೆಲೆ: ಲಕ್ನೋದ ಸಾದತ್‌ಗಂಜ್‌ನಲ್ಲಿ ಖಾಲಿ ಜಾಗದಲ್ಲಿ ಕಾರು ನಿಲ್ಲಿಸುವ ವಿಚಾರವಾಗಿ ನಡೆದ ಜಗಳದಲ್ಲಿ ಮೂವರ ಬರ್ಬರ ಹತ್ಯೆ.

ಆರೋಪಿ ಬಂಧನ: ಮರ್ಚೆಂಟ್ ನೇವಿಯಲ್ಲಿ ನ್ಯಾವಿಗೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶುಕ್ಲಾನನ್ನು ಸ್ಥಳದಲ್ಲೇ ವಶಕ್ಕೆ ಪಡೆದು, ನಂತರ ಬಂಧಿಸಿರುವ ಪೊಲೀಸರು.

ಪೊಲೀಸ್ ಇಲಾಖೆಯ ಕ್ರಮ: ಪ್ರಕರಣದ ಗಂಭೀರತೆ ಪರಿಗಣಿಸಿ ಸಾದತ್‌ಗಂಜ್ ಎಸ್‌ಎಚ್‌ಒ ಸಂತೋಷ್ ಕುಮಾರ್ ಆರ್ಯ ಹಾಗೂ ಹೊರಠಾಣೆ ಇನ್‌ಚಾರ್ಜ್ ಅಜಯ್ ಕುಮಾರ್ ಚೌರಾಸಿಯಾ ಅವರನ್ನು ಅಮಾನತುಗೊಳಿಸಲಾಗಿದೆ.

ಮೃತ ಕುಟುಂಬಸ್ಥರು ಮತ್ತು ಆರ್‌ಎಸ್‌ಎಸ್ (RSS), ಬಿಜೆಪಿ ಮುಖಂಡರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಮೃತ ಶಿವವೇಂದ್ರ ತಿವಾರಿಯವರ ಪತ್ನಿರುಚಿ ತಿವಾರಿ ಅವರ ದೂರಿನ ಮೇರೆಗೆ ಕೊಲೆ ಹಾಗೂ ಗಲಭೆ ಆರೋಪದಡಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *