SUDDIKSHANA KANNADA NEWS/ DAVANAGERE/ DATE:09-08-2024
ದಾವಣಗೆರೆ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತುಗಳು ಜಮೆಯಾಗಲು ಸ್ವಲ್ಪ ತಡವಾಗಿದ್ದು ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಸ್ಥಳೀಯ ಆನ್ಲೈನ್ ಸೆಂಟರ್ನವರು ಇಕೆವೈಸಿ ಮಾಡಿಸಬೇಕು, ಪಿಂಕ್ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಬರುತ್ತದೆ ಎಂಬ ಸುಳ್ಳು ವದಂತಿ ಹರಡುತ್ತಿದ್ದಾರೆ.
ಫಲಾನುಭವಿಗಳನ್ನು ನಂಬಿಸಿ ಅವರಿಂದ ಇಂತಿಷ್ಟು ಹಣ ಪಡೆದುಕೊಂಡು ಎಡಿಟ್ ಮಾಡಿ ಡೂಪ್ಲಿಕೇಟ್ ಪಿಂಕ್ ಸ್ಮಾರ್ಟ್ ಕಾರ್ಡ್ ಮಾಡಿಕೊಟ್ಟು ವಂಚಿಸುತ್ತಿದ್ದಾರೆ. ಆದ್ದರಿಂದ ಇಂತಹ ವಂಚಕರಿಂದ ಜಾಗೃತರಾಗಿರಲು ತಿಳಿಸಿ ಸರ್ಕಾರ ಇಂತಹ ಕಾರ್ಡ್ಗಳಿಗೆ ಯಾವುದೇ ಅಧಿಕೃತ ಆದೇಶ ನೀಡಿರುವುದಿಲ್ಲ ಎಂದು ಹೊನ್ನಾಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.