SUDDIKSHANA KANNADA NEWS/ DAVANAGERE/ DATE:12-08-2024
ದಾವಣಗೆರೆ: ವೈಜ್ಞಾನಿಕ ಪ್ರಕಟಣೆಗಳ ಅವಲೋಕನ ಕುರಿತು ವಿಶೇಷ ಉಪನ್ಯಾಸ ನೀಡಲು ಹಾಗೂ ಮತ್ತು ವೈಜ್ಞಾನಿಕ ಸಂಶೋಧನೆಗಳ ಒಡಂಬಡಿಕೆಗಾಗಿ ಲ್ಯಾಟಿನ್ ಅಮೆರಿಕ ಪ್ರಾಂತ್ಯದ ಚಿಲಿ ದೇಶದ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಡಿ. ಕುಂಬಾರ ಅವರು ಆಗಸ್ಟ್ 16ರಿಂದ ಪ್ರವಾಸ ಕೈಗೊಳ್ಳಲಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಚಿಲಿ ದೇಶದ ತಾರಾಪಾಕಾ ವಿಶ್ವವಿದ್ಯಾಲಯಗಳ ವೈಜ್ಞಾನಿಕ ಸಂಶೋಧನೆಗಳ ಪ್ರಕಟಣೆಗಳ ಪರಾಮರ್ಶೆ ನಡೆಸುವ ಜೊತೆಗೆ ಪ್ರಕಟಣೆಗಳನ್ನು ಕುರಿತು ಉಪನ್ಯಾಸ ನೀಡಲು ಪ್ರೊ.ಕುಂಬಾರ ಅವರಿಗೆ ಮೂರು ವಾರಗಳ ಕಾಲ ಸಂದರ್ಶನ ಪ್ರಾಧ್ಯಾಪಕರಾಗಿ ಉಪನ್ಯಾಸ ನೀಡಲು ಆಮಂತ್ರಣ ನೀಡಲಾಗಿದೆ. ಇದಲ್ಲದೆ, ಗ್ರಂಥಾಲಯ ವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆ, ಪ್ರವೃತ್ತಿಗಳು ಹಾಗೂ ತಂತ್ರಜ್ಞಾನಗಳ ಬಳಕೆ ಕುರಿತು ಅಲ್ಲಿಯ ವಿಜ್ಞಾನಿಗಳು, ವಿದ್ವಾಂಸದ ಜೊತೆಗೆ ಸಂವಾದ ನಡೆಸಲಿದ್ದಾರೆ. ವೈಜ್ಞಾನಿಕ ಸಂಶೋಧನೆಗೆ ಸಂಬAಧಿಸಿದAತೆ ಅಲ್ಲಿಯ ವಿಶ್ವವಿದ್ಯಾಲಯದ ತಜ್ಞರು, ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರೊ. ಕುಂಬಾರ ಅವರೊಂದಿಗೆ ಸಂಯೋಜಿತ ಸಂಶೋಧನೆ, ಪ್ರಕಟಣೆ, ಸಂಶೋಧನಾ ವಿನಿಮಯ, ವಿದ್ಯಾರ್ಥಿಗಳ ವಿನಿಮಯ ಅಧ್ಯಯನ ಹಾಗೂ ಇನ್ನಿತರ ವಿಷಯಗಳ ಕುರಿತು ಒಡಂಬಡಿಕೆಯ ಪ್ರಸ್ತಾವವನ್ನೂ ಚರ್ಚಿಸಲಾಗುವುದು ಎಂದು ತಾರಾಪಾಕಾ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ಎಮಿಲಿಯೊ ರೊಡ್ರಿಜ್ ರಾನ್ಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಗುರುತಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ತಾರಾಪಾಕಾ ವಿಶ್ವವಿದ್ಯಾನಿಲಯಗಳು ಈಗಾಗಲೇ10ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನೆಗಳಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಅದರ ಮುಂದುವರಿದ ಭಾಗವಾಗಿ ಸಂಶೋಧನಾ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ದಾವಣಗೆರೆ ವಿಶ್ವವಿದ್ಯಾನಿಲಯದ 20ಕ್ಕೂ ಹೆಚ್ಚು ಪ್ರಾಧ್ಯಾಪಕರಿಗೆ ಬಹುಶಿಸ್ತೀಯ ಅಧ್ಯಯನ, ಸಾಮಾಜಿಕ ಕಳಕಳಿಯ ಸಂಶೋಧನೆಗೆ ಪೂರಕವಾದ ವಾತಾವರಣ ಒದಗಿಸಲು ಮತ್ತು ಸಂಶೋಧನಾ ಸಹಭಾಗಿತ್ವವನ್ನು ಹೊಂದಲು ಪ್ರಸ್ತುತ ತಮ್ಮ ಭೇಟಿಯ ಸಹಕಾರಿ ಆಗಲಿದೆ.
ಹೆಚ್ಚಿನ ಸಂಶೋಧನೆಗೆ ಆದ್ಯತೆ ನೀಡುವ ಜೊತೆಗೆ, ದಾವಣಗೆರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಚಿಲಿಯಲ್ಲಿ ಸಂಶೋಧನಾ ಅಧ್ಯಯನ ಕೈಗೊಳ್ಳಲು ಮತ್ತು ತಾಂತ್ರಿಕ ವಿನಿಮಯ ಮಾಡಿಕೊಳ್ಳಲು ನೆರವಾಗಲಿದೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದ್ದಾರೆ.
ಪ್ರೊ.ಕುಂಬಾರ ಅವರೊಂದಿಗೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ ಅವರೂ ಸಂಶೋಧನಾ ಒಡಂಬAಡಿಕೆಗಾಗಿ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರೊ.ಮಹಾಬಲೇಶ್ವರ ಅವರು ಗಣಿತಶಾಸ್ತ್ರದಲ್ಲಿ ಹೊಸ ಮಾದರಿ ಸಂಶೋಧನಾ ವಿಧಾನ ಮತ್ತು ಪ್ರವೃತ್ತಿಗಳು ಹಾಗೂ ಗಣಿತಶಾಸ್ತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಪ್ರೊ.ಮಹಾಬಲೇಶ್ವರ ಅವರು ಈಗಾಗಲೇ ತಾರಾಪಾಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ಜೊತೆಗೆ ಜಂಟಿಯಾಗಿ ಗಣಿತಶಾಸ್ತ್ರದಲ್ಲಿ 15ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು, ಪ್ರಸ್ತುತ ೮ ಸಂಶೋಧನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರೊ.ಮಹಾಬಲೇಶ್ವರ ಅವರ ಮಾರ್ಗದರ್ಶನದಲ್ಲಿ ಚಿಲಿ ವಿಶ್ವವಿದ್ಯಾನಿಲಯದ ಸಹಭಾಗಿತ್ವದೊಂದಿಗೆ ಮೂವರು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.