ಬೆಂಗಳೂರು: ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿರುವ (RR Nagar) ಸ್ಯಾಂಡಲ್‌ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಕೃಷಿ ತಾಪಂಡ ಅವರ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಆರ್‌ಆರ್ ನಗರದ ಪ್ರತಿಷ್ಠಿತ ‘ಎಲಿಗಂಟ್ಸ್ ಅಪಾರ್ಟ್‌ಮೆಂಟ್’ ನಲ್ಲಿ ಈ ದುರಂತ ಸಂಭವಿಸಿದ್ದು, ಸ್ಥಳಕ್ಕೆ ಧಾವಿಸಿರುವ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ!
ಲಭ್ಯವಿರುವ ಮಾಹಿತಿ ಪ್ರಕಾರ, ವೈಶಾಕ್ ಬುಧವಾರ ರಾತ್ರಿ ನಟಿ ಕೃಷಿ ತಾಪಂಡ ಅವರ ಫ್ಲಾಟ್‌ಗೆ ಬಂದಿದ್ದರು. ಘಟನೆ ನಡೆದ ಸಂದರ್ಭದಲ್ಲಿ ನಟಿ ಕೃಷಿ ತಾಪಂಡ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ವೈಶಾಕ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ತಡವಾಗಿ ಬೆಳಕಿಗೆ ಬಂದ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸಾವಿಗೂ ಮುನ್ನ ನಟಿಗೆ ಕೊನೆಯ ಕರೆ?
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವೈಶಾಕ್ ಅವರು ನಟಿ ಕೃಷಿ ತಾಪಂಡ ಅವರಿಗೆ ಕರೆ ಮಾಡಿ, ತಾನು ಬದುಕು ಕೊನೆಗಾಣಿಸುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ನಟಿ ತಕ್ಷಣವೇ ತನ್ನ ಕುಟುಂಬಸ್ಥರು ಹಾಗೂ ಪರಿಚಿತರಿಗೆ ಮಾಹಿತಿ ನೀಡಿದರಾದರೂ, ಅಷ್ಟರಲ್ಲೇ ದುರಂತ ಸಂಭವಿಸಿತ್ತು ಎಂದು ವರದಿಗಳು ತಿಳಿಸಿವೆ.
ಹಳೇ ಕ್ರಿಮಿನಲ್ ಕೇಸ್ ಮತ್ತು ಖಿನ್ನತೆಯ ಹಿನ್ನೆಲೆ
ಮೃತ ವೈಶಾಕ್ ಅವರು ಆಟೋಮೊಬೈಲ್ ಮತ್ತು ಗ್ಯಾರೇಜ್ ವ್ಯವಹಾರ ನಡೆಸುತ್ತಿದ್ದ ಯಶಸ್ವಿ ಉದ್ಯಮಿಯಾಗಿದ್ದರು. ಅವರಿಗೆ ಮದುವೆಯಾಗಿ 15 ವರ್ಷಗಳಾಗಿದ್ದು, 14 ವರ್ಷದ ಒಬ್ಬ ಮಗನೂ ಇದ್ದಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವೈಮನಸ್ಸು ಹಾಗೂ ಉದ್ಯಮಿ ಅರವಿಂದ್ ರೆಡ್ಡಿ ಅವರಿಗೆ ಜೀವಬೆದರಿಕೆ ಹಾಕಿದ ಪ್ರಕರಣದಲ್ಲಿ ಎಚ್‌ಎಎಲ್ (HAL) ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಜೈಲಿನಿಂದ ಹೊರಬಂದ ನಂತರ ತೀವ್ರ ಮಾನಸಿಕ ಖಿನ್ನತೆ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸದ್ಯ ಅಸ್ವಾಭಾವಿಕ ಸಾವು (Unnatural Death) ಎಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ವೈಶಾಕ್ ಅವರ ಮೊಬೈಲ್ ಕರೆಗಳ ದಾಖಲೆ (CDR) ಹಾಗೂ ಕೊನೆಯ ಸಂದೇಶಗಳನ್ನು ತೀವ್ರವಾಗಿ ಜಾಲಾಡುತ್ತಿದ್ದಾರೆ.
- Bangalore crime news
- Businessman Vaishak death case
- HAL police station case
- Krishi Thapanda
- Krishi Thapanda house incident
- RR Nagar apartment suicide
- Sandalwood actress Krishi Thapanda
- Vaishak Aravind Reddy case
- Vaishak Upadhyaya suicide
- ಅರವಿಂದ್ ರೆಡ್ಡಿ ಬೆದರಿಕೆ ಪ್ರಕರಣ
- ಆರ್ ಆರ್ ನಗರ ಅಪಾರ್ಟ್‌ಮೆಂಟ್ ಸಾವು
- ಉದ್ಯಮಿ ವೈಶಾಕ್ ಆತ್ಮಹತ್ಯೆ
- ಕೃಷಿ ತಾಪಾಂಡ
- ಕೃಷಿ ತಾಪಾಂಡ ಗೆಳೆಯ ವೈಶಾಕ್
- ರಾಜರಾಜೇಶ್ವರಿ ನಗರ ಪೊಲೀಸ್ ತನಿಖೆ
- ವೈಶಾಕ್ ಉಪಾಧ್ಯಾಯ ಸಾವು
- ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಾಂಡ
- ಸ್ಯಾಂಡಲ್‌ವುಡ್ ಬ್ರೇಕಿಂಗ್ ನ್ಯೂಸ್





Leave a comment