Home ದಾವಣಗೆರೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 1600 ಸಶಸ್ತ್ರ ಪೊಲೀಸ್ ಸಿಬ್ಬಂದಿ ನೇಮಕಾತಿ! ಜುಲೈ 22ರ ನಾಳೆಯೇ ಅರ್ಜಿ ಸಲ್ಲಿಕೆಗೆ ಕೊನೆ ದಿನ!
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 1600 ಸಶಸ್ತ್ರ ಪೊಲೀಸ್ ಸಿಬ್ಬಂದಿ ನೇಮಕಾತಿ! ಜುಲೈ 22ರ ನಾಳೆಯೇ ಅರ್ಜಿ ಸಲ್ಲಿಕೆಗೆ ಕೊನೆ ದಿನ!

Share
ಕರ್ನಾಟಕ ಪೊಲೀಸ್
Share

ಬೆಂಗಳೂರು / ದಾವಣಗೆರೆ: ಕರ್ನಾಟಕ ಪೊಲೀಸ್ (KSP) ಇಲಾಖೆಯು ಖಾಲಿ ಇರುವ 1,600 ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ (CAR/DAR) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಉಳಿದಿರುವುದು ಒಂದೇ ದಿನ. ಅಂದರೆ ಜುಲೈ 22ರ ನಾಳೆಯೇ ಕೊನೆ ದಿನವಾಗಿದ್ದು, ತಡ ಮಾಡದೇ ಅರ್ಜಿ ಸಲ್ಲಿಸಿ.

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ 12ನೇ ತರಗತಿ (PUC) ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 22, 2026ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:

ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್ (KSP)

ಹುದ್ದೆಯ ಹೆಸರು: ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ (CAR/DAR)

ಒಟ್ಟು ಹುದ್ದೆಗಳು: 1,600

ಮಿಕ್ಕಿದ ವೃಂದ (RPC): 1,421 ಹುದ್ದೆಗಳು

ಕಲ್ಯಾಣ ಕರ್ನಾಟಕ (KK): 179 ಹುದ್ದೆಗಳು

ವೇತನ ಶ್ರೇಣಿ: ತಿಂಗಳಿಗೆ ₹37,500 ರಿಂದ ₹76,100/-

ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ / ಪಿಯುಸಿ (PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು.

ಸಾಮಾನ್ಯ ವರ್ಗ: ಗರಿಷ್ಠ 33 ವರ್ಷ

OBC / SC / ST ಅಭ್ಯರ್ಥಿಗಳು: ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಲಭ್ಯವಿರುತ್ತದೆ.

ಆಯ್ಕೆ ಪ್ರಕ್ರಿಯೆ ಹಾಗೂ ಪರೀಕ್ಷಾ ದಿನಾಂಕ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (OMR ಆಧಾರಿತ), ದೈಹಿಕ ಸಾಮರ್ಥ್ಯ ಪರೀಕ್ಷೆ (PET/PST) ಹಾಗೂ ವೈದ್ಯಕೀಯ ತಪಾಸಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಲಿಖಿತ ಪರೀಕ್ಷೆ: 100 ಅಂಕಗಳಿಗೆ 90 ನಿಮಿಷಗಳ ಕಾಲ ನಡೆದು, 0.25 ಋಣಾತ್ಮಕ (Negative) ಅಂಕಗಳಿರುತ್ತವೆ.

ಪರೀಕ್ಷಾ ದಿನಾಂಕ: 06-ಸೆಪ್ಟೆಂಬರ್-2026

ಅರ್ಜಿ ಶುಲ್ಕ:

ಸಾಮಾನ್ಯ ಹಾಗೂ OBC ಅಭ್ಯರ್ಥಿಗಳಿಗೆ: ₹750/-

SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ: ₹500/-

ಪಾವತಿ ವಿಧಾನ: ಆನ್‌ಲೈನ್

ಮುಖ್ಯ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 22-ಜೂನ್-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-ಜುಲೈ-2026

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 24-ಜುಲೈ-2026

ಲಿಖಿತ ಪರೀಕ್ಷೆ ದಿನಾಂಕ: 06-ಸೆಪ್ಟೆಂಬರ್-2026

ಹೆಚ್ಚಿನ ಮಾಹಿತಿಗಾಗಿ KSP ಅಧಿಕೃತ ವೆಬ್‌ಸೈಟ್

ksp.karnataka.gov.in ಅಥವಾ cetonline.karnataka.gov.in/kea ಗೆ ಭೇಟಿ ನೀಡಿ.

Share

Leave a comment

Leave a Reply

Your email address will not be published. Required fields are marked *