ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಾಡ್ತಿದ್ದದ್ದು ಮೆಹಂದಿ ಹಚ್ಚುವ ಹಚ್ಚೋದು: ಖತರ್ನಾಕ್ ಮಹಿಳೆಯರು ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಬಾಯ್ಬಿಟ್ಟದ್ದೇನು…?

On: October 31, 2024 6:09 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:31-10-2024

ದಾವಣಗೆರೆ: ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಹರ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳಿಯರನ್ನು ಬಂಧಿಸಲಾಗಿದೆ.

ಕಲ್ಬುರ್ಗಿಯ ಮೆಹಂದಿ ಹಾಕುವ ಕೆಲಸ ಮಾಡುತ್ತಿದ್ದ ಸುನೀತಾ (48) ಹಾಗೂ ರಾತಿಯಾ ಉಪಾಧ್ಯಾಯ (40) ಬಂಧಿತ ಕಳ್ಳಿಯರು.

ಹರಿಹರ ಪಟ್ಟಣದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಹತ್ತುವಾಗ ತಮ್ಮ ಕೊರಳಲ್ಲಿ ಇದ್ದ ಬಂಗಾರದ ಮಾಂಗಲ್ಯ ಚೈನ್ ಕಳ್ಳತನವಾದ ಬಗ್ಗೆ ಕುಮಾರಪಟ್ಟಣಂನ ಪವಿತ್ರ ಪಿ. ಎಂ. ಎಂಬುವವರು ಕಳೆದ ಫೆಬ್ರವರಿ 13ರಂದು ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನ್ನ ಸ್ವಂತ ಊರಾದ ನಾಗಸಮುದ್ರ ಗ್ರಾಮಕ್ಕೆ ಹೋಗಲು ಶಿವಮೊಗ್ಗ ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ತಮ್ಮ ಕೊರಳಲ್ಲಿದ್ದ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಗಮನಕ್ಕೆ ಬಾರದಂತೆ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದೂರಿನಲ್ಲಿ ಮಾಹಿತಿ ನೀಡಿದ್ದರು.

ಆರೋಪಿತರ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ ಹಾಗೂ ಮಂಜುನಾಥ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಬಸವರಾಜ್ ಬಿ. ಎಸ್. ಮಾರ್ಗದರ್ಶನದಲ್ಲಿ ಹರಿಹರ ಪೊಲೀಸ್
ಇನ್ ಸ್ಪೆಕ್ಟರ್ ದೇವಾನಂದ ನೇತೃತ್ವದಲ್ಲಿ ಪಿಎಸ್ ಐ ಗಳಾದ ಶ್ರೀಪತಿ ಗಿನ್ನಿ, ವಿಜಯ್ ಜಿ. ಎಸ್. ಹಾಗೂ  ಸಿಬ್ಬಂದಿಗಳನ್ನೊಳಗೊಂಡ ತಂಡವು ಮಹಿಳೆಯರಾದ ಸುನೀತಾ ಹಾಗೂ ರಾತಿಯಾ ಉಪಾಧ್ಯಾಯಳನ್ನು ಕಳ್ಳತನ ಮಾಡಲು ಬಂದಾಗ ಬಂಧಿಸಿದ್ದಾರೆ.

35 ಗ್ರಾಂ ತೂಕದ ಬಂಗಾರದ ಸರ ಹಾಗೂ ಶಿಕಾರಿಪುರ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 30 ಗ್ರಾಂ ತೂಕದ ಬಂಗಾರದ ಕೊರಳ ಚೈನ್ ಸೇರಿ ಒಟ್ಟು 4,50,000 ರೂ ಮೌಲ್ಯದ 65 ಗ್ರಾಂ ತೂಕದ ಬಂಗಾರದ ಆಭರಣ ಗಳನ್ನು
ವಶಪಡಿಸಿಕೊಳ್ಳಳಾಗಿದೆ.

ಕಳ್ಳತನ ಮಾಡಿದ್ದ ಆರೋಪಿತೆಯರ ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹರಿಹರ ನಗರ ಠಾಣೆಯ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ರವಿ.ಆರ್, ಸಿದ್ದೇಶ್, ರವಿನಾಯ್ಕ್, ರುದ್ರಸ್ವಾಮಿ, ಹನುಮಂತ ಗೋಪನಾಳ,
ರವಿ, ಸಿದ್ದರಾಜು, ಪ್ರೇಮಾ ಕರಿಯಪ್ಳ, ರೇಣುಕಾ, ಕವಿತಾ, ಕಾಳಮ್ಮ ಅವರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment