ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಲೋಕಸಭೆ ಚುನಾವಣೆ 2024: ಮತ ಚಲಾಯಿಸಿದ ರಾಷ್ಟ್ರಪತಿ ಮುರ್ಮು, ಸೋನಿಯಾ, ರಾಹುಲ್‌ಗಾಂಧಿ

On: May 25, 2024 3:37 PM
Follow Us:
---Advertisement---

ಹೊಸದಿಲ್ಲಿ: ಲೋಕಸಭೆ ಚುನಾವಣೆ 6ನೇ ಹಂತದ ಮತದಾನದಲ್ಲಿ ಈವರೆಗೆ ಹಲವು ಗಣ್ಯರು ಮತ ಚಲಾಯಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌, ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ , ರಾಹುಲ್‌ ಗಾಂಧಿ ತಮ್ಮ ಮತ ಚಲಾಯಿಸಿದರು.

ದಿಲ್ಲಿಯ ಗಣ್ಯ ಮತಗಟ್ಟೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿ ಮತ ಚಲಾಯಿಸಿದರು. ಇನ್ನೊಂದು ಮತಗಟ್ಟೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಮತ ಚಲಾಯಿಸಿ, ಇಂಕ್‌ ಹಾಕಿದ ತಮ್ಮ ಬೆರಳುಗಳನ್ನು ಪ್ರದರ್ಶಿಸಿದರು. ಪ್ರಿಯಾಂಕ ಗಾಂಧಿ ಹಾಗೂ ಅವರ ಮಕ್ಕಳಾದ ರೆಹಾನ್‌ ಮತ್ತು ಮಿರಾಯಾ ಕೂಡ ತಮ್ಮ ಮತಗಳನ್ನು ಚಲಾಯಿಸಿದರು. ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮತ ಚಲಾಯಿಸಿ, “ಮತದಾನವು ಒಂದು ಜವಾಬ್ದಾರಿ ಮತ್ತು ಅಧಿಕಾರವಾಗಿದೆ. ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ, ಸಕ್ರಿಯ ಮತ್ತು ಪರಿಣಾಮಕಾರಿ ಪ್ರಜಾಪ್ರಭುತ್ವವಾಗಿದೆ” ಎಂದು ಹೇಳಿದರು Ad

Join WhatsApp

Join Now

Join Telegram

Join Now

Leave a Comment