Home ಕ್ರೈಂ ನ್ಯೂಸ್ ನಕಲಿ ಹೆಸರು ಹೇಳಿ ವಂಚಿಸಿದ್ದ ಪ್ರೇಮಿ: ಮತ್ತೊಬ್ಬ ಯುವತಿ ಜೊತೆ ಸಿಕ್ಕಿಬಿದ್ದಾಗ ಗರ್ಲ್‌ಫ್ರೆಂಡ್ ಮೇಲೆಯೇ ಕಾರು ಹತ್ತಿಸಿದ ಕಾಮುಕ ಶಹನವಾಜ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನಕಲಿ ಹೆಸರು ಹೇಳಿ ವಂಚಿಸಿದ್ದ ಪ್ರೇಮಿ: ಮತ್ತೊಬ್ಬ ಯುವತಿ ಜೊತೆ ಸಿಕ್ಕಿಬಿದ್ದಾಗ ಗರ್ಲ್‌ಫ್ರೆಂಡ್ ಮೇಲೆಯೇ ಕಾರು ಹತ್ತಿಸಿದ ಕಾಮುಕ ಶಹನವಾಜ್!

Share
ಪ್ರೇಮಿ
Share

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌದ ಜನೇಶ್ವರ್ ಮಿಶ್ರ ಪಾರ್ಕ್ ಬಳಿ ಬುಧವಾರ ಬೆಚ್ಚಿಬೀಳಿಸುವಂತ ಘಟನೆಯೊಂದು ನಡೆದಿದೆ. ತಾನು ಪ್ರೀತಿಸುತ್ತಿದ್ದ ಯುವಕ ಬೇರೊಬ್ಬ ಯುವತಿಯೊಂದಿಗೆ ಇರುವುದನ್ನು ಕಂಡು ಪ್ರಶ್ನಿಸಿದ ಅನಾಮಿಕಾ ಎಂಬ ಯುವತಿಯ ಮೇಲೆ, ಆಕೆಯ ಪ್ರೇಮಿ ಶಹನವಾಜ್ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ.

ಘಟನೆಯ ವಿವರ:

ಅನಾಮಿಕಾ ಮತ್ತು ಶಹನವಾಜ್ ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಶಹನವಾಜ್ ತನಗೇ ವಂಚಿಸಲು ‘ಯಶ್ ಠಾಕೂರ್’ ಎಂಬ ನಕಲಿ ಹೆಸರಿನಲ್ಲಿ ಆಕೆಗೆ ಪರಿಚಯಿಸಿಕೊಂಡಿದ್ದ. ಬುಧವಾರ ಬೆಳಿಗ್ಗೆ ಲಖನೌದ ಪಾರ್ಕ್ ಒಂದರ ಬಳಿ ಶಹನವಾಜ್ ಮತ್ತೊಬ್ಬ ಯುವತಿಯೊಂದಿಗೆ ಟೀ ಕುಡಿಯುತ್ತಿರುವುದನ್ನು ಅನಾಮಿಕಾ ಕಣ್ಣಾರೆ ಕಂಡಿದ್ದಾಳೆ.

ಈ ವೇಳೆ ಇಬ್ಬರ ನಡುವೆ ತೀವ್ರ ಗಲಾಟೆ ನಡೆದಿದೆ. ತಪ್ಪಿಸಿಕೊಳ್ಳಲು ಶಹನವಾಜ್ ಕಾರನ್ನು ಚಲಾಯಿಸಲು ಯತ್ನಿಸಿದಾಗ, ಅನಾಮಿಕಾ ಕಾರಿನ ಮುಂದೆ ನಿಂತು ಆತನನ್ನು ತಡೆಯಲು ಯತ್ನಿಸಿದ್ದಾಳೆ.

ಬೊನೆಟ್ ಮೇಲೆ ಎಳೆದೊಯ್ದು ಕಾರು ಹತ್ತಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ:

ಕೋಪಗೊಂಡ ಶಹನವಾಜ್ ಕಾರನ್ನು ನಿಲ್ಲಿಸದೇ ಸ್ಪೀಡ್ ಹೆಚ್ಚಿಸಿದ್ದಾನೆ. ಇದರಿಂದ ಅನಾಮಿಕಾ ಕಾರಿನ ಬೊನೆಟ್ ಮೇಲೆಯೇ ಬಿದ್ದು, ಕೆಲವು ದೂರದವರೆಗೆ ಎಳೆದೊಯ್ಯಲ್ಪಟ್ಟಿದ್ದಾಳೆ. “ನಿನಗೆ ಏನು ಬೇಕೋ ಮಾಡಿಕೋ… ಮೊದಲು ಕಾರು ನಿಲ್ಲಿಸು” ಎಂದು ಆಕೆ ಚೀರಿಕೊಂಡರೂ ಶಹನವಾಜ್ ಕಾರು ನಿಲ್ಲಿಸಿಲ್ಲ. ಕಾರಿನಿಂದ ಆಕೆ ಕೆಳಗೆ ಬಿದ್ದ ತಕ್ಷಣ, ಆಕೆಯ ಮೇಲೆಯೇ ಕಾರನ್ನು ಚಲಾಯಿಸಿ ರಭಸವಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಆರೋಪಿ ಬಂಧನ, ಸಂತ್ರಸ್ತೆ ಆಸ್ಪತ್ರೆಗೆ:

ತೀವ್ರವಾಗಿ ಗಾಯಗೊಂಡಿರುವ ಅನಾಮಿಕಾ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಸಂತ್ರಸ್ತೆಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಶಹನವಾಜ್‌ನನ್ನು ಬಂಧಿಸಿದ್ದಾರೆ. ನಕಲಿ ಗುರುತು ಬಳಸಿ ಮೋಸ ಮಾಡಿದ ಆರೋಪದ ಬಗ್ಗೆಯೂ ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Related Articles