ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೆ-ಸೆಟ್‌ ಪರೀಕ್ಷೆಯ ಫಲಿತಾಂಶ ಪ್ರಕಟ

On: May 29, 2024 5:38 PM
Follow Us:
---Advertisement---

ಬೆಂಗಳೂರು- ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹಾಯಕ ಪ್ರಾಧ್ಯಾಪಕರ 2023ರ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ. ಶೇ.7.01ರಷ್ಟು ಕೆ-ಸೆಟ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.

50262 ಪುರುಷ, 66656 ಮಹಿಳಾ, 385 ತೃತೀಯ ಲಿಂಗದವರು ಸೇರಿದಂತೆ 1,17,303 ಅಭ್ಯರ್ಥಿಗಳು ಕೆಸೆಟ್‌ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು.

ಇವರಲ್ಲಿ ಒಟ್ಟು 95,201 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6675 ಮಂದಿ ಅರ್ಹತೆ ಪಡೆದಿದ್ದಾರೆ.

ಈ ಪೈಕಿ ಶೇ.8.27 ರಷ್ಟು ಪುರುಷ, ಶೇ.5.90ರಷ್ಟು ಮಹಿಳೆ, ಶೇ.43.89ರಷ್ಟು ತೃತೀಯ ಲಿಂಗದವರು ಅರ್ಹತೆ ಪಡೆದಿದ್ದು, ಒಟ್ಟಾರೆ ಶೇ.7.01ರಷ್ಟು ಸಹಾಯಕ ಪ್ರಾಧ್ಯಾಪಕರ ಅರ್ಹತೆ ಪಡೆದಿದ್ದಾರೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಮೀಸಲಾತಿ ಬಯಸದವರು 797 ಮಂದಿ ಅರ್ಹತೆ ಪಡೆದಿದ್ದು, ಶೇ.6.82ರಷ್ಟು ಮಂದಿ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಶೇ.6.06, ಎಸ್ಸಿ, ಶೇ.7.41, ಪ್ರವರ್ಗ -1 ಶೇ.7.42, ಪ್ರವರ್ಗ -2ಎ ಶೇ.9.06, ಪ್ರವರ್ಗ 2ಬಿ ಶೇ.8.59, ಪ್ರವರ್ಗ 3ಎ ಶೇ.6.59, ಪ್ರವರ್ಗ 3ಬಿ ಶೇ. 5.75ರಷ್ಟು ಅರ್ಹತೆ ಹೊಂದಿದ್ದಾರೆ. ವಿಕಲಚೇತನರು 350 ಮಂದಿ ಅರ್ಹತೆ ಪಡೆದಿದ್ದು, ಶೇ.21.94ರಷ್ಟು ಅರ್ಹತೆ ಪಡೆದಿದ್ದಾರೆ.

Join WhatsApp

Join Now

Join Telegram

Join Now

Leave a Comment