SUDDIKSHANA KANNADA NEWS/ DAVANAGERE/DATE:28_08_2025
ದಾವಣಗೆರೆ: ಜಮೀನಿನಲ್ಲಿ ಟ್ರ್ಯಾಕ್ಟರ್ ಚಲಾಯಿಸುವಾಗ ಟೈರ್ ಗೆ ಮುರಿದು ಬಿದ್ದ ವಿದ್ಯುತ್ ತಂತಿ ತೆಗೆಯಲು ಹೋದಾಗ ವಿದ್ಯುತ್ ಪ್ರವಹಿಸಿ ಉಪನ್ಯಾಸಕರು ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
READ ALSO THIS STORY: ಮುಖವಾಡ ಧರಿಸಿದ ವ್ಯಕ್ತಿ, ತಲೆಬುರುಡೆ, ಸಾಮೂಹಿಕ ಸಮಾಧಿ, ಸಂಚು: ಧರ್ಮಸ್ಥಳದ ಪಿತೂರಿ ಬಗ್ಗೆ ಎಲ್ಲೂ ಇಲ್ಲದ ಇಂಟ್ರೆಸ್ಟಿಂಗ್ ಮಾಹಿತಿ!
ನಗರದ ಸರಸ್ವತಿ ನಗರದಲ್ಲಿ ವಾಸ ಮಾಡುತ್ತಿದ್ದ ರಾಘವೇಂದ್ರ (36) ಮೃತಪಟ್ಟ ದುರ್ದೈವಿ. ಪತ್ನಿ, ಪುತ್ರ ಹಾಗೂ 2 ತಿಂಗಳ ಪುಟ್ಟ ಮಗಳನ್ನು ಅಗಲಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾಗಿಯೂ ರಾಘವೇಂದ್ರ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಊರಲ್ಲಿದ್ದ ತೋಟದಲ್ಲಿನ ಕೆಲಸಕ್ಕೆ ಹೋಗಿದ್ದರು. ಆಗ ಜಮೀನಿನ ಮೇಲೆ ವಿದ್ಯುತ್ ತಂತಿ ಅಳವಡಿಸಲಾಗಿತ್ತು. ತುಂಬಾ ಮೇಲೆ ಹಾಕಿರದ ಕಾರಣ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ಸಿಲುಕಿತ್ತು. ಬಳಿಕ ತುಂಡಾಗಿ ಕೆಳಗಡೆ ಬಿದ್ದಿತ್ತು. ಜಮೀನಿಗೆ ನೀರುಣಿಸಲು ಪಂಪ್ ಸೆಟ್ ಸೇರಿದಂತೆ ಇತರೆ ಉದ್ದೇಶಕ್ಕೆ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಇದನ್ನು ತೆಗೆಯುವಂತೆ ರಾಘವೇಂದ್ರ ಅವರು ಹಲವು ಬಾರಿ ಮನವಿ ಮಾಡಿದ್ದರೂ ಕೇಳಿರಲಿಲ್ಲ,
ಆದ್ರೆ, ಜಮೀನಿನಲ್ಲಿ ಟ್ರ್ಯಾಕ್ಟರ್ ಕೆಲಸ ಮಾಡುವಾಗ ತುಂಡಾಗಿ ಬಿದ್ದ ವೈರ್ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿತ್ತು. ಆದ್ರೆ, ವೈರ್ ನಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ಪರಿಣಾಮ ವಿದ್ಯುತ್ ಶಾಕ್ ತಗುಲಿ ಸಾವು ಕಂಡಿದ್ದಾರೆ. ರಾಘವೇಂದ್ರ ಅವರ ಸಾವಿಗೆ ಸಾವಿರಾರು ವಿದ್ಯಾರ್ಥಿಗಳು, ಸ್ನೇಹಿತರು, ಕುಟುಂಬದವರು, ಬಂಧುಬಳಗದವರು ಕಣ್ಣೀರು ಸುರಿಸಿದ್ದಾರೆ.